ವಿದೇಶಿ ಪ್ರವಾಸ ಮಾಡಿದ್ದೀರಾ? ಹಾಗಾದರೆ 'ಬಿಗ್ ಬಾಸ್' ಮನೆಗೆ ಪ್ರವೇಶವಿಲ್ಲ

ಕಿರುತೆರೆ ಲೋಕದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಅಂದುಕೊಂಡಂತೆ ಆಗಿದ್ದರೆ ಈಗಾಗಲೆ ಬಿಗ್ ಬಾಸ್ ಗೆ ಎಲ್ಲಾ ತಯಾರಿ ನಡೆಯಬೇಕಿತ್ತು. ಆದರೆ ಕೊರೊನಾ ಹಾವಳಿಯ ಪರಿಣಾಮ ಈ ಬಾರಿಯ ಬಿಗ್ ಬಾಸ್ ತಡವಾಗುತ್ತಿದೆ. ಆದರೂ ಹಿಂದಿಯಲ್ಲಿ ಬಿಗ್ ಬಾಸ್ 14ಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಬಿಗ್ ಬಾಸ್ ನಡೆಯುತ್ತೋ, ಇಲ್ಲವೋ ಎನ್ನುವ ಅನುಮಾನ ಕಿರುತೆರೆ ಪ್ರೇಕ್ಷಕರಲ್ಲಿ ಇತ್ತು. ಆದರೆ ಆಯೋಜಕರು ಬಿಗ್ ಬಾಸ್ ನಡೆಯುತ್ತೆ ಎನ್ನುವ ಸೂಚನೆ ನೀಡಿದ್ದಾರೆ. ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ, ಸುರಕ್ಷತೆಯೊಂದಿಗೆ ಬಿಗ್ ಬಾಸ್ ನಡೆಸಲು ಆಯೋಜಕರು ಸಜ್ಜಾಗುತ್ತಿದ್ದಾರೆ. ಮುಂದೆ ಓದಿ..

ವಿದೇಶಿ ಪ್ರವಾಸ ಮಾಡಿದವರಿಗೆ ಇಲ್ಲ ಪ್ರವೇಶ

ವಿದೇಶಿ ಪ್ರವಾಸ ಮಾಡಿದವರಿಗೆ ಇಲ್ಲ ಪ್ರವೇಶ

ಬಿಗ್ ಬಾಸ್ ಮನೆಯೊಳಗೆ ಎಂಟ್ರಿಯಾಗಬೇಕಂದರೆ ಒಂದಿಷ್ಟು ನಿಯಮಗಳು ಇರುತ್ತೆ. ಆದರೆ ಈ ಬಾರಿಯ ನಿಯಮಗಳಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ತರಲಾಗಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿಯಾಗಬೇಕಾದರೆ ಸ್ಪರ್ಧಿಗಳು ಯಾವುದೆ ಕಾರಣಕ್ಕೂ ವಿದೇಶಿ ಪ್ರವಾಸ ಮಾಡಬಾರದಂತೆ. ಕೊರಾನಾ ವೈರಸ್ ಹಾವಳಿ ಹೆಚ್ಚಾಗಿರುವ ಪರಿಣಾಮ ವಿದೇಶಕ್ಕೆ ಹೋಗಿಬಂದವರನ್ನು ಬಿಗ್ ಮನೆಯೊಳಗೆ ಸೇರಿಸಿಕೊಳ್ಳುವುದು ಸೂಕ್ತವಲ್ಲ ಎನ್ನುವುದು ಆಯೋಜಕರ ಪ್ಲಾನ್.

ತಡವಾಗಿ ನಡೆಯಲಿದೆ ಬಿಗ್ ಬಾಸ್

ತಡವಾಗಿ ನಡೆಯಲಿದೆ ಬಿಗ್ ಬಾಸ್

ಸಾಮಾನ್ಯವಾಗಿ ಬಿಗ್ ಬಾಸ್ ಅಕ್ಟೋಬರ್ ನಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಪರಿಣಾಮ ಮಾಮೂಲಿಗಿಂತ ಈ ಬಾರಿ ಒಂದು ತಿಂಗಳು ತಡವಾಗಿ ಪ್ರಾರಂಭವಾಗಲಿದೆಯಂತೆ. ಅಂದರೆ ನವೆಂಬರ್ ನಲ್ಲಿ ಬಿಗ್ ಬಾಸ್ ಪ್ರಾರಂಭವಾಗುವ ಸಾಧ್ಯತೆ ಇದೆ.

ಆನ್ ಲೈನ್ ಮೂಲಕ ಆಡಿಷನ್

ಆನ್ ಲೈನ್ ಮೂಲಕ ಆಡಿಷನ್

ಕೊರೊನಾ ಹಾವಳಿಯ ಪರಿಣಾಮ ಒಂದಿಷ್ಟು ಬದಲಾವಣೆಯೊಂದಿಗೆ ಬಿಗ್ ಬಾಸ್ ಸೀಸನ್ 14 ಪ್ರಾರಂಭವಾಗುತ್ತಿದೆ. ಸ್ಪರ್ಧಿಗಳ ಆಯ್ಕೆ ಈ ಬಾರಿ ಆನ್ ಲೈನ್ ಮೂಲಕವೇ ನಡೆಯಲಿದೆಯಂತೆ. ಈ ಬಾರಿ ಸೆಲೆಬ್ರಿಟಿಗಳ ಜೊತೆ ಸಾಮಾನ್ಯ ಜನರು ಸಹ ಬಿಗ್ ಬಾಸ್ ಮನೆಯಲ್ಲಿ ಇರಲಿದ್ದಾರಂತೆ. ಅಕ್ಟೋಬರ್ ನಲ್ಲಿ ಬಿಗ್ ಬಾಸ್ ಪ್ರಕ್ರಿಯೆ ಪ್ರಾರಂಭವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

13 ಮಂದಿ ಸೆಲೆಬ್ರಿಟಿಗಳು, 3 ಮಂದಿ ಸಾಮಾನ್ಯರು

13 ಮಂದಿ ಸೆಲೆಬ್ರಿಟಿಗಳು, 3 ಮಂದಿ ಸಾಮಾನ್ಯರು

ಆಡಿಷನ್ ನಲ್ಲಿ ಕೊನೆಯದಾಗಿ 30 ಜನರ ಶಾರ್ಟ್ ಲಿಸ್ಟ್ ಮಾಡಲಾಗುತ್ತೆ. ಅಂತಿಮವಾಗಿ ಅದರಲ್ಲಿ 16 ಮಂದಿಯನ್ನು ಆಯ್ಕೆ ಮಾಡಿ ಬಿಗ್ ಬಾಸ್ ಮನೆಯೊಳಗೆ ಕಳುಹಿಸುತ್ತಾರೆ. ಇದರಲ್ಲಿ 13 ಮಂದಿ ಸೆಲೆಬ್ರಿಟಿಗಳು ಮತ್ತು 3 ಮಂದಿ ಸಾಮಾನ್ಯ ವ್ಯಕ್ತಿಗಳು ಇರಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ಸ್ಪರ್ಧಿಗಳಿಗೆ ಕೊರೊನಾ ಪರೀಕ್ಷೆ ಕಡ್ಡಾಯ

ಸ್ಪರ್ಧಿಗಳಿಗೆ ಕೊರೊನಾ ಪರೀಕ್ಷೆ ಕಡ್ಡಾಯ

ಮುನ್ನೆಚ್ಚರಿಕೆ ಕ್ರಮಗಳ ಜೊತೆ ಈ ಬಾರಿಯ ಬಿಗ್ ಬಾಸ್ ಪ್ರಾರಂಭವಾಗಲಿದೆ. ಆಯ್ಕೆಯಾದ ಸ್ಪರ್ಧಿಗಳನ್ನು ಮೊದಲು ಕೋವಿಗ್-19 ಪರೀಕ್ಷೆಗೆ ಒಳಪಡಿಸಲಾಗುವುದು. ಸಂಪೂರ್ಣ ಸೆಟ್ ಮತ್ತು ಬಿಗ್ ಬಾಸ್ ಮನೆಯನ್ನು ಸ್ವಚ್ಛಗೊಳಿಸಲಾಗುತ್ತೆ. ವಿಶೇಷ ಅಂದರೆ ಸಲ್ಮಾನ್ ಖಾನ್ ಬಾಂದ್ರಾ ಮನೆಯಿಂದನೆ ನೇರವಾಗಿ ಬಿಗ್ ಬಾಸ್ ನಡೆಸಿಕೊಡುವ ಚಿತ್ರೀಕರಣ ಸೆಟ್ ಗೆ ತೆರಳಲಿದ್ದಾರೆ. ಹೀಗೆ ಸಾಕಷ್ಟು ಮುಜಾಗೃತ ಕ್ರಮಗಳ ಜೊತೆಗೆ ಬಿಗ್ ಬಾಸ್ 14 ನಡೆಸಿಕೊಡಲು ಸಜ್ಜಾಗಿದ್ದಾರೆ ಆಯೋಜಕರು. ಆದರೆ ಹೇಗೆ ನಡೆಯಲಿದೆ, ಯಾರೆಲ್ಲ ಇರಲಿದ್ದಾರೆ ಎನ್ನುವುದನ್ನು ಕಾದುನೋಡುಬೇಕು.

More from Filmibeat

English summary
Bigg Boss 14: Salman Khan hosted bigg boss 14 not access to Participate with international travel history.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X