ನಾನು ಇನ್ನೂ ವರ್ಜಿನ್, ಕಿಸ್ ಕೂಡ ಮಾಡಿಲ್ಲ ಎಂದ 32 ವರ್ಷದ ಬಿಗ್ ಬಾಸ್ ಸ್ಫರ್ಧಿ ; ಕಾರಣ ಕೇಳಿ ಶಾಕ್ ಆದ ಫ್ಯಾನ್ಸ್

ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪ್ರೀತಿಯ ವರಸೆಯೂ ಬದಲಾಗಿದೆ. ಭಾವೋದ್ವೇಗದ ಪ್ರೀತಿ, ಸ್ನೇಹವಾಗಿ ಅರಳಿ, ಬೆಳೆದು ಪ್ರಬುದ್ಧವಾಗುವ ತನಕ, ನಂಬುಗೆಗಳ ಅಡಿಪಾಯದಲ್ಲಿ ನಿಜಾರ್ಥದ ಅನುರಾಗ ಅರಳುವ ತನಕ, ಕಾಯುವ ತಂತ್ರ ಈಗಿನದು. ಬಾಳಪೂರ್ತಿ ಜೊತೆ ಬರುವ ಪ್ರೀತಿಯ ಗಟ್ಟಿತನವನ್ನು ಒಂದಲ್ಲ ಹತ್ತು ಬಾರಿ ಪರೀಕ್ಷಿಸುವ,ಪೊಳ್ಳೆನಿಸಿದರೆ ಕೈ ಬಿಡುವ, ತಾಳುವುದನ್ನು ಮಾತ್ರ ಆಯ್ದುಕೊಳ್ಳುವ ಪ್ರೀತಿಯ ಹೊಸ ಪರಿ ಇದು. ಸನಾ ಮಕ್ಬುಲ್ ಅವರ ವೈಯಕ್ತಿಕ ಬದುಕು ಇದಕ್ಕೆ ಸದ್ಯದ ಉದಾಹರಣೆ.

ಹೌದು, ಸನಾ ಮಕ್ಬೂಲ್.. ಮುಂಬೈನ ಚೆಲುವೆ. 2011ರಲ್ಲಿ ಸ್ಟಾರ್ ಪ್ಲಸ್‌ನಲ್ಲಿ ಪ್ರಸಾರವಾದ ''ಇಸ್ ಪ್ಯಾರ್ ಕೋ ಕ್ಯಾ ನಾಮ್ ದೂ'' ಮೂಲಕ ಮನೆ ಮಾತಾದವರು ಇವರು. ಆ ನಂತರ ''ಅರ್ಜುನ್''.. ''ಆದತ್ ಸೇ ಮಜಬೂರ್''.. ''ವಿಷ್''.. ಧಾರಾವಾಹಿಗಳನ್ನು ಮಾಡಿದ ಸನಾ 2014ರಲ್ಲಿ ತೆಲುಗಿನ ''ದಿಕ್ಕುಲು ಚೂಡಲು ರಾಮಯ್ಯ'' ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ''ಮಾಮ ಓ ಚಂದಮಾಮ'' ಚಿತ್ರದಲ್ಲಿ ಕಾಣಿಸಿಕೊಂಡರು. 2017ರಲ್ಲಿ ತಮಿಳಿನ ''ರಂಗೂನ್'' ಚಿತ್ರದಲ್ಲಿ ಕೂಡ ನಾಯಕಿಯ ಪಾತ್ರವನ್ನು ನಿರ್ವಹಿಸಿದರು.

Sana Makbul Drops a Bombshell I m a Virgin amp amp I Need a Man Not a Boy

ಇನ್ನು ''ಬಿಗ್ ಬಾಸ್'' ಸನಾ ಬದುಕಿನ ಮತ್ತೊಂದು ಮೈಲಿಗಲ್ಲು. 2024ರಲ್ಲಿ ಅನಿಲ್ ಕಪೂರ್ ಸಾರಥ್ಯದಲ್ಲಿ ಮೂಡಿ ಬಂದ ''ಬಿಗ್ ಬಾಸ್'' ಓಟಿಟಿಯ ಮೂರನೇ ಸೀಸನ್‌ನಲ್ಲಿ ಭಾಗವಹಿಸಿದ್ದ ಸನಾ ಮಕ್ಬೂಲ್ ಟ್ರೋಫಿ ಸಮೇತ ಮನೆಯಾಚೆ ಬಂದರು. 25 ಲಕ್ಷ ಗೆದ್ದು ಇತಿಹಾಸ ಸೃಷ್ಟಿಸಿದರು.

ಇಂಥಾ ಸನಾ ಮಕ್ಬೂಲ್‌ಗೆ ಈಗ 32 ವರ್ಷ. ಆದರೆ ಇವರು ಇನ್ನೂ ಕನ್ಯತ್ವ ಕಳೆದುಕೊಂಡಿಲ್ಲ. ಖುದ್ದು ಈ ವಿಚಾರವನ್ನು ಹೇಳಿ ಸದ್ಯ ಸಿಕ್ಕಾಪಟ್ಟೆ ಚರ್ಚೆಗೀಡಾಗಿದ್ದಾರೆ ಸನಾ ಮಕ್ಬೂಲ್.

''ಫಿಲ್ಮಿಗ್ಯಾನ್''ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಬದುಕಿನ ಹಲವು ವಿಚಾರಗಳ ಕುರಿತು ಸನಾ ಮಕ್ಬೂಲ್ ಮಾತನಾಡಿದ್ದು, ಇದೇ ಸಮಯದಲ್ಲಿ ನೀವು ಕೊನೆಯದಾಗಿ ''ಹುಕ್‌ಅಪ್'' ಮಾಡಿದ್ದು ಯಾವಾಗ? ಎಂಬ ಪ್ರಶ್ನೆ ಎದುರಾಗಿದೆ. ಈ ಸಮಯದಲ್ಲಿ ತುಸು ನಾಚುತ್ತಾ, ನಗುತ್ತಲೇ ಮಾತನಾಡಿರುವ ಸನಾ ಮಕ್ಬೂಲ್ ತುಂಬಾ ಸಮಯವಾಯಿತು ಎಂದು ಹೇಳಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ನಿರೂಪಕ ಎಷ್ಟು ಸಮಯ ಆಯಿತು ಎಂದು ಮತ್ತೆ ಕೇಳಿದಾಗ, ನಾನು ವರ್ಜಿನ್ ಬೇಬಿ, ಹಾಗೇ ತಿಳಿದ್ಕೋ ಎಂದು ಹೇಳಿದ್ದಾರೆ. ನಾನು ಸುಳ್ಳು ಹೇಳ್ತಿಲ್ಲ ಸೀರಿಯಸ್ ಆಗಿಯೇ ಹೇಳ್ತಿದ್ದೀನಿ ಎಂದು ಹೇಳಿದ್ದಾರೆ. ಆಗ ತಮ್ಮ ಗೊಂದಲ ದೂರ ಮಾಡಿಕೊಳ್ಳಲು ನಿರೂಪಕ ಮತ್ತೊಮ್ಮೆ ನೀವು ವರ್ಜಿನಾ? ಎಂದು ಕೇಳಿದಾಗ, ಸನಾ, ಹೌದು ಎಂದಿದ್ದಾರೆ. ಅದರ ಹಿಂದೆ ಒಂದು ಕಾರಣವಿದೆ, ಅದನ್ನು ನಾನು ನಂತರ ಹೇಳಬಲ್ಲೆ ಎಂದಿದ್ದಾರೆ.

Sana Makbul Drops a Bombshell I m a Virgin amp amp I Need a Man Not a Boy

ಮುಂದುವರೆದು ಕನ್ಯತ್ವ ಕಳೆದುಕೊಳ್ಳದಿರಲು ನಿಮ್ಮ ''ಧರ್ಮ'' ಕಾರಣನಾ ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಸನಾ, ನಾನು ನನ್ನ ಕಾರಣದಿಂದ ಇನ್ನೂ ವರ್ಜಿನ್ ಆಗಿದ್ದೇನೆ ಎಂದಿದ್ಧಾರೆ. ನನಗೆ ಯಾರ ಮೇಲೂ ನಂಬಿಕೆಯಿಲ್ಲ, ಜನ ನನ್ನ ಹೃದಯ ಮುರಿಯುತ್ತಾರೆ ಎನ್ನುವ ಭಯ ನನಗೆ ಇದೆ ಎಂದು ನಗುತ್ತಲೇ ಉತ್ತರವನ್ನು ನೀಡಿರುವ ಸನಾ, ಡೇಟಿಂಗ್ ಆಪ್‌ಗಳಿಂದ ತಾವು ದೂರ ಇರುವುದಾಗಿ ಹೇಳಿದ್ಧಾರೆ. ಸದ್ಯ ಪ್ರೀತಿ-ಪ್ರೇಮ-ಪ್ರಣಯಕ್ಕೆ ಪುರಸೊತ್ತು ಇಲ್ಲ, ಯಾರನ್ನೂ ಕಿಸ್ ಕೂಡ ನಾನು ಮಾಡಿಲ್ಲ ಎಂದು ಬಹಿರಂಗಪಡಿಸಿದ್ದಾರೆ.

ಇದೇ ವೇಳೆ ಮದುವೆಯ ಕುರಿತು ಕೂಡ ಮಾತನಾಡಿರುವ ಸನಾ ಮದುವೆಯಾಗುವ ಆಸೆ ನನಗೂ ಇದೆ, ಆದರೆ ನನಗೆ ಚೆಲ್ಲು ಚೆಲ್ಲಾಗಿ ಆಡುವ ಹುಡುಗ ಬೇಡ, ಪ್ರಬುದ್ದತೆ ಇರುವ ಒಬ್ಬ ಗಂಡಸು ಬೇಕು ಎಂದು ಹೇಳಿದ್ಧಾರೆ.

ಸದ್ಯ ಸನಾ ಅವರ ಈ ಫನ್ ಸಂದರ್ಶನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವರು ಸನಾ ಅವರ ನೇರಾನೇರ ಮಾತುಗಳನ್ನು ಮೆಚ್ಚಿಕೊಂಡರೆ, ಇನ್ನೂ ಕೆಲವರು ತೀರಾ ವೈಯಕ್ತಿಕ ವಿಷಯಗಳನ್ನು ಈ ರೀತಿ ಹೇಳಿಕೊಳ್ಳಬಾರದೆಂದು ಅಪಸ್ವರ ತೆಗೆಯುತ್ತಿದ್ದಾರೆ. ತಮ್ಮ ನೆಚ್ಚಿನ ನಟಿಯ ಮಾತು ಕೇಳಿ ಇವರ ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದಾರೆ. ತಲೆ ಚಚ್ಚಿಕೊಳ್ಳುತ್ತಿದ್ದಾರೆ.

English summary
Sana Makbul gets candid! The actress reveals she is a virgin due to trust issues and sets a strict rule for marriage: "I need a real man, not a boy." Click for the full viral interview.
Read more about: ಟಿವಿ biggboss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X