For Quick Alerts
  ALLOW NOTIFICATIONS  
  For Daily Alerts

  ಕಿರುತೆರೆ ಇತಿಹಾಸದಲ್ಲೇ ಕಂಡು ಕೇಳರಿಯದ ಸಂಭಾವನೆ ಪಡೆಯುತ್ತಿದ್ದಾರೆ ಸಲ್ಮಾನ್ ಖಾನ್

  |

  ಹಾಲಿವುಡ್‌ನಲ್ಲಿ 'ಬಿಗ್ ಬ್ರದರ್' ಎಂದು ಆರಂಭಗೊಂಡ ರಿಯಾಲಿಟಿ ಶೋ ಭಾರತದಲ್ಲಿ ಬಿಗ್‌ಬಾಸ್ ಆಗಿ ಬಹಳ ಜನಪ್ರಿಯತೆಗಳಿಸಿದೆ.

  ಹಲವು ಭಾಷೆಗಳಲ್ಲಿ ಬಿಗ್‌ಬಾಸ್ ಶೋಗಳು ಈಗ ಪ್ರತಿ ವರ್ಷದ ಪ್ರಸಾರವಾಗುತ್ತವೆ. ಆದರೆ ಭಾರತದಲ್ಲಿ ಮೊದಲಿಗೆ ಬಿಗ್‌ಬಾಸ್ ಶೋ ಆರಂಭವಾಗಿದ್ದು ಹಿಂದಿಯಲ್ಲಿ. 2007 ರಲ್ಲಿ ಆರಂಭವಾದ ಹಿಂದಿ ಬಿಗ್‌ಬಾಸ್ ಈವರೆಗೆ 14 ಸೀಸನ್ ಮುಗಿಸಿದೆ. ಹದಿನೈದನೇ ಸೀಸನ್ ಅಕ್ಟೋಬರ್ 2ರಿಂದ ಆರಂಭಗೊಳ್ಳಲಿದೆ.

  ಹಿಂದಿಯಲ್ಲಿ ಆರಂಭವಾದ ಮೊದಲ ಬಿಗ್‌ಬಾಸ್ ಶೋ ಅನ್ನು ನಿರೂಪಣೆ ಮಾಡಿದ್ದು ನಟ ಅರ್ಷದ್ ವಾರ್ಸಿ, ಎರಡನೇ ಸೀಸನ್ ನಿರೂಪಣೆ ಮಾಡಿದ್ದು ನಟಿ ಶಿಲ್ಪಾ ಶೆಟ್ಟಿ, ಆ ನಂತರದ್ದನ್ನು ಅಮಿತಾಬ್ ಬಚ್ಚನ್, ನಾಲ್ಕನೇ ಸೀಸನ್‌ಗೆ ಸಲ್ಮಾನ್ ಖಾನ್ ಎಂಟ್ರಿಯಾಯಿತು. ಅಲ್ಲಿಂದ ಈವರೆಗೆ ಸಲ್ಮಾನ್ ಖಾನ್ ಅವರೇ ಶೋ ನಿರೂಪಣೆ ಮಾಡುತ್ತಿದ್ದಾರೆ. ಬಿಗ್‌ಬಾಸ್ ನಿರೂಪಕರಾಗಿ ಸಲ್ಮಾನ್ ಜನಪ್ರಿಯತೆ ಹೆಚ್ಚಾಗುತ್ತಲೇ ಇದೆ, ಇದರ ಜೊತೆಗೆ ಸಲ್ಮಾನ್ ಖಾನ್ ಸಂಭಾವನೆ ಸಹ ಏರುತ್ತಲೇ ಇದೆ. ಬಿಗ್‌ಬಾಸ್ ಹದಿನೈದನೇ ಸೀಸನ್‌ಗೆ ಭಾರಿ ಕಿರುತೆರೆ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಸಂಭಾವನೆ ಪಡೆಯುತ್ತಿದ್ದಾರೆ ಸಲ್ಮಾನ್.

  ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಸಲ್ಮಾನ್?

  ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಸಲ್ಮಾನ್?

  ಅಕ್ಟೋಬರ್ 2 ರಿಂದ ಬಿಗ್‌ಬಾಸ್ ಸೀಸನ್ ಹದಿನೈದು ಆರಂಭವಾಗಲಿದೆ ಎನ್ನಲಾಗುತ್ತಿದೆ. ಈ ಶೋಗೂ ಸಲ್ಮಾನ್ ಖಾನ್ ಅವರೇ ನಿರೂಪಕರಾಗಿದ್ದರು, ಶೋ ನಿರೂಪಣೆ ಮಾಡಲು ಬರೋಬ್ಬರಿ 350 ಕೋಟಿ ರುಪಾಯಿ ಸಂಭಾವನೆಯನ್ನು ಸಲ್ಮಾನ್ ಖಾನ್ ಪಡೆಯಲಿದ್ದಾರೆ. ಭಾರತೀಯ ಕಿರುತೆರೆ ಇತಿಹಾಸದಲ್ಲಿ ಯಾರೊಬ್ಬರು ಶೋ ಒಂದಕ್ಕೆ ಇಷ್ಟು ದೊಡ್ಡ ಮೊತ್ತದ ಸಂಭಾವನೆಯನ್ನು ಈ ವರೆಗೆ ಪಡೆದಿಲ್ಲ.

  ಪ್ಯಾಕೇಜ್‌ ರೂಪದಲ್ಲಿ ಸಂಭಾವನೆ ಪಡೆಯುತ್ತಿರುವ ಸಲ್ಮಾನ್

  ಪ್ಯಾಕೇಜ್‌ ರೂಪದಲ್ಲಿ ಸಂಭಾವನೆ ಪಡೆಯುತ್ತಿರುವ ಸಲ್ಮಾನ್

  ಬಿಗ್‌ಬಾಸ್ ಸೀಸನ್ 15, ಅಕ್ಟೋಬರ್ 02 ರಿಂದ ಪ್ರಾರಂಭವಾಗಲಿದ್ದು 85 ಎಪಿಸೋಡ್‌ಗಳು ನಡೆಯಲಿವೆ. ವಾರಾಂತ್ಯದಲ್ಲಿ ಸಲ್ಮಾನ್ ಖಾನ್ ಶೋನ ನಿರೂಪಣೆ ಮಾಡಲಿದ್ದಾರೆ. ಜೊತೆಗೆ ಶೋನ ಆರಂಭಿಕ ಎಪಿಸೋಡ್ ಹಾಗೂ ಕೊನೆಯ ಎಪಿಸೋಡ್‌ನಲ್ಲಿ ನೃತ್ಯ ಪ್ರದರ್ಶನವನ್ನು ಸಹ ನೀಡಲಿದ್ದಾರೆ. ಇಡೀಯ ಸೀಸನ್‌ಗೆ ಸೇರಿ 350 ಕೋಟಿ ಸಂಭಾವನೆಯನ್ನು ಸಲ್ಮಾನ್ ಖಾನ್ ಪಡೆಯುತ್ತಿದ್ದಾರೆ.

  ಅಮಿತಾಬ್ ಬಚ್ಚನ್ ಸಹ ಕಡಿಮೆಯೇನಿಲ್ಲ

  ಅಮಿತಾಬ್ ಬಚ್ಚನ್ ಸಹ ಕಡಿಮೆಯೇನಿಲ್ಲ

  ಸಲ್ಮಾನ್ ಖಾನ್ ಪಡೆಯುತ್ತಿರುವ ಸಂಭಾವನೆ ಭಾರತದ ಕಿರುತೆರೆ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಂಭಾವನೆಯಾಗಿದೆ. ಅಮಿತಾಬ್ ಬಚ್ಚನ್, ಕೌನ್ ಬನೇಗಾ ಕರೋಡ್‌ಪತಿ ಶೋ ನಿರೂಪಣೆ ಮಾಡಲು ಪ್ರತಿ ಎಪಿಸೋಡ್‌ಗೆ 3.5 ಕೋಟಿ ಪಡೆಯುತ್ತಾರೆ. ಇದೇ ಈ ವರೆಗಿನ ಅತಿ ಹೆಚ್ಚಿನ ಸಂಭಾವನೆ ಆಗಿತ್ತು. ಸಲ್ಮಾನ್ ಖಾನ್ 350 ಕೋಟಿ ಪಡೆಯುವ ಮುನ್ನಾ ಅಮಿತಾಬ್‌ರ ಸಂಭಾವನೆಯೇ ನಂಬರ್ 1 ಆಗಿತ್ತು.

  ಕಪಿಲ್ ಶರ್ಮಾ ಸಹ ದೊಡ್ಡ ಮೊತ್ತ ಪಡೆಯುತ್ತಾರೆ

  ಕಪಿಲ್ ಶರ್ಮಾ ಸಹ ದೊಡ್ಡ ಮೊತ್ತ ಪಡೆಯುತ್ತಾರೆ

  ಕಮಿಡಿಯನ್ ಕಪಿಲ್ ಶರ್ಮಾ ಸಹ ದೊಡ್ಡ ಮೊತ್ತದ ಸಂಭಾವನೆ ಪಡೆವ ಟಿವಿ ಸೆಲೆಬ್ರಿಟಿ ಆಗಿದ್ದಾರೆ. ಕಪಿಲ್ ಶರ್ಮಾ ಪ್ರತಿ ಎಪಿಸೋಡ್‌ಗೆ ಒಂದು ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ದಿ ಕಪಿಲ್ ಶರ್ಮಾ ಶೋ ಎಂಬ ಕಾಮಿಡಿ ಶೋ ಅನ್ನು ಕಪಿಲ್ ಶರ್ಮಾ ನಡೆಸುತ್ತಾರೆ. ವಿಶೇಷವೆಂದರೆ ಈ ಶೋಗೆ ಸಹ ನಿರ್ಮಾಪಕರು ಸಲ್ಮಾನ್ ಖಾನ್. ಸಲ್ಮಾನ್ ಖಾನ್, ದೊಡ್ಡ ಸಂಭಾವನೆಯನ್ನೇ ಕಪಿಲ್‌ಗೆ ಕೊಡುತ್ತಿದ್ದಾರೆ.

  ಸಿನಿಮಾಗಳಿಗೂ ಭಾರಿ ದೊಡ್ಡ ಸಂಭಾವನೆ ಪಡೆಯುತ್ತಾರೆ

  ಸಿನಿಮಾಗಳಿಗೂ ಭಾರಿ ದೊಡ್ಡ ಸಂಭಾವನೆ ಪಡೆಯುತ್ತಾರೆ

  ಕಿರುತೆರೆಯಲ್ಲಿ ಮಾತ್ರವೇ ಅಲ್ಲ ಹಿರಿ ತೆರೆಯಲ್ಲೂ ಭಾರಿ ದೊಡ್ಡ ಮೊತ್ತದ ಸಂಭಾವನೆಯನ್ನು ಸಲ್ಮಾನ್ ಖಾನ್ ಪಡೆಯುತ್ತಾರೆ. ಸಲ್ಮಾನ್‌ ಖಾನ್‌ರ ಸಂಭಾವನೆ ಮೊತ್ತ ಇನ್ನೂರು ಕೋಟಿಗೆ ಸಮೀಪಿಸುತ್ತದೆ. ಇತ್ತೀಚಿನ ಒಂದು ಸಿನಿಮಾಕ್ಕೆ ಸಲ್ಮಾನ್ ಖಾನ್ ಸಂಭಾವನೆ ಜೊತೆಗೆ ಡಿಜಿಟಲ್ ಹಕ್ಕುಗಳನ್ನು ಸಹ ತಾವೇ ಪಡೆದುಕೊಂಡಿದ್ದರು ಎನ್ನಲಾಗಿದೆ. ಸಲ್ಮಾನ್ ಖಾನ್ ಸಿನಿಮಾ ಕೆಟ್ಟದಾಗಿದ್ದರೂ ಇನ್ನೂರು-ಮುನ್ನೂರು ಕೋಟಿ ಸಂಪಾದಿಸುತ್ತದೆ. ಹಾಗಾಗಿ ಸಹಜವಾಗಿಯೇ ದೊಡ್ಡ ಮೊತ್ತದ ಸಂಭಾವನೆಯನ್ನೇ ಸಲ್ಮಾನ್ ಬೇಡುತ್ತಾರೆ.

  English summary
  Salman Khan charging 350 crore rs as remuneration for Bigg Boss 15. The reality show will start from October 02.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X