ಎಂಟಿವಿ 'ಸ್ಪ್ಲಿಟ್ಸ್ ವಿಲ್ಲಾ'ದಲ್ಲೂ ನಟಿ ಸಂಯುಕ್ತ ಹೆಗಡೆ ಕಿರಿಕ್.!

'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಅಭಿನಯಿಸಿದ ನಟಿ ಸಂಯುಕ್ತ ಹೆಗ್ಡೆ ಎಂಟಿವಿಯ 'ಸ್ಪ್ಲಿಟ್ಸ್ ವಿಲ್ಲಾ' ಎಂಬ ಡೇಟಿಂಗ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿರುವುದು ನಿಮಗೆಲ್ಲ ಗೊತ್ತೇ ಇದೆ.

'ಸ್ಪ್ಲಿಟ್ಸ್ ವಿಲ್ಲಾ-11'ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿರುವ ನಟಿ ಸಂಯುಕ್ತ ಹೆಗ್ಡೆ ಅದಾಗಲೇ ಶೋನಲ್ಲಿ ಇತರೆ ಸ್ಪರ್ಧಿಗಳ ಜೊತೆಗೆ ಕಿರಿಕ್ ಮಾಡಿಕೊಂಡಿದ್ದಾರೆ. ಸಂಯುಕ್ತ ಹಾಗೂ ಅನುಷ್ಕಾ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಸಂಯುಕ್ತ ಕಣ್ಣೀರು ಸುರಿಸಿದ್ದಾರೆ.

'ಸ್ಪ್ಲಿಟ್ಸ್ ವಿಲ್ಲಾ-11' ಕಾರ್ಯಕ್ರಮಕ್ಕೆ ನಟಿ ಸಂಯುಕ್ತ ಹೆಗ್ಡೆ ಎಂಟ್ರಿಕೊಟ್ಟು ಒಂದು ದಿನ ಕಳೆದಿದೆ ಅಷ್ಟೇ. ಅಷ್ಟು ಬೇಗ ಸಂಯುಕ್ತ ರನ್ನ ಹೊರಗೆ ಹಾಕಲು ಇತರೆ ಸ್ಪರ್ಧಿಗಳು ಪ್ಲಾನ್ ಮಾಡಿದ್ದಾರೆ. ಮುಂದೆ ಓದಿರಿ...

ಮೈರಾಗೆ ಸಿಟ್ಟು.!

ಮೈರಾಗೆ ಸಿಟ್ಟು.!

'ಸ್ಪ್ಲಿಟ್ಸ್ ವಿಲ್ಲಾ-11' ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟ ನಟಿ ಸಂಯುಕ್ತ ಮೇಲೆ ಸಿಂಬಾ ಆಕರ್ಷಿತಗೊಂಡಿದ್ದಾರೆ. ಹಾಗ್ನೋಡಿದ್ರೆ, ಇಲ್ಲಿಯವರೆಗೂ ಸಿಂಬಾ ಹಾಗೂ ಮೈರಾ ನಡುವೆ ಕನೆಕ್ಷನ್ ಇತ್ತು. ಇಬ್ಬರೂ ಒರಾಕಲ್ ಮುಂದೆ ಹೋಗಲು ಮನಸ್ಸು ಮಾಡಿದ್ದರು. ಆದ್ರೆ, ಅಷ್ಟರಲ್ಲಿ ಸಂಯುಕ್ತ ಬಂದ ಕಾರಣ, ಸಿಂಬಾ ಕಣ್ಣು ಸಂಯುಕ್ತ ಮೇಲೆ ಬಿದ್ದಿದೆ. ಸಂಯುಕ್ತಗಾಗಿ ಸಿಂಬಾ ತಮಗೆ ಕೈಕೊಟ್ಟ ಕಾರಣ ಮೈರಾ ಸಿಟ್ಟು ಮಾಡಿಕೊಂಡಿದ್ದಾರೆ.

ಬಿಕಿನಿಯಲ್ಲಿ ಮಿಂಚಿದ ಸಂಯುಕ್ತ

ಬಿಕಿನಿಯಲ್ಲಿ ಮಿಂಚಿದ ಸಂಯುಕ್ತ

'ಸ್ಪ್ಲಿಟ್ಸ್ ವಿಲ್ಲಾ-11' ರಿಯಾಲಿಟಿ ಶೋನಲ್ಲಿ ಬಿಕಿನಿ ತೊಟ್ಟು ಹುಡುಗರ ಎದೆಬಡಿತವನ್ನ ಜೋರು ಮಾಡಿದ್ದಾರೆ ನಟಿ ಸಂಯುಕ್ತ ಹೆಗ್ಡೆ. ಸಂಯುಕ್ತ ಒನಪು ವೈಯ್ಯಾರಕ್ಕೆ ಸ್ಪರ್ಧಿ ಸಿಂಬಾ ಕ್ಲೀನ್ ಬೌಲ್ಡ್ ಆಗಿದ್ದಾರೆ.

ಸಿಂಬಾ-ಸಂಯುಕ್ತ ನಡುವೆ ಸಂಥಿಂಗ್ ಸಂಥಿಂಗ್

ಸಿಂಬಾ-ಸಂಯುಕ್ತ ನಡುವೆ ಸಂಥಿಂಗ್ ಸಂಥಿಂಗ್

ಸಿಂಬಾ ಹಾಗೂ ಸಂಯುಕ್ತ ನಡುವೆ ಕನೆಕ್ಷನ್ ಶುರುವಾಗಿದೆ. ಸಿಂಬಾ ಹಾಗೂ ಸಂಯುಕ್ತ 'ಟೆಸ್ಟ್ ಯುವರ್ ಬಾಂಡ್' ಚಾಲೆಂಜ್ ನಲ್ಲಿ ಪಾಲ್ಗೊಂಡು ಸೋಲು ಅನುಭವಿಸಿದ್ದಾರೆ.

ಔಟ್ ಅಗ್ತಾರಾ ಸಂಯುಕ್ತ.?

ಔಟ್ ಅಗ್ತಾರಾ ಸಂಯುಕ್ತ.?

ಒಂದೇ ದಿನದಲ್ಲಿ ಹಲವರ ಕೆಂಗಣ್ಣಿಗೆ ನಟಿ ಸಂಯುಕ್ತ ಹೆಗ್ಡೆ ಗುರಿಯಾಗಿದ್ದಾರೆ. ಸಂಯುಕ್ತ ಹೆಗ್ಡೆ ರನ್ನ ಔಟ್ ಮಾಡಲು ಇತರೆ ಸ್ಪರ್ಧಿಗಳು ಮುಂದಾಗಿದ್ದಾರೆ. 'ಸ್ಪ್ಲಿಟ್ಸ್ ವಿಲ್ಲಾ-11' ಕಾರ್ಯಕ್ರಮದಲ್ಲಿ ಸಂಯುಕ್ತ ಸೇಫ್ ಆಗಿರ್ತಾರಾ, ಔಟ್ ಆಗ್ತಾರಾ ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

More from Filmibeat

English summary
Kannada Actress Samyuktha Hegde becomes target in MTV Splitsvilla 11 reality show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X