Actress Samriddhi Ram: ನಟಿಯಾಗಿದ್ದ ಸಮೃದ್ಧಿ ರಾಮ್ ಇದೀಗ ಮೇಕಪ್ ಆರ್ಟಿಸ್ಟ್ ಆಗಿದ್ದೇಗೆ?
ಕಿರುತೆರೆಯ ಮೂಲಕ ನಟನೆಗೆ ಕಾಲಿಟ್ಟವರು ಮತ್ತೆ ಹಿರಿತೆರೆಯಲ್ಲಿ ಅಥವಾ ಪರಭಾಷೆಯ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ತೀರಾ ಸಾಮಾನ್ಯವಾದ ಸಂಗತಿ. ಆದರೆ, ಈಕೆಯ ವಿಚಾರದಲ್ಲಿ ಹಾಗಲ್ಲ. ಒಂದೆರಡು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ ಈಕೆ ಮತ್ತೆ ಬಣ್ಣ ಹಚ್ಚಿದ್ದು ಕಂಡವರಿಲ್ಲ. ನಟನೆಯಿಂದ ದೂರವಿರುವ ಈಕೆ ಮೇಕಪ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಈಕೆ ಬೇರಾರೂ ಅಲ್ಲ, ನಟಿ ಕಾರುಣ್ಯಾ ರಾಮ್ ತಂಗಿ ಸಮೃದ್ಧಿ ರಾಮ್.
'ಒಂದೂರಲ್ಲಿ ರಾಜ ರಾಣಿ' ಧಾರಾವಾಹಿಯಲ್ಲಿ ಶಿವಾನಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟ ಸಮೃದ್ಧಿ ರಾಮ್ ತದ ನಂತದ ಬದಲಾಗಿದ್ದು ಖಳನಾಯಕಿಯಾಗಿ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಮನೆದೇವ್ರು' ಧಾರಾವಾಹಿಯಲ್ಲಿ ನಾಯಕಿ ಜಾನಕಿಯ ಚಿಕ್ಕಮ್ಮನ ಮಗಳು ಪ್ರೀತಿ ಆಗಿ ಕಾಣಿಸಿಕೊಂಡಿದ್ದ ಸಮೃದ್ಧಿ ವಿಲನ್ ಆಗಿ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

ನಟನೆಗೆ ಬಂದಿದ್ದು ತಡವಾಗಿ
ಮೊದಲಿನಿಂದಲೂ ಅಕ್ಕ ಕಾರುಣ್ಯಾ ರಾಮ್ ಜೊತೆಗೆ ಶೂಟಿಂಗ್‌ಗೆ ತೆರಳುತ್ತಿದ್ದ ಸಮೃದ್ಧಿ ರಾಮ್‌ರನ್ನು ಕಂಡವರೆಲ್ಲಾ ನೀವು ನಟಿಸುವುದಿಲ್ಲವಾ ಎಂದೇ ಕೇಳುತ್ತಿದ್ದರು. ಆದರೆ, ಅಕ್ಕ ಓಕೆ ಎನ್ನದ ಕಾರಣ ಸಮೃದ್ಧಿ ರಾಮ್ ನಟನೆಗೆ ಕಾಲಿಟ್ಟಿರಲಿಲ್ಲ. ಮುಂದೆ ನಟನೆಗೆ ಈಕೆ ಪಾದಾರ್ಪಣೆ ಮಾಡಿದರೂ ನಟಿಸಿದ್ದು ಬರೀ ಎರಡು ಧಾರಾವಾಹಿಗಳಲ್ಲಷ್ಟೇ.
ನಟಿಯಾಗಿ ಗುರುತಿಸಿಕೊಂಡಿರಲು ಅಕ್ಕ ಕಾರಣ
ಮೊದಲಿನಿಂದಲೂ ಅಕ್ಕ ಕಾರುಣ್ಯಾ ರಾಮ್ ಅವರೊಂದಿಗೆ ಸಮೃದ್ಧಿ ರಾಮ್ ಕೂಡಾ ಶೂಟಿಂಗ್‌ಗೆ ತೆರಳುತ್ತಿದ್ದ ಕಾರಣ ಅವರಿಗೆ ಮೊದಲ ಬಾರಿ ಕ್ಯಾಮೆರಾ ಎದುರಿಗೆ ಬಂದಾಗ ಸ್ವಲ್ಪವೂ ಭಯವಾಗಿರಲಿಲ್ಲವಂತೆ. ಇಂದು ಆಕೆ ನಟಿಯಾಗಿ ಗುರುತಿಸಿಕೊಳ್ಳಲು ಆಕೆಯ ಅಕ್ಕನೇ ಕಾರಣವಂತೆ. ಈಗ ಮೇಕಪ್ ಆರ್ಟಿಸ್ಟ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರೆ ಅಕ್ಕನ ಪ್ರೋತ್ಸಾಹ ಕಾರಣ ಎಂದು ಹೇಳುವ ಸಮೃದ್ಧಿ ರಾಮ್‌ಗೆ ಅಕ್ಕ ಕಾರುಣ್ಯಾ ರಾಮ್ ಅವರೇ ರೋಲ್ ಮಾಡೆಲ್.

ನೆಗೆಟಿವ್ ರೋಲ್ ಖುಷಿ ಕೊಟ್ಟಿತ್ತಂತೆ
ಅಂದ ಹಾಗೇ ಪ್ರೀತಿ ಪಾತ್ರದ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಸಮೃದ್ಧಿ ರಾಮ್‌ಗೆ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿರುವುದು ಸಂತಸ ನೀಡಿತ್ತಂತೆ. ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲು ಎಲ್ಲರಿಂದಲೂ ಸಾಧ್ಯವಿಲ್ಲ. ನೆಗೆಟಿವ್ ರೋಲ್‌ನಲ್ಲಿ ನಟಿಸಲು ಎಕ್ಸ್ ಪ್ರೆಶನ್ ಕೂಡಾ ತುಂಬಾ ಮುಖ್ಯ. ಹಾಗಾಗಿ ನಟಿಸಲು ಖುಷಿಯಾಗಿತ್ತಂತೆ. ಸದ್ಯಕ್ಕೀಗ ನಟನೆಯಿಂದ ಮೇಕಪ್ ಆರ್ಟಿಸ್ಟ್ ಆಗಿ ಬದಲಾಗಿದ್ದಾರೆ. ಹಾಗೇ ಮುಂದಿನ ದಿನಗಳಲ್ಲಿ ನಟನೆಗೆ ಮರಳುತ್ತಾರಾ? ಅನ್ನೋ ಪ್ರಶ್ನೆನೂ ಇದೆ.


Click it and Unblock the Notifications










