ಸೀರೆಯಲ್ಲಿ ಸಾನ್ಯಾ ಅಯ್ಯರ್ ಫೋಟೋಶೂಟ್, 'ಗೌರಿ'ಯ ನೆಕ್ಲೆಸ್ ಮೇಲೆ ಫ್ಯಾನ್ಸ್ ಕಣ್ಣು!
ಕಿರುತೆರೆಯಿಂದ ಹಿರಿತೆರೆಯತ್ತ ಮುಖ ಮಾಡಿದ ಅದೆಷ್ಟೋ ಸ್ಟಾರ್‌ಗಳನ್ನು ನಾವು ನೋಡಿದ್ದೇವೆ.. ಅವರಲ್ಲಿ ಸಾನ್ಯಾ ಅಯ್ಯರ್ ಕೂಡ ಒಬ್ಬರು. ಸಾನ್ಯಾ ಅಯ್ಯರ್ ಮೊದಲು ಬಾಲ ನಟಿಯಾಗಿ ತೆರೆಗೆ ಬಂದವರು. ಹಲವಾರು ಸಿನಿಮಾಗಳಲ್ಲಿ ಬಾಲ ನಟಿಯಾಗಿ ಮಿಂಚಿದ್ದ ಈ ನಟಿ, ಆ ಬಳಿಕ ಪುಟ್ಟ ಗೌರಿ ಮದುವೆ ಎನ್ನುವ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು ಉತ್ತಮ ಅಭಿನಯದಿಂದ ಸಾವಿರಾರು ಜನರ ಮನಸ್ಸನ್ನು ಆವರಿಸಿಕೊಂಡಿದ್ದರು.
ಆ ಬಳಿಕ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕೂಡ ಅವಕಾಶ ಸಿಕ್ಕಿತು. ಇದಾದ ನಂತರ ಹೆಚ್ಚು ಬೆಳಕಿಗೆ ಬಂದರು. ಇನ್ನೂ ಸಾನ್ಯಾ ಅಯ್ಯರ್ ಕಿರುತೆರೆ ಬಿಟ್ಟು ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಸಾನ್ಯಾ ಅಯ್ಯರ್.

ಸಾನ್ಯಾ ನಟನೆಯ ಮೊದಲ ಸಿನಿಮಾ ಸೆಟ್ಟೇರಿದೆ. ಈ ಚಿತ್ರಕ್ಕೆ 'ಗೌರಿ' ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರಕ್ಕೆ ಇಂದ್ರಜಿತ್ ಲಂಕೇಶ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅವರ ಮಗ ಸಮರ್ಜಿತ್ ಈ ಚಿತ್ರಕ್ಕೆ ಹೀರೋ..ಇನ್ನೂ ಸಾನ್ಯಾ ಅಯ್ಯರ್ ಇದರಿಂದ ಬಹಳ ಖುಷಿಯಲ್ಲಿ ಇದ್ದಾರೆ. ಈ ನಡುವೆ ಹೊಸ ಫೋಟೋ ಶೂಟ್ ಅನ್ನು ಕೂಡ ಮಾಡಿಸಿಕೊಂಡಿದ್ದಾರೆ.
ಗೌರಿ ಸಿನಿಮಾದಲ್ಲಿ ಸಾನ್ಯಾ ಅಯ್ಯರ್
ಇಂದ್ರಜಿತ್ ಲಂಕೇಶ್ ಕನ್ನಡ ಚಿತ್ರರಂಗದ ಬಹಳ ದೊಡ್ಡ ನಿರ್ಮಾಪಕರು. ಹಾಗೆಯೇ ಕನ್ನಡ ಚಿತ್ರರಂಗದಲ್ಲಿ ಬೇರೂರಲು ನಟಿ ಸಖತ್ ಸಿದ್ಧತೆ ನಡೆಸಿದ್ದಾರೆ ಎಂದು ಹೇಳಿದರೆ ತಪ್ಪಾಗದು. ಸಖತ್ ಬೋಲ್ಡ್ ಆಗಿ ಫೋಟೋ ಶೂಟ್ ಮಾಡಿಕೊಳ್ಳುತ್ತಾ ಇದ್ದ ಸಾನ್ಯಾ ಇದೀಗ ಸೀರೆಯುಟ್ಟು ಫೋಟೋಗೆ ಫೋಸ್ ನೀಡಿರುವುದು ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ. ಈ ಫೋಟೋ ಗೆ ಫ್ಯಾನ್ಸ್ ಸಿಕ್ಕಾಪಟ್ಟೆ ಕಾಮೆಂಟ್ ಹಾಗೂ ಲೈಕ್ ಮಾಡುತ್ತಿದ್ದಾರೆ.

ಸಾನ್ಯಾ ನೆಕ್ಲೆಸ್ ಮೇಲೆ ಅಭಿಮಾನಿಗಳ ಕಣ್ಣು
ಇನ್ನೂ ಕೆಲವೊಂದು ಬಾರಿ ಸಾನ್ಯಾ ಅಯ್ಯರ್ ಬೋಲ್ಡ್ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಇದಕ್ಕೆಲ್ಲ ಫ್ಯಾನ್ಸ್ ಹಾಗೂ ನೆಟ್ಟಿಗರು ಕೆಟ್ಟ ರೀತಿಯ ಕಾಮೆಂಟ್ ಮಾಡುತ್ತಾ ಇರುತ್ತಿದ್ದರು. ಆದರೆ ಇದಕ್ಕೆಲ್ಲ ಪುಟ್ಟಗೌರಿ ತಲೇನೆ ಕೆಡಿಸಿಕೊಳ್ಳುತ್ತಿರಲಿಲ್ಲ. ತಾನು ಕೆಲಸವನ್ನು ನಿರ್ಭಿತಿಯಿಂದ ಮಾಡುತ್ತಾ ಇದ್ದರು. ಇದರ ಜೊತೆಗೆ ಸಾನ್ಯಾ ಹಾಗೂ ರೂಪೇಶ್ ಒಟ್ಟಾಗಿ ಸಿನಿಮಾ ಮಾಡಬೇಕು ಎಂಬುವುದು ಅಭಿಮಾನಿಗಳ ಬಹುದೊಡ್ಡ ಆಸೆ ಆಗಿತ್ತು. ಆದರೆ ,ಆಸೆ ಮುಂದೊಂದು ದಿನ ಫಲಿಸಬಹುದು ಎಂದು ಅಭಿಮಾನಿಗಳು ಭರವಸೆಯಲ್ಲಿದ್ದಾರೆ.
'ಗೌರಿ' ಎಂಬ ಸಿನಿಮಾದಲ್ಲಿ ಸಾನ್ಯಾ ಅಯ್ಯರ್ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಸಿನಿಮಾ ಮುಹೋರ್ತಕ್ಕೆ ಉಟ್ಟಿದ್ದ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ರೆಟ್ರೋ ಸ್ಟೈಲ್‌ನಲ್ಲಿ ಸೀರೆ ಮತ್ತು ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ. ಇನ್ನೂ ಹಲವಾರು ಜನ ಸಾನ್ಯಾ ನೆಕ್ಲೆಸ್ ಕಡೆ ಗಮನ ಹರಿಸಿದ್ದು, ಬೆಲೆ ವಿಚಾರಿಸುತ್ತಿದ್ದಾರೆ.


Click it and Unblock the Notifications











