ರೋಮ್ಯಾಂಟಿಕ್ ಮೂಡ್ ಬಂದಾಗ ಈ ನಟಿಗೆ ಸುದೀಪ್ ನೆನಪಾಗುತ್ತಾರಂತೆ!
ನಟ ಕಿಚ್ಚ ಸುದೀಪ್ ಕಂಡರೆ ಹುಡುಗಿಯರ ಹಾರ್ಟ್ ಬೀಟ್ ಜಾಸ್ತಿಯಾಗುತ್ತದೆ. ಸುದೀಪ್ ಅವರ ಹೈಟು, ಲುಕ್, ಖದರ್ ಕಂಠಕ್ಕೆ ಮಾರುಹೋಗದ ಹುಡುಗಿಯರೇ ಇಲ್ಲ.!
ಅದೇ ರೀತಿ ನಟಿ ಸಂಯುಕ್ತ ಹೊರನಾಡು ಅವರಿಗೂ ಸುದೀಪ್ ಅಂದರೆ ಸಖತ್ ಇಷ್ಟ ಅಂತೆ.

ಇತ್ತೀಚಿಗೆ ನಟಿ ಸಂಯುಕ್ತ ಹೊರನಾಡು ಕಿರುತೆರೆಯ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ಬಂದಿದ್ದರು. ಕಾರ್ಯಕ್ರಮದ Rapid Fire ರೌಂಡ್ ನಲ್ಲಿ, ''ರೊಮ್ಯಾಂಟಿಕ್ ಮೂಡ್ ನಲ್ಲಿ ನಿಮಗೆ ನೆನಪಾಗುವ ನಟ ಯಾರು.?'' ಎಂದು ಅಕುಲ್ ಬಾಲಾಜಿ ಪ್ರಶ್ನೆ ಕೇಳಿದ್ದರು. ಆಗ ಸಂಯುಕ್ತ ಸುದೀಪ್... ಸುದೀಪ್ ಸರ್.. ಎಂದು ಪಟ್ ಅಂತ ಉತ್ತರಿಸಿದರು.

ಜೊತೆಗೆ ಊಟ ಅಂದರೆ ಸಿಹಿ ಕಹಿ ಚಂದ್ರು, ಸಿನಿಮಾ ಅಂದರೆ ಹೃತಿಕ್ ರೋಷನ್ ನೆನಪಾಗುತ್ತಾರೆ ಅಂತ ಸಂಯುಕ್ತ ಹೇಳಿದರು. ಸಂಯುಕ್ತ 'ಜಿಗರ್ ಥಂಡ', 'ಲೈಫು ಇಷ್ಟೇನೆ' ಸೇರಿದಂತೆ ಕೆಲ ಸಿನಿಮಾ ಮಾಡಿದ್ದಾರೆ.
More from Filmibeat
English summary
Kannada Actress Samyukta hornad Spoke About Sudeep In Colors Super Channel's popular show 'Super talk time'.


Click it and Unblock the Notifications











