2 ಧಾರಾವಾಹಿಯಲ್ಲಿ ಒಂದೇ ಸೀನ್; ಅಲ್ಲಿ ಗಂಡನ ಆಕ್ಸಿಡೆಂಟ್.. ಇಲ್ಲಿ ಹೆಂಡತಿ ಕೊ*!
ಕಿರುತೆರೆ ಇಂಡಸ್ಟ್ರಿಯಲ್ಲಿ ವಾಹಿನಿಗಳ ಮಧ್ಯೆ ಕಾಂಪಿಟೇಷನ್ ಸಹಜ. ಯಾಕಂದ್ರೆ ಸೀರಿಯಲ್ ಪ್ರಿಯರಿಗೆ ಇಷ್ಟವಾಗುವಂತ ಸೀರಿಯಲ್ ಕೊಟ್ಟಾಗ ಮಾತ್ರ ಚಾನೆಲ್ ಚೇಂಜ್ ಮಾಡದಂತೆ ಆ ಸೀರಿಯಲ್ ನೋಡುತ್ತಾರೆ. ಒಂದು ವೇಳೆ ಸೀರಿಯಲ್‌ನಲ್ಲಿ ಟ್ವಿಸ್ಟ್ ಇಲ್ಲದೆ ಬೋರ್ ಹೊಡೆಸಿದರೆ ಚಾನೆಲ್ ಬದಲಾಯಿಸಿ, ಸೀರಿಯಲ್‌ನು ಬದಲಾಯಿಸುತ್ತಾರೆ.
2 ಕಡೆ ಒಂದೇ ಸನ್ನಿವೇಶ
ಅದರಲ್ಲೂ ಕಲರ್ಸ್ ಕನ್ನಡ ಹಾಗೂ ಜೀ ಕನ್ನಡ ಒಂದಕ್ಕಿಂತ ಒಂದು ಒಳ್ಳೊಳ್ಳೆ ಕಥೆ ಇರುವ ಧಾರಾವಾಹಿಗಳನ್ನು ಕೊಡುತ್ತಿವೆ. ಜೀ ಕನ್ನಡದಲ್ಲಿ ಬರುತ್ತಿರುವ 'ಲಕ್ಷ್ಮೀ ನಿವಾಸ'' ಧಾರಾವಾಹಿಗೆ ಮೊದಲಿನಿಂದಾನೂ ಅದರದ್ದೇ ಆದ ಪ್ರೇಕ್ಷಕರು ಇದ್ದಾರೆ. ಹಾಗೇ ಕಲರ್ಸ್ ಕನ್ನಡದಲ್ಲಿ ಬರುತ್ತಿರುವ 'ನಿನಗಾಗಿ' ಧಾರಾವಾಹಿಯೂ ವೀಕ್ಷಕರ ಮನಸ್ಸನ್ನ ಗೆದ್ದಿದೆ. ಆದರೆ ಈಗ ಎರಡು ಧಾರಾವಾಹಿಯಲ್ಲಿ ಒಂದೇ ಸೀನ್ ಓಡುತ್ತಿದೆ. ಅದೇಗೆ ಅಂತ ವೀಕ್ಷಕರು ತಲೆ ಕೆಡಿಸಿಕೊಂಡಿದ್ದಾರೆ.

ಆಕ್ಸಿಡೆಂಟ್ ಮಾಡಿಸಿದವನ ಹುಡಕಾಟ
ಭಾವನಾಳನ್ನು ಅವರ ಎಂಡಿಯೇ ಮದುವೆಯಾಗಲೂ ಮನೆಯವರನ್ನೆಲ್ಲ ಒಪ್ಪಿಸಿದ್ದರು. ಶ್ರೀಕಾಂತ್ ಹಾಗೂ ಭಾವನಾ ಮದುವೆ ಜೋರಾಗಿಯೇ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಅಂದು ರವಿ ಆಕ್ಸಿಡೆಂಟ್ ಮಾಡಿದ್ದ ಆಸ್ತಿಗಾಗಿ. ಆದರೆ ಸಿದ್ದು ಕಾರು ಕೂಡ ಶ್ರೀಕಾಂತ್ ಕಾರಿಗೆ ಟಚ್ ಆಗಿತ್ತು. ಹೀಗಾಗಿ ಆ ಕೊಲೆಯನ್ನು ಸಿದ್ದುನೇ ಮಾಡಿರೋದು ಅಂತ ಜವರೇಗೌಡರು ನಂಬಿದ್ದಾರೆ. ಸಿದ್ದು ತಲೆಗೂ ತುಂಬಿಸಿದ್ದಾರೆ.
ಸತ್ಯ ಹೇಳಲಾಗದೇ ಸಿದ್ದು ಒದ್ದಾಟ
ತಂದೆಯ ಮಾತು ಕೇಳಿಸಿಕೊಂಡಾಗಿನಿಂದ ಸಿದ್ದು ತನ್ನಲ್ಲಿ ತಾನಿಲ್ಲ. ಆ ವಿಚಾರಕ್ಕೆ ಕೊರಗಿ ಕೊರಗಿ ಹಾಸಿಗೆ ಹಿಡಿದಿದ್ದ. ಹೇಗೋ ಭಾವನಾಳೆ ನೋಡಿಕೊಂಡು ಸಿದ್ದೇಗೌಡ್ರು ಹುಷಾರಾಗುವಂತೆ ನೋಡಿಕೊಂಡರು. ಆದರೆ ಖುಷಿ ಎಂದರೆ ಪ್ರಾಣಕ್ಕಿಂತ ಹೆಚ್ಚಾಗಿ ಇಷ್ಟಪಡುವ ಸಿದ್ದೇಗೌಡ್ರಿಗೆ ಖುಷಿಯನ್ನು ನೋಡಿ ಮಾತಾಡಿಸುವುದಕ್ಕೂ ಮನಸ್ಸು ಒಪ್ಪುತ್ತಿಲ್ಲ. ಅಷ್ಟೇ ಯಾಕೆ ಭಾವನಾ ಮುಂದೆ ಬಂದಾಗಲೂ ಅವರ ಜೀವನವನ್ನು ನಾನೇ ಹಾಳು ಮಾಡಿಬಿಟ್ಟೆ ಎಂದು ಕೊರಗುತ್ತಿದ್ದಾರೆ.

ಮಾಧುರಿ ಆಕ್ಸಿಡೆಂಟ್ ಮಾಡಿರುವ ರಚನಾ
ಕಲರ್ಸ್ ಕನ್ನಡದಲ್ಲಿ 'ನಿನಗಾಗಿ' ಧಾರಾವಾಹಿ ಬರ್ತಿದೆ. ಅದರಲ್ಲಿ ಸೂಪರ್ ಸ್ಟಾರ್ ರಚನಾ ಹಾಗೂ ಕೃಷ್ಣಾ ಬಾಂಧವ್ಯವನ್ನು ನೋಡುವುದಕ್ಕೇನೆ ಖುಷಿ. ಕೃಷ್ಣಾ ಎಂದರೆ ಸದಾ ಖುಷಿ ಪಡುತ್ತಿದ್ದ ರಚನಾ ಇಂದು ಮಂಕಾಗಿ ಹೋಗಿದ್ದಾಳೆ ಸದಾ ಕಣ್ಣೀರು ಹಾಕುತ್ತಿದ್ದಾಳೆ. ಮನೆಯಲ್ಲಿರುವವರಿಗೆ ರಚನಾಳ ನಡವಳಿಕೆ ದಿಗಿಲು ಹುಟ್ಟಿಸಿದೆ. ಜೀವನ ಹೆಂಡತಿ, ಕೃಷ್ಣಾಳ ತಾಯಿಯ ಸಾವಿಗೆ ತಾನೇ ಕಾರಣ ಎಂಬುದು ತಿಳಿದಾಗಿನಿಂದ ಊಟ, ನಿದ್ದೆ ಬಿಟ್ಟು ಕಣ್ಣೀರೊಂದೆ ರಚನಾಳ ಜೊತೆಯಾಗಿದೆ. ಆ ಆಕ್ಸಿಡೆಂಟ್ ನೆನಪಿಸಿಕೊಂಡು ಕಣ್ಣೀರಿಡುತ್ತಲೇ ಇದ್ದಾಳೆ. ಈಗ ನೋಡಿದ್ರೆ ಬಾಲ ಬೇರೆ ನೀವೂ ನನ್ನ ತಂಗಿ ಮಾಧುರಿಯಂತೆ ಕಾಣ್ತೀರಿ ಎಂದಿದ್ದಾನೆ.
ಎರಡರಲ್ಲೂ ಪಶ್ಚಾತ್ತಾಪ ದೃಶ್ಯ
ಎರಡು ಧಾರಾವಾಹಿಯಲ್ಲಿ ಕಥೆ ಬೇರೆ ಬೇರೆ. ಆದರೆ ಈ ಆಕ್ಸಿಡೆಂಟ್ ಅನ್ನೋ ವಿಚಾರ ಬಂದಾಗ ಎರಡು ಧಾರಾವಾಹಿಯಲ್ಲೂ ಒಂದೇ ರೀತಿಯ ಸೀನ್ ರಿಕ್ರಿಯೇಟ್ ಆಗಿದೆ. ಖುಷಿಯನ್ನು ಕಂಡರೆ ಮುಖ ಕೊಟ್ಟು ಸಿದ್ದೇಗೌಡ್ರು ಮಾತಾಡಿಸ್ತಿಲ್ಲ. ಹಾಗೇ ಕೃಷ್ಣಾಳನ್ನು ಕಂಡರೆ ರಚನಾ ಮುಖ ಕೊಟ್ಟು ಮಾತಾಡ್ತಾ ಇಲ್ಲ. ಆದರೂ ಒಂದೇ ಸಮಯಕ್ಕೆ ಈ ರೀತಿ 2 ಧಾರಾವಾಹಿಯಲ್ಲೂ ಒಂದೇ ರೀತಿಯ ಸೀನ್ ಬರ್ತಾ ಇರೋದಕ್ಕೆ ವೀಕ್ಷಕರು ಗೊಂದಲಕ್ಕೆ ಸಿಲುಕಿದ್ದಾರೆ.


Click it and Unblock the Notifications











