ಆತುರದಿಂದ ಕೈಸುಟ್ಟುಕೊಂಡ ಸಮೀರಾಚಾರ್ಯ: ರಾಮಾಯಣ ಕುರಿತ ಪ್ರಶ್ನೆಗೆ ತಪ್ಪು ಉತ್ತರ

By Bharath Kumar

Recommended Video

Kannadada Kotyadipathi Season 3 : ಸಮೀರ್ ಆಚಾರ್ಯ ಎಡವಟ್ಟಿಗೆ ತಲೆ ತಚ್ಚಿಕೊಂಡ ಪ್ರೇಕ್ಷಕ..!

ಕನ್ನಡದ ಕೋಟ್ಯಧಿಪತಿಯಲ್ಲಿ ಈ ವಾರ ಕಿರುತೆರೆ ಕಲಾವಿದರ ಶೋ. ಬಿಗ್ ಬಾಸ್ ಖ್ಯಾತಿಯ ರೆಹಮಾನ್, ನಟಿ ಜಯಶ್ರೀ, ಪುಟ್ಟಗೌರಿ ಮದುವೆ ಖ್ಯಾತಿಯ ರಕ್ಷಿತ್ ನಂತರ ಬಿಗ್ ಬಾಸ್ ಸಮೀರಾಚಾರ್ಯ ಹಾಟ್ ಸೀಟ್ ಗೆ ಆಯ್ಕೆಯಾದರು.

ಆದ್ರೆ, ಎಷ್ಟು ಬೇಗ ಆಟ ಆರಂಭಿಸಿದರೋ ಅಷ್ಟೇ ವೇಗವಾಗಿ ತಮ್ಮ ಆಟವನ್ನ ಅಂತ್ಯ ಮಾಡಿಕೊಂಡರು. ಸಮೀರಾಚಾರ್ಯ ಅವರ ಅತಿಯಾದ ಆತ್ಮವಿಶ್ವಾಸವೇ ಅವರಿಗೆ ಮುಳುವಾಯಿತು.

ಮೊದಲ ಜಗಲಿಕಟ್ಟೆ ದಾಟಿದ ಸಮೀರಾಚಾರ್ಯ ತುಂಬಾ ಸುಲಭವಾದ ಪ್ರಶ್ನೆಯೇ ಕಂಟಕವಾಯಿತು. ಈ ಪ್ರಶ್ನೆಗೆ ಉತ್ತರ ಕೊಟ್ಟೇ ಕೊಡ್ತಾರೆ ಅಂದುಕೊಂಡವರಿಗೆ ದೊಡ್ಡ ಶಾಕ್ ಕಾದಿತ್ತು. ಇದರ ಪರಿಣಾಮ ಆಟದಿಂದ ನಿರ್ಗಮಿಸಬೇಕಾಯಿತು. ಹಾಗಿದ್ರೆ, ಸಮೀರಾಚಾರ್ಯ ಕೋಟ್ಯಧಿಪತಿಯಲ್ಲಿ ಗಳಿಸಿದ ಹಣವೆಷ್ಟು.? ಮುಂದೆ ಓದಿ....

ಸಮೀರಾಚಾರ್ಯ ಎದುರಿಸಿದ ಮೊದಲ ಪ್ರಶ್ನೆ.?

ಸಮೀರಾಚಾರ್ಯ ಎದುರಿಸಿದ ಮೊದಲ ಪ್ರಶ್ನೆ.?

ಇವುಗಳಲ್ಲಿ ವಿವಾಹವಾದ ಹೊಸತನದಲ್ಲಿ ನವದಂಪತಿಗಳು ಕೈಗೊಳ್ಳುವ ವಿಹಾರ ಯಾತ್ರೆ ಯಾವುದು.?
A ಮಧುಕರಿ
B ಮಧುದೂತಿ
C ಮಧುಮಾಸ
D ಮಧುಚಂದ್ರ
ಸರಿಯಾದ ಉತ್ತರ : D ಮಧುಚಂದ್ರ

ಎರಡನೇ ಪ್ರಶ್ನೆ

ಎರಡನೇ ಪ್ರಶ್ನೆ

5 ಮತ್ತು 20ರ ಮೇಲೆ ಗಣಿತದ ಯಾವ ಲೆಕ್ಕಾಚಾರವನ್ನ ಪ್ರಯೋಗಿಸದಾಗ 4 ಎನ್ನುವ ಉತ್ತರ ಬರುತ್ತದೆ.?
A ಭಾಗಾಕಾರ
B ಗುಣಾಕಾರ
C ಕಳೆಯುವುದು
D ಕೂಡುವುದು
ಸರಿಯಾದ ಉತ್ತರ: A ಭಾಗಾಕಾರ

ಮೂರನೇ ಪ್ರಶ್ನೆ ಇದು

ಮೂರನೇ ಪ್ರಶ್ನೆ ಇದು

ಗೋಪಾಲಕೃಷ್ಣ ಅಡಿಗರ 'ಯಾವ ಮೋಹನ ಮುರಲಿ ಕರೆಯಿತು' ಗೀತೆಯಲ್ಲಿ, ಮೋಹನನ ಮುರಲಿಯು ಯಾವ ತೀರಕೆ ಕರೆಯುತ್ತದೆ.?
A ಬಾಳ ತೀರಕೆ
B ದೂರ ತೀರಕೆ
C ಸಮುದ್ರ ತೀರಕೆ
D ನದಿ ತೀರಕೆ
ಸರಿಯಾದ ಉತ್ತರ: B ದೂರ ತೀರಕೆ

ನಾಲ್ಕನೇ ಪ್ರಶ್ನೆ ಇದು

ನಾಲ್ಕನೇ ಪ್ರಶ್ನೆ ಇದು

ಈ ಧ್ವನಿಸುರಳಿಯಲ್ಲಿರುವ ಧ್ವನಿ ಯಾರದ್ದೆಂದು ಗುರುತಿಸಿ.?
A ನರಸಿಂಹ ಜೋಶಿ
B ರಿಚರ್ಡ್ ಲೂಯೀಸ್
C ಗಂಗಾವತಿ ಪ್ರಾಣೇಶ್
D ಕೃಷ್ಣೇಗೌಡ್ರು
ಸರಿಯಾದ ಉತ್ತರ: C ಗಂಗಾವತಿ ಪ್ರಾಣೇಶ್

ಹತ್ತು ಸಾವಿರದ ಪ್ರಶ್ನೆ

ಹತ್ತು ಸಾವಿರದ ಪ್ರಶ್ನೆ

ಯಾವ ರಾಷ್ಟ್ರೀಯ ಉದ್ಯಾನವನವು ಅಲ್ಲಿ ಹಾವಿನಂತೆ ಸುತ್ತಿ ಹರಿಯುವ ನದಿಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ.?
A ಅನ್ಯಿ ರಾಷ್ಟ್ರೀಯ ಉದ್ಯಾನವನ
B ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
C ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
D ಕುದುರೆಮುಖ ರಾಷ್ಟ್ರೀಯ ಉದ್ಯಾನವನ
ಸರಿಯಾದ ಉತ್ತರ: ಆಡಿಯೆನ್ಸ್ ಪೋಲ್ ಬಳಕೆ C ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

ಕೈಕೊಟ್ಟ ಪ್ರಶ್ನೆ ಇದೇ

ಕೈಕೊಟ್ಟ ಪ್ರಶ್ನೆ ಇದೇ

ರಾಮಾಯಣದ ಪ್ರಕಾರ, ಶೂರ್ಪನಖಿಯ ತಾಯಿಯ ಹೆಸರೇನು.?
A ಕೈಕಸಿ
B ತಾಟಕಿ
C ದಿತಿ
D ತ್ರಿಟಜೆ
ಲೈಫ್ ಲೈನ್ ಬಳಸಿಕೊಂಡಿಲ್ಲ. ಆಯ್ಕೆ C ದಿತಿ ಎಂದು ಉತ್ತರ ನೀಡಿದರು. ಆದ್ರೆ, ಅದು ತಪ್ಪಾಗಿತ್ತು. ಅಲ್ಲಿಗೆ ಆಟ ಮುಗಿಯಿತು. ಎರಡು ಲೈಫ್ ಲೈನ್ ಕೂಡ ಬಳಸಿಕೊಂಡಿಲ್ಲ.
ಸರಿಯಾದ ಉತ್ತರ: A ಕೈಕಸಿ

ಹತ್ತು ಸಾವಿರಕ್ಕೆ ಸಮೀರಾಚಾರ್ಯ ತೃಪ್ತಿ

ಹತ್ತು ಸಾವಿರಕ್ಕೆ ಸಮೀರಾಚಾರ್ಯ ತೃಪ್ತಿ

ಬಹುಶಃ ಪ್ರವಚನ ಮಾಡುವ ಸಮೀರಾಚಾರ್ಯ ಅವರಿಗೆ ಈ ಉತ್ತರ ಕಷ್ಟವಾಗಿರಲಿಲ್ಲ. ಆದ್ರೆ, ಅತಿಯಾದ ಆತ್ಮವಿಶ್ವಾಸದಿಂದ ಆಟವಾಡುತ್ತಿದ್ದ ಅವರು, ಜೋಶ್ ನಲ್ಲಿ ಉತ್ತರ ಕೊಟ್ಟರು. ಆದ್ರೆ, ಅದು ತಪ್ಪಾಗಿದ್ದರು ಪರಿಣಾಮ, ಮೊದಲ ಜಗಲಿಕಟ್ಟೆಯ ಹಂತಕ್ಕೆ ಬಂದಿದ್ದ ಅವರಿಗೆ ಸಿಕ್ಕಿದ್ದು ಕೇವಲ ಹತ್ತು ಸಾವಿರ ಮಾತ್ರ.

More from Filmibeat

English summary
'Kannadada Kotyadhipathi season 3' contestant sameer acharya has won ten thousand rupees.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X