ತೆಲುಗು ಬಿಗ್‌ಬಾಸ್‌ನಲ್ಲಿ ಟ್ವಿಸ್ಟ್: ನಾಗಾರ್ಜುನ ಬದಲಿಗೆ ಸಮಂತಾ ಎಂಟ್ರಿ!
ತೆಲುಗು ಬಿಗ್ ಬಾಸ್ ನಾಲ್ಕನೇ ಆವೃತ್ತಿಯ ಮಧ್ಯದಲ್ಲಿ ಬದಲಾವಣೆಯ ಮುನ್ಸೂಚನೆ ಸಿಕ್ಕಿದೆ. ದೈನಂದಿನ ಎಪಿಸೋಡ್‌ನಲ್ಲಿ ಯಾವುದೇ ವ್ಯತ್ಯಾಸ ಇಲ್ಲದೇ ಹೋದರೂ, ವೀಕೆಂಡ್ ನಿರೂಪಣೆಗೆ ಬಗ್ಗೆ ಹೊಸ ಸುದ್ದಿ ಹೊರಬಿದ್ದಿದೆ.
ಎರಡು ವಾರಗಳ ಕಾಲ ಬಿಗ್ ಬಾಸ್‌ನಲ್ಲಿ ನಾಗಾರ್ಜುನ ಅವರ ನಿರೂಪಣೆಯನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಮುಂದಿನ ವಾರದಲ್ಲಿ ಎರಡು ವಾರಗಳು ನಾಗಾರ್ಜುನ ಅವರು ಇರಲ್ಲ ಎಂಬ ಸುದ್ದಿಯೊಂದು ಸದ್ದು ಮಾಡುತ್ತಿದೆ.
ನಾಗಾರ್ಜುನ ನಟಿಸುತ್ತಿರುವ ಥ್ರಿಲ್ಲರ್ ಸಿನಿಮಾ ವೈಲ್ಡ್ ಡಾಗ್ ಚಿತ್ರೀಕರಣಕ್ಕಾಗಿ ಹಿಮಾಲಯಕ್ಕೆ ಹೋಗುತ್ತಿರುವ ಕಾರಣ, ಎರಡು ವಾರಗಳ ಕಾಲ ಬಿಗ್ ಬಾಸ್ ನಿರೂಪಣೆ ಮಾಡುವುದು ಅನುಮಾನ ಎಂದು ಹೇಳಲಾಗಿದೆ.

ನಾಗಾರ್ಜುನ ಅವರ ಬದಲಿಗೆ ಅವರ ಸೊಸೆ ಸಮಂತಾ ಅಕ್ಕಿನೇನಿ ಬಿಗ್ ಬಾಸ್ ನಿರೂಪಣೆ ಮಾಡಬಹುದು ಎನ್ನಲಾಗಿದೆ. ಬಿಗ್ ಬಾಸ್ ನಾಲ್ಕನೇ ಆವೃತ್ತಿ ಆರಂಭಕ್ಕೂ ಮುನ್ನ ಈ ಆವೃತ್ತಿಯಲ್ಲಿ ಸಮಂತಾ ಅವರೇ ಪೂರ್ಣ ಪ್ರಮಾಣದಲ್ಲಿ ನಿರೂಪಣೆ ಮಾಡುತ್ತಾರೆ ಎಂದು ವರದಿಗಳು ಆಗಿದ್ದವು. ಆದರೆ, ಅದರಲ್ಲಿ ಸತ್ಯವಿರಲಿಲ್ಲ.
ಇದಕ್ಕೂ ಮುಂಚೆ ಹಿರಿಯ ನಟಿ ರಮ್ಯಾ ಕೃಷ್ಣನ್ ಅವರು ಬಿಗ್ ಬಾಸ್ ತೆಲುಗು 3ರಲ್ಲಿ ಅತಿಥಿ ನಿರೂಪಕರಾಗಿ ಕಾಣಿಸಿಕೊಂಡಿದ್ದರು.


Click it and Unblock the Notifications











