ಈ ವಾರ 'ಕಳಪೆ ಜೋಡಿ' ಮತ್ತು 'ಬೆಸ್ಟ್ ಜೋಡಿ' ಯಾರು?
Recommended Video

ಪ್ರತಿವಾರದ ಅಂತ್ಯದಲ್ಲಿ ನಾಮಿನೇಷನ್ ಗಿಂತ ಕಳಪೆ ಪರ್ಫಾಮರ್ ಯಾರು ಮತ್ತು ಬೆಸ್ಟ್ ಪರ್ಫಾಮರ್ ಯಾರು ಎಂದು ನಿರ್ಣಯ ತೆಗೆದುಕೊಳ್ಳುವುದೇ ದೊಡ್ಡ ಟಾಸ್ಕ್ ಆಗಿದೆ. ಯಾಕಂದ್ರೆ, ಈ ಹಿಂದಿನ ವಾರಗಳಲ್ಲಿ ಈ ನಿರ್ಧಾರದಿಂದ ಮನೆಯಲ್ಲಿ ಮತ್ತು ಮನೆ ಹೊರಗೆ ದೊಡ್ಡ ದೊಡ್ಡ ಚರ್ಚೆಗಳು ಆಗಿವೆ. ಹೀಗಾಗಿ ಈ ವಾರವೂ ಆ ಕುತೂಹಲ ಹಾಗೆ ಇದೆ.
ಅಂದ್ಹಾಗೆ, ಈ ವಾರ 'ಬಿಗ್ ಬಾಸ್' ಸ್ಪರ್ಧಿಗಳಿಗೆ ಜೋಡಿ ಟಾಸ್ಕ್ ನೀಡಲಾಗಿತ್ತು. ಅದರ ಅನುಸಾರ ಇಬ್ಬಿಬ್ಬರು ಸ್ಪರ್ಧಿಗಳು ಕೈಯಲ್ಲಿ ಕೋಳ ಹಾಕ್ಕೊಂಡು ಆಟವಾಡಬೇಕಿತ್ತು. ಈ ಟಾಸ್ಕ್ ನಿನ್ನೆಗೆ (ಡಿಸೆಂಬರ್ 15) ಅಂತ್ಯವಾಗಿದ್ದು, ಮನೆ ಕ್ಯಾಪ್ಟನ್ ಆಯ್ಕೆಯ ಪ್ರಕಾರ ಈ ವಾರದ ಕಳಪೆ ಬೋರ್ಡ್ ಮತ್ತು ಬೆಸ್ಟ್ ಪರ್ಫಾಮರ್ ನೀಡಲಾಯಿತು.
ಹಾಗಿದ್ರೆ, ಈ ವಾರ ಕಳಪೆ ಬೋರ್ಡ್ ಪಡೆದುಕೊಂಡ ಜೋಡಿ ಯಾರು? ಬೆಸ್ಟ್ ಪರ್ಫಾಮರ್ ನೀಡಿದ ಜೋಡಿ ಯಾರು ಎಂದು ತಿಳಿದುಕೊಳ್ಳಲು ಮುಂದೆ ಓದಿ...

ಬೆಸ್ಟ್ ಜೋಡಿ
ವಾರ ಪೂರ್ತಿ ಯಶಸ್ವಿ ಆಟವಾಡಿದ ಅನುಪಮಾ ಗೌಡ ಮತ್ತು ಶ್ರುತಿ ಪ್ರಕಾಶ್ ಅವರಿಗೆ ಈ ವಾರದ ಬೆಸ್ಟ್ ಪರ್ಫಾಮರ್ ಎಂದು ಮನೆಯ ನಾಯಕಿ ಕೃಷಿ ಅವರು ಘೋಷಿಸಿದರು.

ಕಳಪೆ ಜೋಡಿ
ಅದೇ ರೀತಿ ಈ ವಾರದ ಟಾಸ್ಕ್ ನಲ್ಲಿ ಯಾವ ಆಟವನ್ನ ಗೆಲ್ಲದ ಹಾಗೂ ಕಳಪೆ ಆಟವಾಡಿದ ಸಂಯುಕ್ತ ಹೆಗಡೆ ಹಾಗೂ ಲಾಸ್ಯ ನಾಗ್ ಅವರಿಗೆ ಕಳಪೆ ಬೋರ್ಡ್ ನೀಡಿದರು.

ಕ್ಯಾಪ್ಟನ್ ಮನಗೆದ್ದ ಜೋಡಿ
ಇನ್ನು ಈ ವಾರ ಕ್ಯಾಪ್ಟನ್ ಮನಗೆದ್ದ ಜೋಡಿ ಯಾರು ಎಂದು ಬಿಗ್ ಬಾಸ್ ಕೇಳಿದ ಹಿನ್ನೆಲೆ ಕೃಷಿ ಅವರು ''ಜಗನ್ ಮತ್ತು ಜೆಕೆ'' ಅವರ ಹೆಸರು ಸೂಚಿಸಿದರು. ಅವರಿಗೆ ವಿಶೇಷ ಲಕ್ಷುರಿ ಬಜೆಟ್ ಅಂಕಗಳನ್ನ ನೀಡಲಾಯಿತು.

ಈ ವಾರ ಎಲಿಮಿನೇಟ್ ಯಾರಾಗಬಹುದು?
ಇನ್ನು ಈ ವಾರ ದಿವಾಕರ್, ಜಯಶ್ರೀನಿವಾಸನ್, ಚಂದನ್ ಶೆಟ್ಟಿ, ಶ್ರುತಿ ಪ್ರಕಾಶ್, ಜಗನ್ ಹಾಗೂ ಸಮೀರಾಚಾರ್ಯ ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಈ ಆರು ಜನರಲ್ಲಿ ಯಾರಿಗೆ ಗೇಟ್ ಪಾಸ್ ಸಿಗಲಿದೆ ಎಂದು ಶನಿವಾರ ನಿರ್ಣಯವಾಗಲಿದೆ.


Click it and Unblock the Notifications











