For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಜೊತೆ ಕಪಿಲ್ ಶರ್ಮಾ ಶೋನಲ್ಲಿ ನಕ್ಕು-ನಲಿದ ಕಿಚ್ಚ ಸುದೀಪ್

  |
  Kiccha Sudeep in The Kapil Sharma Show for Dabangg 3 promotion | FILMIBEAT KANNADA

  ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ಅಭಿನಯದ 'ದಬ್ಬಂಗ್-3' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಡಿಸೆಂಬರ್ 20 ರಂದು 'ದಬ್ಬಂಗ್-3' ಚಿತ್ರ ಬಿಡುಗಡೆ ಆಗಲಿದೆ. ಗ್ರ್ಯಾಂಡ್ ರಿಲೀಸ್ ಆಗಲಿರುವ 'ದಬ್ಬಂಗ್-3' ಚಿತ್ರದ ಪ್ರಮೋಷನ್ ಕೂಡ ಸಖತ್ತಾಗಿ ನಡೆಯುತ್ತಿದೆ.

  ಪ್ರಭುದೇವ ನಿರ್ದೇಶನ ಮಾಡಿರುವ 'ದಬ್ಬಂಗ್-3' ಚಿತ್ರದ ಪ್ರಚಾರ ಸಲುವಾಗಿ ಚಿತ್ರತಂಡ 'ದಿ ಕಪಿಲ್ ಶರ್ಮಾ ಶೋ'ನಲ್ಲಿ ಭಾಗವಹಿಸಿದೆ.

  ಹಿಂದಿ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ದಿ ಕಪಿಲ್ ಶರ್ಮಾ ಶೋ'. ಹೆಚ್ಚು ಟಿ.ಆರ್.ಪಿ ಹೊಂದಿರುವ ಈ ಫ್ಯಾಮಿಲಿ ಶೋನಲ್ಲಿ ತಮ್ಮ ಚಿತ್ರವನ್ನು ಪ್ರಮೋಟ್ ಮಾಡಲು ಸಲ್ಮಾನ್ ಖಾನ್ ಮುಂದಾಗಿದ್ದಾರೆ.

  ಕಪಿಲ್ ಶರ್ಮಾ ಶೋನಲ್ಲಿ ದಬ್ಬಂಗ್ ಟೀಮ್

  ಕಪಿಲ್ ಶರ್ಮಾ ಶೋನಲ್ಲಿ ದಬ್ಬಂಗ್ ಟೀಮ್

  'ದಿ ಕಪಿಲ್ ಶರ್ಮಾ ಶೋ' ಶೋನಲ್ಲಿ ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹ, ಅರ್ಬಾಝ್ ಖಾನ್, ಕಿಚ್ಚ ಸುದೀಪ್ ಮತ್ತು ಪ್ರಭುದೇವ ಪಾಲ್ಗೊಂಡಿದ್ದಾರೆ. ಕಪಿಲ್ ಶರ್ಮಾ ನೀಡುವ ಕಚಗುಳಿಗೆ ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಕ್ಕು-ನಲಿದಿದ್ದಾರೆ.

  'ದಬ್ಬಂಗ್-3' ಚಿತ್ರವನ್ನ ಬ್ಯಾನ್ ಮಾಡಿ: ಸಲ್ಮಾನ್ ಚಿತ್ರಕ್ಕೆ ನೆಟ್ಟಿಗರ ಛೀಮಾರಿ.!'ದಬ್ಬಂಗ್-3' ಚಿತ್ರವನ್ನ ಬ್ಯಾನ್ ಮಾಡಿ: ಸಲ್ಮಾನ್ ಚಿತ್ರಕ್ಕೆ ನೆಟ್ಟಿಗರ ಛೀಮಾರಿ.!

  ಇದೇ ಮೊದಲಲ್ಲ.!

  ಇದೇ ಮೊದಲಲ್ಲ.!

  ಕಾಮಿಡಿ ಕಿಂಗ್ ಕಪಿಲ್ ಶರ್ಮಾ ಶೋನಲ್ಲಿ ಸುದೀಪ್ ಕಾಣಿಸಿಕೊಂಡಿರುವುದು ಇದೇ ಮೊದಲ ಬಾರಿಗೆ ಅಲ್ಲ. ಕೆಲ ತಿಂಗಳುಗಳ ಹಿಂದೆಯಷ್ಟೇ ಸಿಸಿಎಲ್-ಟಿ10 ಆರಂಭವಾದಾಗ, ಅದರ ಪ್ರಚಾರದ ನಿಮಿತ್ತ ಸುದೀಪ್, ಸುನೀಲ್ ಶೆಟ್ಟಿ ಸೇರಿದಂತೆ ಹಲವರು ಕಪಿಲ್ ಶರ್ಮಾ ಶೋನಲ್ಲಿ ಹಾಜರಿದ್ದರು.

  ಕಪಿಲ್ ಶರ್ಮಾ ಶೋನಲ್ಲಿ ಸುದೀಪ್ ಸಂಚಿಕೆ ನೋಡಲು ಮರೆಯದಿರಿಕಪಿಲ್ ಶರ್ಮಾ ಶೋನಲ್ಲಿ ಸುದೀಪ್ ಸಂಚಿಕೆ ನೋಡಲು ಮರೆಯದಿರಿ

  ಯಾವಾಗ ಪ್ರಸಾರ ಆಗುತ್ತೆ.?

  ಯಾವಾಗ ಪ್ರಸಾರ ಆಗುತ್ತೆ.?

  'ದಿ ಕಪಿಲ್ ಶರ್ಮಾ ಶೋ'ನಲ್ಲಿ 'ದಬ್ಬಂಗ್-3' ತಂಡ ಭಾಗವಹಿಸಿರುವ ಸಂಚಿಕೆಯ ಚಿತ್ರೀಕರಣ ಮುಗಿದಿದೆ ಅಷ್ಟೇ. ಕಾರ್ಯಕ್ರಮ ಯಾವಾಗ ಪ್ರಸಾರ ಆಗುತ್ತೆ ಅನ್ನೋದಿನ್ನೂ ನಿಗದಿ ಆಗಿಲ್ಲ.

  'ದಬಾಂಗ್-3' ಪ್ರಮೋಷನ್ ನಲ್ಲಿ ಜಾವಾ ಬೈಕ್ ಏರಿದ ಕಿಚ್ಚ ಸುದೀಪ್'ದಬಾಂಗ್-3' ಪ್ರಮೋಷನ್ ನಲ್ಲಿ ಜಾವಾ ಬೈಕ್ ಏರಿದ ಕಿಚ್ಚ ಸುದೀಪ್

  ದಬ್ಬಂಗ್-3 ಚಿತ್ರದ ಕುರಿತು..

  ದಬ್ಬಂಗ್-3 ಚಿತ್ರದ ಕುರಿತು..

  'ದಬ್ಬಂಗ್' ಮತ್ತು 'ದಬ್ಬಂಗ್-2' ಚಿತ್ರಗಳು ಹಿಟ್ ಆದ್ಮೇಲೆ 'ದಬ್ಬಂಗ್-3' ಚಿತ್ರಕ್ಕೆ ಸಲ್ಮಾನ್ ಖಾನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು. ಪೊಲೀಸ್ ಇನ್ಸ್ ಪೆಕ್ಟರ್ ಚುಲ್ ಬುಲ್ ಪಾಂಡೆ ಆಗಿ ಸಲ್ಮಾನ್ ಖಾನ್ ಕಾಣಿಸಿಕೊಂಡರೆ, ಪತ್ನಿ ರಜ್ಜೋ ಪಾಂಡೆಯಾಗಿ ಸೋನಾಕ್ಷಿ ಸಿನ್ಹ ನಟಿಸಿದ್ದಾರೆ. ವಿಲನ್ ಬಲ್ಲಿ ಸಿಂಗ್ ಆಗಿ ಸುದೀಪ್ ಅಭಿನಯಿಸಿದ್ದಾರೆ. ಅರ್ಬಾಝ್ ಖಾನ್, ಮಾಹಿ ಗಿಲ್, ಟಿನ್ನು ಆನಂದ್ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. 'ದಬ್ಬಂಗ್-3' ಕನ್ನಡದಲ್ಲೂ ಡಬ್ ಆಗಿ ಬಿಡುಗಡೆ ಆಗಲಿದೆ.

  English summary
  Bollywood Actor Salman Khan, Kiccha Sudeep takes part in The Kapil Sharma Show as part of Dabangg 3 promotions.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X