For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಟ್ರೋಫಿ ಅನಾವರಣ: ಯಾರ ಪಾಲಾಗಲಿದೆ ಈ ಆಕರ್ಷಕ ಟ್ರೋಫಿ

  |

  ಬಿಗ್ ಬಾಸ್ ಕನ್ನಡ ಸೀಸನ್ 8 ಪ್ರಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಆದರೆ ಆಗಲೇ ಹಿಂದಿಯಲ್ಲಿ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ವಾರ ಪ್ರಾರಂಭವಾಗಿದ್ದು, ಅಂತಿಮ ದಿನಕ್ಕೆ ದಿನಗಣನೆ ಆರಂಭವಾಗಿದೆ. ಹೌದು ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಬಿಗ್ ಬಾಸ್ ಸೀಸನ್ 14 ಅಂತಿಮ ಹಂತಕ್ಕೆ ತಲುಪಿದೆ.

  ಈ ಬಾರಿಯ ಬಿಗ್ ಬಾಸ್ ವಿನ್ನರ್ ಪಟ್ಟ ಯಾರಿಗೆ ಎಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಮತ್ತೊಂದೆಡೆ ಈ ಬಾರಿಯ ಬಿಗ್ ಬಾಸ್ ಟ್ರೋಫಿ ಹೇಗಿರಲಿದೆ ಎನ್ನುವ ಕುತೂಹಲ ಕೂಡ ಎಲ್ಲರಲ್ಲಿತ್ತು. ಇದೀಗ ಟ್ರೋಫಿ ಕುತೂಹಲಕ್ಕೆ ತೆರೆಬಿದ್ದಿದೆ.

  ಮಲಯಾಳಂ ಬಿಗ್‌ಬಾಸ್ ಆರಂಭ: ಇಲ್ಲಿದೆ ಸ್ಪರ್ಧಿಗಳ ಪಟ್ಟಿ

  ಹೌದು, ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಈ ಬಾರಿಯ ಆಕರ್ಷಕ ಟ್ರೋಫಿಯನ್ನು ಅನಾವರಣ ಮಾಡಿದ್ದಾರೆ. ಕಳೆದ ವಾರ ವೀಕೆಂಡ್ ಎಪಿಸೋಡ್ ನಲ್ಲಿ ಸಲ್ಮಾನ್ ಖಾನ್ ಟ್ರೋಫಿ ಅನಾವರಣ ಮಾಡುವ ಮೂಲಕ ಸ್ಪರ್ಧಿಗಳಲ್ಲಿ ಗೆಲುವಿನ ಆಸೆಯನ್ನು ಹೆಚ್ಚಿಸಿದ್ದಾರೆ. ಅಂದಹಾಗೆ ಟ್ರೋಫಿಯನ್ನು ಕ್ಯಾಮರಾಗೆ ತೋರಿಸಿ ವಿಜೇತರು ಈ ಟ್ರೋಫಿಯನ್ನು ಮನೆಗೆ ಎತ್ತಿಕೊಂಡು ಹೋಗುತ್ತಾರೆ ಎಂದು ಸಲ್ಮಾನ್ ಹೇಳಿದ್ದಾರೆ.

  ಈ ಬಾರಿಯ ಟ್ರೋಫಿಯಲ್ಲಿ ಬಿಗ್ ಬಾಸ್ ಕಣ್ಣು ಇದ್ದು, ನೋಡಲು ಆಕರ್ಷಕವಾಗಿದೆ. ಇದನ್ನು ನೋಡುತ್ತಿದ್ದಂತೆ ಸ್ಪರ್ಧಿಗಳು ವಾವ್ ಎಂದು ಅಚ್ಚರಿ ಪಟ್ಟಿದ್ದಾರೆ. ಬಿಗ್ ಮನೆಯಲ್ಲಿ ಸದ್ಯ ರುಬಿನಾ, ಅಲಿ ಗೋನಿ, ರಾಹುಲ್ ವೈದ್ಯ, ರಾಖಿ ಸಾವಂತ್ ಮತ್ತು ನಿಕ್ಕಿ ತಂಬೋಲಿ ಫಿನಾಲೆ ವಾರದಲ್ಲಿದ್ದಾರೆ. ಇವರಲ್ಲಿ ಈ ಬಾರಿಯ ಆಕರ್ಷಕ ಟ್ರೋಫಿ ಯಾರ ಪಾಲಾಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

  ಕಳೆದ ವಾರಕ್ಕಿಂತ ಈ ಬಾರಿ ಬಿಗ್ ಬಾಸ್ ಅವದಿ ಜಾಸ್ತಿ ಮಾಡಲಾಗಿದೆ. ಅಂದಹಾಗೆ ಬಾರಿ ಈ ಬಿಗ್ ಬಾಸ್ ನಡೆಸುವುದು ಒಂದು ಜಾಲೆಂಜಿಂಗ್ ಆಗಿತ್ತು. ಕೊರೊನಾ ಹಾವಳಿಯ ಪರಿಣಾಮ ಕಟ್ಟು ನಿಟ್ಟಿನ ನಿಯಮಗಳನ್ನು ಪಾಲನೆ ಮಾಡಲಾಗಿದೆ. ಕೊರೊನಾ ನಡುವೆಯೂ ಹಿಂದಿ ಬಿಗ್ ಬಾಸ್ ಯಶಸ್ವಿಯಾಗಿ ಮುಕ್ತಾಯದ ಹಂತದ ವರೆಗೂ ಬಂದಿದೆ.

  ಇದೀಗ ಕನ್ನಡ ಬಿಗ್ ಬಾಸ್ ಹೇಗಿರಲಿದೆ ಎನ್ನುವುದು ಎಲ್ಲರ ಕುತೂಹಲ. ಈ ಬಾರಿ ಬಿಗ್ ಮನೆಯಲ್ಲಿ ಯಾರೆಲ್ಲ ಇರಲಿದ್ದಾರೆ ಎಂದು ಪ್ರೇಕ್ಷಕರು ಕಾತರಿಂದ ಕಾಯುತ್ತಿದ್ದಾರೆ. ಇದೇ ತಿಂಗಳು 28ರಿಂದ ಕನ್ನಡ ಬಿಗ್ ಬಾಸ್ ಪ್ರಾರಂಭ ವಾಗುತ್ತಿದ್ದು, ಹೇಗಿರಲಿದೆ ಎಂದು ಕಾದುನೋಡಬೇಕಿದೆ.

  English summary
  Salman Khan reveals the first glimpse of bigg boss 14 winner trophy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X