For Quick Alerts
  ALLOW NOTIFICATIONS  
  For Daily Alerts

  ಪಕ್ಷಪಾತ ಮಾಡಿದ 'ಬಿಗ್ ಬಾಸ್' ಮೇಲೆ ಮುನಿಸು: ಶೋಗೆ ಸಲ್ಮಾನ್ ಗುಡ್ ಬೈ.?

  |
  ಸ್ಟಾರ್ ನಟರ ಪಾಲಿಗೆ ಲಕ್ಕಿ ನಾಯಕಿ ಪೂಜಾ| Pooja Hegde | Salman Khan | KABHI EID KABHI DIWALI

  ಹಿಂದಿ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್' ಮುಕ್ತಾಯಗೊಂಡಿದೆ. ಹೆಚ್ಚು ವಿವಾದಕ್ಕೀಡಾಗಿದ್ದ 'ಬಿಗ್ ಬಾಸ್-13' ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ. ಕಿರುತೆರೆ ನಟ ಸಿದ್ಧಾರ್ಥ್ ಶುಕ್ಲಾ ವಿಜೇತರಾಗಿ ಹೊರಹೊಮ್ಮಿದ್ದಾರೆ.

  'ಬಿಗ್ ಬಾಸ್' ಮನೆಯೊಳಗೆ ಹೆಚ್ಚು ಗದ್ದಲ-ಗಲಾಟೆಗೆ ಕಾರಣವಾಗಿದ್ದ ಸಿದ್ಧಾರ್ಥ್ ಶುಕ್ಲಾಗೆ 'ವಿನ್ನರ್' ಪಟ್ಟ ಕೊಟ್ಟಿರುವುದು ವೀಕ್ಷಕರಿಗೆ ತೃಪ್ತಿ ತಂದಿಲ್ಲ. ಹಾಗ್ನೋಡಿದ್ರೆ, ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದವರು ಕಾಶ್ಮೀರಿ ಮಾಡೆಲ್ ಅಸಿಮ್ ರಿಯಾಝ್.

  ಆದ್ರೆ, 'ಬಿಗ್ ಬಾಸ್-13' ಫಿನಾಲೆಯಲ್ಲಿ ಅಸಿಮ್ ರಿಯಾಝ್ ರನ್ನರ್-ಅಪ್ ಆದರು. ಇದರಿಂದ 'ಬಿಗ್ ಬಾಸ್ ಫಿಕ್ಸ್ಡ್ ಶೋ' ಎಂಬ ಮಾತುಗಳು ಮತ್ತೆ ಜೋರಾಗಿ ಕೇಳಿಬರುತ್ತಿದೆ. ಹೀಗಾಗಿ, 'ಬಿಗ್ ಬಾಸ್' ಕಾರ್ಯಕ್ರಮ ಮತ್ತು ವಾಹಿನಿಯನ್ನ ಬ್ಯಾನ್ ಮಾಡಿ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯ ಮಾಡುತ್ತಿದ್ದಾರೆ.

  ಇವೆಲ್ಲದರ ನಡುವೆ ನಟ ಸಲ್ಮಾನ್ ಖಾನ್ 'ಬಿಗ್ ಬಾಸ್'ಗೆ ಗುಡ್ ಬೈ ಹೇಳಲು ನಿರ್ಧರಿಸಿರುವ ಸುದ್ದಿಯೊಂದು ಹರಿದಾಡುತ್ತಿದೆ. ಮುಂಬರುವ 'ಬಿಗ್ ಬಾಸ್' ಆವೃತ್ತಿಯನ್ನ ಹೋಸ್ಟ್ ಮಾಡದಿರಲು ಸಲ್ಮಾನ್ ಖಾನ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.

  'ಬಿಗ್ ಬಾಸ್'ಗೆ ಸಲ್ಮಾನ್ ಖಾನ್ ಗುಡ್ ಬೈ.?

  'ಬಿಗ್ ಬಾಸ್'ಗೆ ಸಲ್ಮಾನ್ ಖಾನ್ ಗುಡ್ ಬೈ.?

  ವರ್ಷಗಳಿಂದ 'ಬಿಗ್ ಬಾಸ್' ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಾ ಬರುತ್ತಿರುವ ಸಲ್ಮಾನ್ ಖಾನ್, ಇದೀಗ ಒಂದು ನಿರ್ಧಾರಕ್ಕೆ ಬಂದಿದ್ದಾರಂತೆ. ಇನ್ಮುಂದೆ 'ಬಿಗ್ ಬಾಸ್' ಕಾರ್ಯಕ್ರಮದ ನಿರೂಪಣೆ ಮಾಡದಿರಲು ಸಲ್ಮಾನ್ ಖಾನ್ ಡಿಸೈಡ್ ಮಾಡಿದ್ದಾರಂತೆ. ''ಬಿಗ್ ಬಾಸ್-14'ನಲ್ಲಿ ನಾನಿರಲ್ಲ'' ಅಂತ ಆಯೋಜಕರು ಮತ್ತು ವಾಹಿನಿಯವರಿಗೆ ಸಲ್ಮಾನ್ ಖಾನ್ ತಿಳಿಸಿದ್ದಾರಂತೆ ಎಂಬ ಅಂತೆ-ಕಂತೆ ಕಿರುತೆರೆ ಲೋಕದಲ್ಲಿ ಕೇಳಿಬರುತ್ತಿದೆ.

  ಬಿಗ್‌ ಬಾಸ್‌ ಸೈಡ್ ಎಫೆಕ್ಟ್: 'ಕಲರ್ಸ್ ಟಿವಿ' ಬ್ಯಾನ್ ಮಾಡಿ ಎಂದು ರೊಚ್ಚಿಗೆದ್ದ ನೆಟ್ಟಿಗರುಬಿಗ್‌ ಬಾಸ್‌ ಸೈಡ್ ಎಫೆಕ್ಟ್: 'ಕಲರ್ಸ್ ಟಿವಿ' ಬ್ಯಾನ್ ಮಾಡಿ ಎಂದು ರೊಚ್ಚಿಗೆದ್ದ ನೆಟ್ಟಿಗರು

  ಕಾರಣ ಏನು.?

  ಕಾರಣ ಏನು.?

  'ಬಿಗ್ ಬಾಸ್-13' ಕಾರ್ಯಕ್ರಮದ ಹಲವು ಸನ್ನಿವೇಶಗಳಲ್ಲಿ ತಪ್ಪಿದ್ದರೂ ಸಿದ್ಧಾರ್ಥ್ ಶುಕ್ಲಾ ಪರವಾಗಿ ವಾಹಿನಿ ನಿಂತಿದ್ದು ಸಲ್ಮಾನ್ ಖಾನ್ ಗೆ ಬೇಸರ ತಂದಿದೆ. ಇಡೀ ಸೀಸನ್ ನಲ್ಲಿ ಸಿದ್ಧಾರ್ಥ್ ಶುಕ್ಲಾ ಪರವಾಗಿ ವಾಹಿನಿ ಪಕ್ಷಪಾತ ಮಾಡಿತ್ತು. ಇದರಿಂದ ಸಲ್ಮಾನ್ ಖಾನ್ ಕೋಪಗೊಂಡಿದ್ದಾರಂತೆ. ಹೀಗಾಗಿ, ಇನ್ಮುಂದೆ 'ಬಿಗ್ ಬಾಸ್' ಜೊತೆಯಾಗದಿರಲು ಸಲ್ಮಾನ್ ಖಾನ್ ಮನಸ್ಸು ಮಾಡಿದ್ದಾರಂತೆ.

  'ಬಿಗ್ ಬಾಸ್' ಹೋಸ್ಟ್ ಬದಲಾಗಲ್ಲ: ಸಲ್ಮಾನ್ ಖಾನ್ ಗೆ ಜಾಸ್ತಿ ದುಡ್ಡು ಸಿಕ್ಕಿಲ್ಲ.!'ಬಿಗ್ ಬಾಸ್' ಹೋಸ್ಟ್ ಬದಲಾಗಲ್ಲ: ಸಲ್ಮಾನ್ ಖಾನ್ ಗೆ ಜಾಸ್ತಿ ದುಡ್ಡು ಸಿಕ್ಕಿಲ್ಲ.!

  ಶೂಟ್ ಡಿಲೇ ಆಗಲು ಇದೇ ಕಾರಣ.?

  ಶೂಟ್ ಡಿಲೇ ಆಗಲು ಇದೇ ಕಾರಣ.?

  'ಬಿಗ್ ಬಾಸ್-13' ವಿನ್ನರ್ ಪಟ್ಟವನ್ನು ಸಿದ್ಧಾರ್ಥ್ ಶುಕ್ಲಾಗೆ ನೀಡಲು ವಾಹಿನಿ ಮುಂದಾದಾಗ ಸಲ್ಮಾನ್ ಖಾನ್ ಮುನಿಸಿಕೊಂಡಿದ್ದರಂತೆ. ಇದೇ ಕಾರಣಕ್ಕೆ, ಗ್ರ್ಯಾಂಡ್ ಫಿನಾಲೆ ದಿನ ವಿನ್ನರ್ ಘೋಷಣೆ ತಡವಾಗಿ ಆಯಿತು (ಮಧ್ಯರಾತ್ರಿ 12 ಗಂಟೆ ಬಳಿಕ) ಎಂಬ ಸುದ್ದಿ ಹಬ್ಬಿದೆ.

  ಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿ

  ಮುಂಚಿನಿಂದಲೂ ಮಾತಿದೆ.!

  ಮುಂಚಿನಿಂದಲೂ ಮಾತಿದೆ.!

  'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ಗುಡ್ ಬೈ ಹೇಳ್ತಾರೆ ಎಂಬ ಸುದ್ದಿ ಮುಂಚಿನಿಂದಲೂ ಕೇಳಿಬರುತ್ತಿದೆ. ಆರೋಗ್ಯ ಸಮಸ್ಯೆ ಮತ್ತು ಸಿನಿಮಾಗಳ ಬಿಜಿ ಶೆಡ್ಯೂಲ್ ಮಧ್ಯೆ 'ಬಿಗ್ ಬಾಸ್'ಗೆ ಸಮಯ ಕೊಡಲು ಆಗುತ್ತಿಲ್ಲ ಎಂದು ಈ ಹಿಂದೆ ಸಲ್ಮಾನ್ ಖಾನ್ ಹೇಳಿದ್ದರು. ಇದೀಗ, 'ಬಿಗ್ ಬಾಸ್' ಮೇಲೆ ಬೇಸರಗೊಂಡು ಸಲ್ಮಾನ್ ಖಾನ್ ಹೊರಗೆ ಬಂದಿದ್ದಾರೆ ಎಂದು ವರದಿ ಆಗಿದೆ. ಮುಂದಿನ 'ಬಿಗ್ ಬಾಸ್' ಆವೃತ್ತಿ ಶುರುವಾಗುವ ಹೊತ್ತಿಗೆ ಏನೇನು ಬದಲಾವಣೆ ಆಗುತ್ತೆ ಅಂತ ಕಾದು ನೋಡಬೇಕಿದೆ.

  English summary
  According to the latest Grapevine, Salman Khan to finally step back as Bigg Boss Host.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X