ಸೆಪ್ಟೆಂಬರ್ 16 ರಿಂದ 'ಬಿಗ್ ಬಾಸ್-12' ಶುರು: ವಿಚಿತ್ರ ಜೋಡಿ ನೋಡಲು ರೆಡಿ ಆಗಿ..
ಕಿರುತೆರೆಯ ಅತಿ ದೊಡ್ಡ ಶೋ.. ಒಂದಲ್ಲೊಂದು ವಿವಾದಗಳಿಂದ ಸದಾ ಸದ್ದು ಮಾಡುವ ರಿಯಾಲಿಟಿ ಶೋ ಅಂದ್ರೆ ಅದು 'ಬಿಗ್ ಬಾಸ್'.!
'ಬಿಗ್ ಬಾಸ್' ಬರೀ ಫೇಕ್ ಅಂತ ಯಾರು ಎಷ್ಟೇ ಬೊಬ್ಬೆ ಹೊಡೆದರೂ, ಈ ಶೋಗಾಗಿ ಬಕಪಕ್ಷಿಗಳಂತೆ ಕಾಯುವ ವೀಕ್ಷಕರು ಮಾತ್ರ ಕಮ್ಮಿ ಆಗಿಲ್ಲ. ಹಿಂದಿ ಕಿರುತೆರೆಯಲ್ಲಂತೂ 'ಬಿಗ್ ಬಾಸ್' ಬಹು ಜನಪ್ರಿಯತೆ ಪಡೆದುಕೊಂಡಿದೆ.

ಹಿಂದಿ ಕಿರುತೆರೆಯಲ್ಲಿ ಹನ್ನೊಂದು ಆವೃತ್ತಿಗಳು ಯಶಸ್ವಿ ಆಗಿ ಪೂರ್ಣಗೊಂಡು ಇದೀಗ 'ಬಿಗ್ ಬಾಸ್-12' ನಿಮ್ಮ ಮುಂದೆ ಬರಲಿದೆ. ಸೆಪ್ಟೆಂಬರ್ 16 ರಿಂದ 'ಬಿಗ್ ಬಾಸ್-12' ಶೋ ಪ್ರಸಾರ ಆರಂಭ ಆಗಲಿದೆ.
ಪ್ರತಿ ಆವೃತ್ತಿಯಲ್ಲಿ ಒಂದಲ್ಲಾ ಒಂದು ವಿಶಿಷ್ಟ ಕಾನ್ಸೆಪ್ಟ್ ಗಳನ್ನು ಹೊತ್ತು ತರುವ ಹಿಂದಿ 'ಬಿಗ್ ಬಾಸ್'ನಲ್ಲಿ ಈ ಬಾರಿ 'ವಿಚಿತ್ರ ಜೋಡಿ'ಗಳು ನಿಮಗೆ ಮನರಂಜನೆ ನೀಡಲಿದ್ದಾರೆ.
ಗಂಡ-ಹೆಂಡತಿ, ಅತ್ತೆ-ಸೊಸೆ, ಮಾವ-ಅಳಿಯ, ಮಾಲಿಕ-ಕಾರ್ಮಿಕ, ನಿರ್ದೇಶಕ-ನಟಿ... ಹೀಗೆ 'ವಿಚಿತ್ರ ಜೋಡಿ'ಗಳು ಈ ಬಾರಿಯ 'ಬಿಗ್ ಬಾಸ್' ಹೈಲೈಟ್. ಎಂದಿನಂತೆ ಈ ಬಾರಿಯೂ ವಾರಾಂತ್ಯದಲ್ಲಿ ಸಲ್ಮಾನ್ ಖಾನ್ ನ್ಯಾಯ-ಪಂಚಾಯತಿ ನಡೆಸಲಿದ್ದಾರೆ.
ಸದ್ಯಕ್ಕೆ 'ಬಿಗ್ ಬಾಸ್' ಮನೆಗೆ ಹೋಗುವ 'ವಿಚಿತ್ರ ಜೋಡಿ'ಗಳ ಪಟ್ಟಿ ಇನ್ನೂ ಬಹಿರಂಗ ಆಗಿಲ್ಲ. ಆದ್ರೆ, 'ನೀಲಿ ಚಿತ್ರಗಳ ರಾಜ' ಡ್ಯಾನಿ ಡಿ ಹಾಗೂ ವಿವಾದಾತ್ಮಕ ನಟಿ ಮಹಿಕಾ ಶರ್ಮಾ 'ಬಿಗ್ ಬಾಸ್' ಮನೆಯೊಳಗೆ ಬಂಧಿಯಾಗಲಿದ್ದಾರೆ ಎನ್ನಲಾಗಿದೆ.


Click it and Unblock the Notifications











