ಡೇಟಿಂಗ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾದ 'ಕಿರಿಕ್' ಹುಡುಗಿ ಸಂಯುಕ್ತ.!
Recommended Video

'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲೂ ಮನೆ ಮಾತಾದ ಚೆಲುವೆ ಸಂಯುಕ್ತ ಹೆಗ್ಡೆ. 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ಅಭಿನಯಿಸಿದ್ಮೇಲೆ ಎಂಟಿವಿ ರೋಡೀಸ್ ರಿಯಾಲಿಟಿ ಶೋನಲ್ಲಿ ಸಂಯುಕ್ತ ಸ್ಪರ್ಧಿಯಾಗಿ ಪಾಲ್ಗೊಂಡರು.
ರೋಡೀಸ್ ಮುಗಿಸಿಕೊಂಡು ಬಂದ್ಮೇಲೆ, ಸ್ಯಾಂಡಲ್ ವುಡ್ ನಲ್ಲಿ ಸಂಯುಕ್ತ ಮಾಡಿಕೊಂಡ ಕಿರಿಕ್ ಗಳು ನಿಮಗೆಲ್ಲ ಗೊತ್ತೇ ಇದೆ. 'ಬಿಗ್ ಬಾಸ್' ಮನೆಗೆ ಅತಿಥಿಯಾಗಿ ಹೋಗಿ ಸಮೀರಾಚಾರ್ಯ ಮೇಲೆ ಹಲ್ಲೆ ಮಾಡಿದ ಸಂಯುಕ್ತ ಹೆಗ್ಡೆ ವಿವಾದದ ಕೇಂದ್ರ ಬಿಂದು ಆದರು.
ಬಳಿಕ ಗಾಂಧಿನಗರದ ಕಡೆ ಸಂಯುಕ್ತ ಹೆಗ್ಡೆ ಕಾಣಿಸಿಕೊಂಡಿದ್ದು ತೀರಾ ಕಡಿಮೆ. ಇದೀಗ ಸಂಯುಕ್ತ ಹೆಗ್ಡೆ ಮತ್ತೆ ರಾಷ್ಟ್ರೀಯ ವಾಹಿನಿ ಎಂಟಿವಿ ಕಡೆ ಮುಖ ಮಾಡಿದ್ದಾರೆ. ಜನಪ್ರಿಯ ಡೇಟಿಂಗ್ ಶೋ 'ಸ್ಪ್ಲಿಟ್ಸ್ ವಿಲ್ಲಾ' ದಲ್ಲಿ ನಟಿ ಸಂಯುಕ್ತ ಹೆಗ್ಡೆ ಸ್ಪರ್ಧಿಯಾಗಿ ಪಾಲ್ಗೊಂಡಿದ್ದಾರೆ. ಮುಂದೆ ಓದಿರಿ...

ಸ್ಪ್ಲಿಟ್ಸ್ ವಿಲ್ಲಾ-11 ನಲ್ಲಿ ಸ್ಪರ್ಧಿಸಿದ ಸಂಯುಕ್ತ
ಮಾದಕ ಬೆಡಗಿ ಸನ್ನಿ ಲಿಯೋನ್ ಹಾಗೂ ರಣ್ ವಿಜಯ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ 'ಸ್ಪ್ಲಿಟ್ಸ್ ವಿಲ್ಲಾ-11' ಡೇಟಿಂಗ್ ರಿಯಾಲಿಟಿ ಶೋನಲ್ಲಿ ಕನ್ನಡ ನಟಿ ಸಂಯುಕ್ತ ಹೆಗ್ಡೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ.

ಡ್ಯಾನ್ಸ್ ಮಾಡಿದ ಸಂಯುಕ್ತ ಹೆಗ್ಡೆ
'ಸ್ಪ್ಲಿಟ್ಸ್ ವಿಲ್ಲಾ-11' ಕಾರ್ಯಕ್ರಮದಲ್ಲಿ ಜೋಡಿಗಳ ಡ್ಯಾನ್ಸ್ ರೌಂಡ್ ಚಾಲ್ತಿಯಲ್ಲಿತ್ತು. ಎಲ್ಲಾ ಜೋಡಿಗಳ ಪರ್ಫಾಮೆನ್ಸ್ ಮುಗಿದ ಬಳಿಕ ವೇದಿಕೆ ಮೇಲೆ ಬಂದ ಸಂಯುಕ್ತ ಸೊಂಟ ಬಳುಕಿಸಿದರು. ಅಲ್ಲದೇ, ತಾವು ವೈಲ್ಡ್ ಕಾರ್ಡ್ ಸ್ಪರ್ಧಿ ಎಂತಲೂ ಸ್ಪಷ್ಟ ಪಡಿಸಿದರು.

ಸಂಯುಕ್ತಗೆ ಇದ್ಯಾ ಐಡಿಯಲ್ ಮ್ಯಾಚ್.?
ಇಲ್ಲಿಯವರೆಗೂ 'ಸ್ಪ್ಲಿಟ್ಸ್ ವಿಲ್ಲಾ-11' ಕಾರ್ಯಕ್ರಮದಲ್ಲಿ ಮೂರು ಜೋಡಿಗಳು ಮಾತ್ರ ಐಡಿಯಲ್ ಮ್ಯಾಚ್ ಆಗಿವೆ. ಉಳಿದ ಪುರುಷ ಸ್ಪರ್ಧಿಗಳ ಪೈಕಿ ಯಾರಾದರೂ ಒಬ್ಬರು ಸಂಯುಕ್ತಗೆ ಐಡಿಯಲ್ ಮ್ಯಾಚ್ ಆಗ್ತಾರಾ, ಕಾದು ನೋಡಬೇಕು.

ಪ್ರೀತಿ ಅರಸಿ 'ಸ್ಪ್ಲಿಟ್ಸ್ ವಿಲ್ಲಾ'ಗೆ ಬಂದ್ರಾ ಸಂಯುಕ್ತ.?
ಪ್ರೀತಿಯನ್ನ ಅರಸಿ ನಟಿ ಸಂಯುಕ್ತ ಹೆಗ್ಡೆ 'ಸ್ಪ್ಲಿಟ್ಸ್ ವಿಲ್ಲಾ' ಶೋನಲ್ಲಿ ಸ್ಪರ್ಧಿಸಿದ್ರಾ.? ಈ ಪ್ರಶ್ನೆಗೆ ಸ್ವತಃ ಅವರೇ ಉತ್ತರ ಕೊಡಬೇಕು. ಅಂದ್ಹಾಗೆ, 'ಸ್ಪ್ಲಿಟ್ಸ್ ವಿಲ್ಲಾ-11' ಕಾರ್ಯಕ್ರಮದಲ್ಲೂ ಸಂಯುಕ್ತ ಕಿರಿಕ್ ಮಾಡಿಕೊಂಡಿದ್ದಾರೆ. ಅದನ್ನ ಕಣ್ತುಂಬಿಕೊಳ್ಳಲು ಮುಂದಿನ ಸಂಚಿಕೆಯವರೆಗೂ ಕಾಯಬೇಕು.


Click it and Unblock the Notifications











