ಸಮೀರಾಚಾರ್ಯ ಮೇಲೆ ಸಂಯುಕ್ತಾ ಹಲ್ಲೆ: ಪತ್ನಿ ಶ್ರಾವಣಿ ಆಕ್ರೋಶ
Recommended Video

ಬಿಗ್ ಬಾಸ್ ಕನ್ನಡ 5 ಕಾರ್ಯಕ್ರಮದಲ್ಲಿ ನಡೆಯಬಾರದೊಂದು ಘಟನೆ ನಿನ್ನೆ (ಡಿಸೆಂಬರ್ 20) ನಡೆದುಹೋಗಿದೆ. ಬಿಗ್ ಬಾಸ್ ಸ್ಪರ್ಧಿ ಸಮೀರಾಚಾರ್ಯ ಅವರ ಮೇಲೆ ಬಿಗ್ ಬಾಸ್ ಗೆ ಅತಿಥಿಯಾಗಿ ಬಂದಿದ್ದ ಸಂಯುಕ್ತಾ ಹೆಗಡೆ ದೈಹಿಕ ಹಲ್ಲೆ ಮಾಡಿಬಿಟ್ಟಿದ್ದಾರೆ.
ಈ ಘಟನೆಯ ಬಳಿಕ ಬಿಗ್ ಬಾಸ್ ಕಾರ್ಯಕ್ರಮದಿಂದ ಸಂಯುಕ್ತಾ ಹೆಗಡೆ ಅವರನ್ನ ಹೊರಗೆ ಕಳುಹಿಸಲಾಗಿದೆ. ಇತ್ತ ಮನೆ ಹೊರಗೆ ಸಮೀರ್ ಅವರ ಮೇಲಿನ ಹಲ್ಲೆ ಖಂಡಿಸಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿಗಳು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಜನರು ಸಂಯುಕ್ತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮತ್ತೊಂದೆಡೆ ತಮ್ಮ ಪತಿಯ ಮೇಲೆ ಸಂಯುಕ್ತಾ ಮಾಡಿದ ಹಲ್ಲೆಯನ್ನ ಸಮೀರಾಚಾರ್ಯ ಅವರ ಪತ್ನಿ ಕೂಡ ವಿರೋಧಿಸಿದ್ದಾರೆ. ಸಂಯುಕ್ತಾ ವಿರುದ್ಧ ಕೋಪಗೊಂಡಿದ್ದಾರೆ. ಹಾಗಿದ್ರೆ, ಈ ಘಟನೆ ಬಗ್ಗೆ ಮತ್ತು ನಟಿ ಸಂಯುಕ್ತಾ ಹೆಗಡೆ ಬಗ್ಗೆ ಸಮೀರಾಚಾರ್ಯ ಅವರ ಪತ್ನಿ ಏನು ಹೇಳಿದರು ಎಂದು ಮುಂದೆ ಓದಿ.......

ನಮಗೆ ಅಚ್ಚರಿ ಆಯ್ತು
''ನನಗೆ, ನಮ್ಮ ಅತ್ತೆ, ಮಾವ ಎಲ್ಲರಿಗೂ ಶಾಕ್ ಆಯ್ತು. ಈ ಘಟನೆ ನಡೆಯುವುದಕ್ಕು ಮುಂಚೆಯೇ ಸಂಯುಕ್ತಾ, ಸಮೀರ್ ಅವರಿಗೆ ಹೊಡೆಯವುದಾಗಿ ಹೇಳುತ್ತಿದ್ದರು. ಅದನ್ನ ಕೇಳಿ ನಮ್ಮ ಮನೆಯವರಿಗೆ ಒಂದು ರೀತಿಯ ಅಚ್ಚರಿ ಉಂಟಾಯಿತು. ಅದ್ಯಾಕೇ ಈ ಹುಡುಗಿ ಹೀಗೆ ಮಾತನಾಡ್ತಿದ್ದಾಳೆ ಅಂತ'' - ಶ್ರಾವಣಿ, ಸಮೀರಾಚಾರ್ಯ ಪತ್ನಿ

ಟಾಸ್ಕ್ ನಲ್ಲಿ ಅದು ಸಾಮಾನ್ಯ
''ಟಾಸ್ಕ್ ನಲ್ಲಿ ಸಮೀರಾಚಾರ್ಯ ಅವರು ಮುಳುಗಿ ಹೋಗ್ತಾರೆ. ಆಟ ಅಂತ ಬಂದಾಗ ಅವರು ಸೀರಿಯಸ್ ಆಗಬಿಡ್ತಾರೆ. ಈ ವೇಳೆ ತಳ್ಳುವುದು, ದೂಕುವುದು ಸಾಮಾನ್ಯ. ಆದ್ರೆ, ಅಸಭ್ಯವಾಗಿ ಮುಟ್ಟಿದರು ಎನ್ನುವುದು ಸರಿಯಲ್ಲ. ಅದಕ್ಕು ಮುಂಚೆ ಚಂದನ್ ಅವರ ಮೇಲೆ ಸಂಯುಕ್ತಾ ಅವರು ಹೇಗೆ ಕೂತಿದ್ದರು ಎಂಬುದು ಗಮನಿಸಬೇಕು'' - ಶ್ರಾವಣಿ, ಸಮೀರಾಚಾರ್ಯ ಪತ್ನಿ

ಆ ಜಾಗದಲ್ಲಿ ನಾನಿದಿದ್ದರೇ ಅವಳಿಗೆ ಹೊಡಿತ್ತಿದ್ದೆ
''ಸಂಯುಕ್ತಾ ಅವರು ಕೆಳಗೆ ಬಿದ್ದಿದ್ದು ನಿಜ. ಆದ್ರೆ, ಅವಳನ್ನ ಬೀಳಿಸಿದ್ದು ಮಾತ್ರ ಆಚಾರ್ಯ ಅವರಲ್ಲ. ಕೆಳಗೆ ಯಾರು ಬೀಳಿಸಿದ್ದು ಅಂತ ಗೊತ್ತಾಗಲಿಲ್ಲ. ಆದ್ರೆ, ಎದ್ದ ತಕ್ಷಣ ಜೆ.ಕೆ ಅಲ್ಲ, ನೀನೇ ನೀನೇ ಅಂತ ಹೇಳಿ ಏಕಾಏಕಿ ಹೊಡೆದಳು. ಆ ಜಾಗದಲ್ಲಿ ನಾನಿದಿದ್ದರೇ ಖಂಡಿತಾ ಆಕೆಗೆ ತಿರುಗಿ ಹೊಡಿತ್ತಿದ್ದೆ'' - ಶ್ರಾವಣಿ, ಸಮೀರಾಚಾರ್ಯ ಪತ್ನಿ

ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಲಾಗಿದೆ
''ಪಾಸಿಟೀವ್ ಆಗಿ ಒಬ್ಬ ಮನುಷ್ಯನನ್ನ ಇಷ್ಟ ಪಟ್ಟಿದ್ದಾರೆ ಅಂದ್ರೆ ಅವರು ಕೊಲೆ ಮಾಡಿದ್ರು ಕೂಡ ಇಷ್ಟ ಆಗ್ತಾರೆ. ಆದ್ರೆ, ಇಷ್ಟ ಪಡದೆ ಹೋದ್ರೆ, ಅವರು ಏನೇ ಮಾಡಿದ್ರು ಅದು ಕೆಟ್ಟದಾಗಿ ತಗೋಳ್ತಾರೆ. ಇದು ಹೀಗೆ ಆಗಿದ್ದು, ಉದ್ದೇಶಪೂರ್ವಕವಾಗಿ ಹೊಡೆದಳಾ ಎನಿಸಿತ್ತು'' - ಶ್ರಾವಣಿ, ಸಮೀರಾಚಾರ್ಯ ಪತ್ನಿ

ಹೆಣ್ಣು ರೂಪದ ರಾಕ್ಷಿಸಿ
''ಸಾಮಾನ್ಯವಾಗಿ ನನ್ನ ಗಂಡನಿಗೆ ಏಕವಚನದಲ್ಲಿ ಮಾತನಾಡಿದ್ರೆ ನನಗೆ ಕೋಪ ಬರುತ್ತೆ. ಆದ್ರೆ, ಅವಳು ಹೊಡಿಯುತ್ತಾಳೆ ಅಂದ್ರೆ ಎಷ್ಟು ಧೈರ್ಯವಿರಬೇಕು. ಆಕೆ ಹೆಣ್ಣು ರೂಪದ ರಾಕ್ಷಿಸಿ ಎನಿಸಿಬಿಡ್ತು. ನಾನು ಹೋಗಿ ಅವಳ ಜೊತೆಯಲ್ಲಿ ಜಗಳವಾಡಬೇಕು ಎನ್ನುವಷ್ಟು ಕೋಪ ಬಂದಿತ್ತು'' - ಶ್ರಾವಣಿ, ಸಮೀರಾಚಾರ್ಯ ಪತ್ನಿ

ಈ ಘಟನೆ ಉಲ್ಟಾ ಆಗಿದ್ರೆ?
''ಹುಡುಗಿಯರು ಕಣ್ಣೀರು ಹಾಕಿದ್ರೆ ಗಂಡು ಮಕ್ಕಳದ್ದೇ ತಪ್ಪು ಅಂತ ಆಗುತ್ತೆ. ಈಗ ಇದೇ ಘಟನೆ ಉಲ್ಟಾ ಆಗಿದ್ರೆ? ನಮಗೂ ಕೂಡ ಮಾನ ಇರುತ್ತೆ. ಆಕೆ ಮೇಲೆ ಮಾನನಷ್ಟ ಮೊಕದ್ದಮೆ ಹಾಕಬಹುದು ಅಲ್ವಾ! ಆದ್ರೆ, ನಾವು ಹಾಗೆ ಮಾಡಲ್ಲ. ಯಾಕಂದ್ರೆ, ಹೆಣ್ಣು ಹುಡುಗಿ. ಅವಳಿಗೂ ಮದುವೆ ಆಗುತ್ತೆ ಎಂಬ ಕಾರಣದಿಂದ ಬೇಡ ಅನಿಸುತ್ತಿದೆ'' - ಶ್ರಾವಣಿ, ಸಮೀರಾಚಾರ್ಯ ಪತ್ನಿ

ನನಗೂ ಪಾಪ ಅನಿಸುತ್ತೆ
''ಸಂಯುಕ್ತಾ ಅವರನ್ನ ನೆನಸಿಕೊಂಡ್ರೆ ಒಂದು ಕಡೆ ಪಾಪ ಅನಿಸುತ್ತೆ. ಅವರ ತಂದೆ-ತಾಯಿ ಈ ಘಟನೆಯನ್ನ ಹೇಗೆ ಸ್ವೀಕರಿಸುತ್ತಾರೋ ಎಂಬ ಆಲೋಚನೆ ನನ್ನದು. ಖಂಡಿತಾ ಅವರಿಗೂ ಬೇಜಾರಾಗಿರುತ್ತೆ'' - ಶ್ರಾವಣಿ, ಸಮೀರಾಚಾರ್ಯ ಪತ್ನಿ
ಸಮೀರಾಚಾರ್ಯ ಅವರ ಪತ್ನಿ ಶ್ರಾವಣಿ ಅವರು ಸುವರ್ಣ ವಾಹಿನಿಯಲ್ಲಿ ಮಾತನಾಡಿದ ಸಂದರ್ಶನದಲ್ಲಿ ಮಾತನಾಡಿದರು.


Click it and Unblock the Notifications











