ಕಿಚ್ಚ ಸುದೀಪ್ ಅಡುಗೆ ಮನೆಯಲ್ಲಿ ಕಾಣಿಸಿದ ಕಿರಿಕ್ ಚೆಲುವೆ ಸಂಯುಕ್ತ ಹೆಗ್ಡೆ
Recommended Video

Bigg Boss Kannada 5 : ಬಿಗ್ ಬಾಸ್ ಕನ್ನಡ ಸೀಸನ್ 5 : ಕಿಚ್ಚನ ಜೊತೆ ಕಿಚನ್ ಟೈಮ್ ನಲ್ಲಿ ಸಂಯುಕ್ತ ಹೆಗ್ಡೆ
ನಟ ಸುದೀಪ್ ಬರೀ ನಟ, ನಿರ್ದೇಶಕ ಮಾತ್ರವಲ್ಲ. ಒಳ್ಳೆಯ ಪಾಕ ಪ್ರವೀಣ ಕೂಡ ಹೌದು. ಸುದೀಪ್ ಈ ಹಿಂದೆ ಅನೇಕ ಬಾರಿ ತಮ್ಮ ಕೈ ರುಚಿ ಎಂತಹುದು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಇದೀಗ ಮತ್ತೆ ಸುದೀಪ್ ಅಡುಗೆ ಮಾಡುವುದಕ್ಕೆ ಮುಂದಾಗಿದ್ದು, ಈ ಬಾರಿ ನಟಿ ಸಂಯುಕ್ತ ಹೆಗ್ಡೆ, ಕಿಚ್ಚನಿಗೆ ಸಾಥ್ ನೀಡಿದ್ದಾರೆ.
ಇಂದು ಪ್ರಸಾರ ಆಗಲಿರುವ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಸ್ಪೆಷಲ್ ಅಡುಗೆ ಮಾಡಲಿದ್ದಾರೆ. 'ಕಿಚ್ಚನ್ ಟೈಂ' ಎಂಬ ಹೆಸರಿನಲ್ಲಿ ಈ ವಿಶೇಷ ಸಂಚಿಕೆ ಇಂದು ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ. ವಿಶೇಷ ಅಂದರೆ 'ಬಿಗ್ ಬಾಸ್' ಕಾರ್ಯಕ್ರಮದ ಈ ಸೀಸನ್ ನಲ್ಲಿ ಮೊದಲ ಬಾರಿಗೆ ಕಿಚ್ಚ ಅಡುಗೆ ಮಾಡುತ್ತಿದ್ದಾರೆ.

ಸುದೀಪ್ ಜೊತೆಗೆ ಅಡುಗೆ ಮಾಡುವ ವಿಷಯವನ್ನು ನಟಿ ಸಂಯುಕ್ತ ಹೆಗ್ಡೆ ಹೇಳಿದ್ದಾರೆ. 'ಕಲರ್ಸ್ ಸೂಪರ್' ವಾಹಿನಿಯ ಫೇಸ್ ಬುಕ್ ಖಾತೆಯಿಂದ ಕಿಚ್ಚ ಜೊತೆಗೆ ಒಂದು ವಿಡಿಯೋ ಮಾಡಿದ ಸಂಯುಕ್ತ ಅವರ ಜೊತೆಗೆ ಇಂದು ಬಿಗ್ ಬಾಸ್ ನಲ್ಲಿ ಭಾಗವಹಿಸುವ ವಿಷಯವನ್ನು ಹಂಚಿಕೊಂಡಿದ್ದಾರೆ.
More from Filmibeat
English summary
Samyuktha Hegde will be a part of 'Bigg Boss Kannada 5' today's episode.
bigg boss kannada 5 bigg boss kannada news bigg boss tv reality show colors channel sudeep samyuktha hegde ಬಿಗ್ ಬಾಸ್ ಕನ್ನಡ 5 ಬಿಗ್ ಬಾಸ್ ಟಿವಿ ರಿಯಾಲಿಟಿ ಶೋ


Click it and Unblock the Notifications











