For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್-13' ಹೆಚ್ಚುವರಿ ಎಪಿಸೋಡ್ ಗಾಗಿ ಸಲ್ಮಾನ್ ಗೆ ಸಿಗ್ತಿದೆ ಕೋಟಿ ಕೋಟಿ ರೂಪಾಯಿ

  |

  ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಈಗ 13ನೇ ಆವೃತ್ತಿ ನಡೆಯುತ್ತಿದೆ. ಸಲ್ಲು ಕಳೆದ 10 ವರ್ಷಗಳಿಂದ ಯಶಸ್ವಿಯಾಗಿ ಬಿಗ್ ಬಾಸ್ ನಡೆಸಿಕೊಂಡು ಬರುತ್ತಿದ್ದಾರೆ. ಸಲ್ಲು ಭಾಯ್ ನಡೆಸಿಕೊಡುವ ಸ್ಟೈಲ್ ಗೆ ಕಿರುತೆರೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  ಸಲ್ಮಾನ್ ಖಾನ್ ಸ್ಪರ್ಧಿಗಳನ್ನು ಸಂಭಾಳಿಸುವ ರೀತಿ ಅನೇಕರಿಗೆ ಇಷ್ಟವಾಗಿದೆ. ಸದ್ಯ ಸೀಸನ್ -13 ನಡೆಯುತ್ತಿದೆ. ಕಿರುತೆರೆ ಲೋಕದ ಅತೀ ದೊಡ್ಡ ರಿಯಾಲಿಟಿ ಶೋ ಇದಾಗಿದ್ದು, ಸಲ್ಮಾನ್ ಖಾನ್ ಸಂಭಾವನೆ ಕೂಡ ಅಷ್ಟೆ ದೊಡ್ಡ ಮಟ್ಟದಲ್ಲಿ ಇದೆ. ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುವ ಸಲ್ಲು ಸ್ಮಾಲ್ ಸ್ಕ್ರೀನ್ ನಲ್ಲಿಯೂ ಅಬ್ಬರಿಸುತ್ತಿದ್ದಾರೆ. ಬಿಗ್ ಬಾಸ್ ಗಾಗಿ ಸಲ್ಮಾನ್ ಖಾನ್ ಪಡೆಯುತ್ತಿರುವ ಸಂಭಾವನೆ ಮತ್ತು ಹೆಚ್ಚುವರಿ ಎಪಿಸೋಡ್ ಗೆ ನೀಡುತ್ತಿರುವ ಕೋಟಿ ಲೆಕ್ಕಾಚಾರ ಹೀಗಿದೆ.

  ವಾವ್.. ಸಲ್ಮಾನ್ ಖಾನ್ ಚಿತ್ರದಲ್ಲಿ ಕನ್ನಡದ ಕಾಮಿಡಿ ಕಿಲಾಡಿಗಳು.!ವಾವ್.. ಸಲ್ಮಾನ್ ಖಾನ್ ಚಿತ್ರದಲ್ಲಿ ಕನ್ನಡದ ಕಾಮಿಡಿ ಕಿಲಾಡಿಗಳು.!

  ಐದು ವಾರಗಳು ಹೆಚ್ಚಿಸಲು ನಿರ್ಧಾರ

  ಐದು ವಾರಗಳು ಹೆಚ್ಚಿಸಲು ನಿರ್ಧಾರ

  ಸದ್ಯ ಪ್ರಸಾರವಾಗುತ್ತಿರುವ ಬಿಗ್ ಬಾಸ್-13 ಶೋವನ್ನು ಐದು ವಾರಗಳ ಕಾಲ ಹೆಚ್ಚುವರಿಯಾಗಿ ಪ್ರಸಾರ ಮಾಡಲು ನಿರ್ಮಾಣ ಸಂಸ್ಥೆ ಪ್ಲಾನ್ ಮಾಡಿದೆಯಂತೆ. ಐದು ವಾರಗಳಿಗಾಗಿ ಸಲ್ಮಾನ್ ಖಾನ್ ಗೆ ಕೋಟಿ ಕೋಟಿ ಕೊಡಲು ಆಯೋಜಕರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

  ಒಂದು ಸೀಸನ್ ಗೆ 200 ಕೋಟಿ

  ಒಂದು ಸೀಸನ್ ಗೆ 200 ಕೋಟಿ

  ವರದಿಗಳ ಪ್ರಕಾರ ಸಲ್ಮಾನ್ ಖಾನ್ ಗೆ ಸೀಸನ್ ಒಂದಕ್ಕೆ 200 ಕೋಟಿಗೂ ಅಧಿಕ ಸಂಭಾವನೆ ನೀಡಲಾಗುತ್ತಿದೆಯಂತೆ. ಈ ಮೊದಲು ಒಂದು ಎಪಿಸೋಡ್ ಗೆ 6.5 ಕೋಟಿ ಕೊಡುತ್ತಿದ್ದರಂತೆ. ಆದರೀಗ ಒಂದು ಎಪಿಸೋಡ್ ಗೆ 8.5 ನೀಡಲಾಗುತ್ತಿದೆಯಂತೆ. ಸಲ್ಮಾನ್ ಸುಮಾರು 10 ವರ್ಷಗಳಿಂದ ಬಿಗ್ ಬಾಸ್ ನಡೆಸಿಕೊಂಡು ಬರುತ್ತಿದ್ದಾರೆ.

  ಕರ್ನಾಟಕದ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ 'ದಬಾಂಗ್-3' ರಿಲೀಸ್ಕರ್ನಾಟಕದ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ 'ದಬಾಂಗ್-3' ರಿಲೀಸ್

  ಹೆಚ್ಚುವರಿ ಎಪಿಸೋಡ್ ಗೆ 2 ಕೋಟಿ

  ಹೆಚ್ಚುವರಿ ಎಪಿಸೋಡ್ ಗೆ 2 ಕೋಟಿ

  ಬಿಗ್ ಬಾಸ್-13 ಸೀಸನ್ ಅನ್ನು ಐದು ದಿನಗಳನ್ನು ಹೆಚ್ಚಿಸಲು ಆಯೋಜಕರು ನಿರ್ಧರಿಸಿರುವ ಕಾರಣ. ಹೆಚ್ಚುವರಿ ಎಪಿಸೋಡ್ ಗಳಿಗೆ 2 ಕೋಟಿ ನೀಡಲು ಮುಂದಾಗಿದ್ದಾರಂತೆ. ಅಂದರೆ ಹೆಚ್ಚುವರಿ ಒಂದು ಎಪಿಸೋಡ್ ಗೆ ಸಲ್ಲುಗೆ 2 ಕೋಟಿ ಸಿಗುತ್ತಿದೆ.

  ಹೆಚ್ಚುವರಿ ಎಪಿಸೋಡ್ ಮಾಡಲು ಸಲ್ಲು ನಿರಾಕರಣೆ

  ಹೆಚ್ಚುವರಿ ಎಪಿಸೋಡ್ ಮಾಡಲು ಸಲ್ಲು ನಿರಾಕರಣೆ

  ಸಲ್ಮಾನ್ ಖಾನ್ ಹೆಚ್ಚುವರಿ ಎಪಿಸೋಡ್ ಗಳನ್ನು ನಡೆಸಿ ಕೊಡಲು ಒಪ್ಪಿಕೊಳ್ಳುತ್ತಿಲ್ಲವಂತೆ. ಕಾರಣ ಸಿನಿಮಾಗಳ ಕಮಿಟ್ ಮೆಂಟ್ ಕಾರಣ ಹೆಚ್ಚುವರಿ ಎಪಿಸೋಡ್ ಹೋಸ್ಟ್ ಮಾಡಲು ನಿರಾಕರಿಸಿದ್ದಾರಂತೆ. ಆದರೆ ಆಯೋಜಕರು ಸಲ್ಮಾನ್ ಖಾನ್ ಅವರನ್ನು ಮನ ಒಲಿಸು ಕೆಲಸ ಮಾಡುತ್ತಿದ್ದಾರಂತೆ.

  ಬಿಗ್ ಬಾಸ್ ಶೋಗಳ TRP ರಿಲೀಸ್ ಮಾಡಿದ 'ಎಂಡೆಮೊಲ್': ಇತಿಹಾಸ ನಿರ್ಮಿಸಿದ ತೆಲುಗುಬಿಗ್ ಬಾಸ್ ಶೋಗಳ TRP ರಿಲೀಸ್ ಮಾಡಿದ 'ಎಂಡೆಮೊಲ್': ಇತಿಹಾಸ ನಿರ್ಮಿಸಿದ ತೆಲುಗು

  ಬಿಗ್ ಬಾಸ್ ನಡೆಸಿ ಕೊಡಲ್ಲ ಎನ್ನುವ ಸಲ್ಮಾನ್

  ಬಿಗ್ ಬಾಸ್ ನಡೆಸಿ ಕೊಡಲ್ಲ ಎನ್ನುವ ಸಲ್ಮಾನ್

  ಪ್ರತಿವರ್ಷ ಬಿಗ್ ಬಾಸ್ ಪ್ರಾರಂಭವಾಗುವ ಮುನ್ನ ಸಲ್ಮಾನ್ ಖಾನ್ ಹೋಸ್ಟ್ ಮಾಡುವುದಿಲ್ಲ ಎಂದು ಪಟ್ಟು ಹಿಡಿಯುತ್ತಾರಂತೆ. ಮುಂದಿನ ಸರಣಿ ನಡೆಸಿಕೊಡುವುದಿಲ್ಲ ಎಂದು ಹೇಳುತ್ತಾರೆ. ಈ ಬಗ್ಗೆ ಸ್ವತಹ ಸಲ್ಮಾನ್ ಖಾನ್ ಅವರೆ ಹೇಳಿದ್ದಾರೆ. ಆದರೆ ಮತ್ತೆ ನಡೆಸಿಕೊಡಲು ಒಪ್ಪಿಕೊಳ್ಳುತ್ತಾರೆ. ಅಲ್ಲದೆ ಸಲ್ಲು ಬಿಗ್ ಬಾಸ್ ಶೋ ಕೈಬಿಡದಿರಲು ಕಾರಣ ಕೋಟಿ ಕೋಟಿ ಹಣ ಹರಿದು ಬರುತ್ತಿದೆ. ಈ ಬಾರಿಯ ಶೋ ಮತ್ತೆ 5 ವಾರಗಳು ಹೆಚ್ಚುವರಿಯಾದ ಕಾರಣ ಗ್ರಾಂಡ್ ಫಿನಾಲೆ ಫೆಬ್ರವರಿಯಲ್ಲಿ ನಡೆಯುವ ಸಾಧ್ಯತೆ ಇದೆ.

  English summary
  Bollywood actor Salman Khan to get 2 crore extra for extension extension episode.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X