ಶಿರಡಿ ಸಾಯಿಬಾಬಾ ಅವತಾರದಲ್ಲಿ ನೀನಾಸಂ ಅಶ್ವತ್ಥ್

By Rajendra

Neenasam Ashwath
ಕನ್ನಡ ಕಿರುತೆರೆ ವಾಹಿನಿಗಳಲ್ಲಿ ಈಗ ಭಕ್ತಿರಸ ಪ್ರವಹಿಸುತ್ತಿದೆ. ಈಗಾಗಲೆ ಉದಯ ಟಿವಿಯಲ್ಲಿ 'ಶ್ರೀ ಶಿರಡಿ ಸಾಯಿಬಾಬಾ' ಧಾರಾವಾಹಿ ಪ್ರಸಾರವಾಗುತ್ತಿದ್ದು 100 ಕಂತುಗಳನ್ನು ಪೂರೈಸಿದೆ. ಶಿರಡಿ ಸಾಯಿಬಾಬಾ ಬಗ್ಗೆ ಅನೇಕ ಚಿತ್ರಗಳು ಬಂದಿವೆ. ಈಗ ಮತ್ತೊಮ್ಮೆ ಸಾಯಿಬಾಬಾ ಕುರಿತ ಮತ್ತೊಂದು ಧಾರಾವಾಹಿ ಸುವರ್ಣ ವಾಹಿನಿಯಲ್ಲಿ ಆರಂಭವಾಗಿದೆ.

ಸುವರ್ಣ ವಾಹಿನಿಯಲ್ಲಿ 'ರಾಘವೇಂದ್ರ ವೈಭವ' ಧಾರಾವಾಹಿ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಈ ಹಿನ್ನೆಲೆಯಲ್ಲಿ ವಾಹಿನಿ ಮತ್ತೊಂದು ಭಕ್ತಿ ಪ್ರಧಾನ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿದೆ. 'ಸಮರ್ಥ ಸದ್ಗುರು' ಹೆಸರಿನ ಶಿರಡಿ ಸಾಯಿಬಾಬಾ ಅವರ ಚರಿತೆ ಪ್ರಸಾರವಾಗುತ್ತಿದೆ.

ಸಾಯಿಗೋಲ್ಡ್ ಪ್ಯಾಲೇಸ್ ನ ಶರವಣನ್ ನಿರ್ಮಿಸಿರುವ ಈ ಧಾರಾವಾಹಿಯನ್ನು ಬುಕ್ಕಾಪಟ್ಟಣ ವಾಸು ನಿರ್ದೇಶಿಸಿದ್ದಾರೆ. ಒಟ್ಟು 300 ಎಪಿಸೋಡುಗಳನ್ನು ನಿರ್ಮಿಸಿ ಮೆಗಾ ಧಾರಾವಾಹಿ ಮಾಡುವ ಬಯಕೆಯನ್ನು ಶರವಣನ್ ಹೊಂದಿದ್ದಾರೆ.

ಸೋಮವಾರದಿಂದ ಶುಕ್ರವಾರದ ತನಕ ಸಂಜೆ 5.30ಕ್ಕೆ ಧಾರಾವಾಹಿ ಪ್ರಸಾರವಾಗಲಿದೆ. ಪ್ರತಿದಿನ ಅರ್ಧಗಂಟೆ ಕಾಲ ಶಿರಡಿ ಸಾಯಿಬಾಬಾ ಅವರ ಜೀವನ, ಪವಾಡ ಹಾಗೂ ಮಹಿಮೆಗಳನ್ನು ವೀಕ್ಷಕರು ನೋಡಬಹುದು. 'ಸಬ್ ಕಾ ಮಾಲಿಕ್ ಏಕ್ ಹೈ' ಎಂದ ಶಿರಡಿ ಸಾಯಿಬಾಬಾ ಅವರು ಜಾತ್ಯಾತೀತ ಗುರು ಎಂಬುದರಲ್ಲಿ ಎರಡು ಮಾತಿಲ್ಲ.

ದೊಡ್ಡಬಿದರಿಕಲ್ಲು, ಕರ್ನಾಟಕದ ಸ್ಥಳಗಳು ಮತ್ತು ಮಹರಾಷ್ಟ್ರದ ಕೆಲವು ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಧಾರಾವಾಹಿಯಲ್ಲಿ ಶಿರಡಿ ಸಾಯಿಬಾಬಾ ಪಾತ್ರವನ್ನು ನೀನಾಸಂ ಅಶ್ವತ್ಥ್ ಪೋಷಿಸಿದ್ದಾರೆ. ಉಳಿದ ಪಾತ್ರವರ್ಗದಲ್ಲಿ ಮಾಸ್ಟರ್ ಹಿರಣ್ಣಯ್ಯ, ಶ್ರೀನಿವಾಸಮೂರ್ತಿ, ಗಾಯಕ ರಾಜೇಶ್ ಕೃಷ್ಣನ್ ಮುಂತಾದವರಿದ್ದಾರೆ. (ಏಜೆನ್ಸೀಸ್)

More from Filmibeat

English summary
Asianet Suvarna channel starts new devotiona serial 'Samartha Sadguru'. The story is based on Sai Baba, the great saint from Shirdi, who never recorded any of his teachings in writing. He was keen to awaken his devotees through devotion. Watch serila at 5.30 pm from Monday to Friday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X