For Quick Alerts
  ALLOW NOTIFICATIONS  
  For Daily Alerts

  ಕಷ್ಟಪಟ್ಟು ಸಂಪಾದನೆ ಮಾಡಿದ ಹೆಸರನ್ನು ಹಾಳು ಮಾಡಬೇಡಿ: ನಟಿ ಶ್ವೇತಾ ಪ್ರಸಾದ್

  |

  ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾದ ನಂಟು ಆರೋಪದಲ್ಲಿ ಈಗಾಗಲೇ ಇಬ್ಬರು ನಟಿಯರನ್ನು ಬಂಧಿಸಲಾಗಿದೆ. ನಟಿಯ ಜೊತೆ ಸಂಪರ್ಕದಲ್ಲಿದ್ದ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಸಾಕಷ್ಟು ಮಂದಿಯ ಹೆಸರು ಕೇಳಿ ಬರುತ್ತಿದ್ದು, ನೊಟೀಸ್ ನೀಡುವ ಸಾಧ್ಯತೆ ಇದೆ.

  ನಶೆಯ ಜಾಲದಲ್ಲಿ ಹಿರಿತೆರೆ ಜೊತೆಗೆ ಕಿರುತೆರೆ ಕಲಾವಿದರ ಹೆಸರು ಕೇಳಿ ಬರುತ್ತಿದೆ. ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರ ಬಲೆಗೆ ಬಿದ್ದಿರುವ ಶೇಖ್ ಫಾಜಿಲ್ ಜೊತೆ ಕಿರುತೆರೆಯ ಸಾಕಷ್ಟು ಕಲಾವಿದರು ಕಾಣಿಸಿಕೊಂಡಿರುವ ಫೋಟೋ ಚರ್ಚೆಗೆ ಕಾರಣವಾಗಿದೆ. 'ಗಟ್ಟಿಮೇಳ' ಖ್ಯಾತಿಯ ರಕ್ಷ್, 'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ, 'ರಾಧಾ ರಮಣ' ಖ್ಯಾತಿಯ ಶ್ವೇತಾ ಪ್ರಸಾದ್ ಸಹ ಸದ್ಯ ಹರಿದಾಡುತ್ತಿರುವ ಫೋಟೋದಲ್ಲಿ ಇದ್ದಾರೆ. ಡ್ರಗ್ಸ್ ಪೆಡ್ಲರ್ ಜೊತೆ ಕಿರುತೆರೆ ನಟರು ಪಾರ್ಟಿ ಮಾಡಿದ್ದರು ಎಂಬ ಟೀಕೆ ವ್ಯಕ್ತವಾಗಿದೆ. ಈ ಬಗ್ಗೆ ನಟಿ ಶ್ವೇತಾ ಪ್ರಸಾದ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ..

  ಫಾಜಿಲ್ ಜೊತೆ ಫೋಟೋ: 'ನಮ್ಮನ್ನು ಆ ಗುಂಪಿಗೆ ಸೇರಿಸುವುದು ಸರಿಯಲ್ಲ'- ರಕ್ಷ್ಫಾಜಿಲ್ ಜೊತೆ ಫೋಟೋ: 'ನಮ್ಮನ್ನು ಆ ಗುಂಪಿಗೆ ಸೇರಿಸುವುದು ಸರಿಯಲ್ಲ'- ರಕ್ಷ್

  ಯಾರು ಕೂಡ ಇಲ್ಲಿ ಪರ್ಫೆಕ್ಟ್ ಅಲ್ಲ

  ಯಾರು ಕೂಡ ಇಲ್ಲಿ ಪರ್ಫೆಕ್ಟ್ ಅಲ್ಲ

  "ನಾನು ಗ್ರೂಪ್ ನಲ್ಲಿ ಕಾಣಿಸಿಕೊಂಡ ಫೋಟೋವೊಂದು ಮಾಧ್ಯಮದಲ್ಲಿ ಹರಿದಾಡುತ್ತಿರುವುದನ್ನು ನೋಡಿದೆ. ನಾನು ಅದನ್ನು ನೋಡಿ ನಕ್ಕಿದೆ. ಅಲ್ಲದೆ ತುಂಬಾ ಕೆಳಮಟ್ಟದ ಪದಗಳನ್ನು ಬಳಸಿದ್ದರು. ಅದು ನನಗೆ ತುಂಬಾ ಕಿರಿಕಿರಿ ಮಾಡಿತು. ಆದರೆ ನಾನು ಪ್ರತಿಕ್ರಿಯೆ ನೀಡಲಿಲ್ಲ. ತುಂಬಾ ಕಂಟ್ರೋಲ್ ಮಾಡಿಕೊಂಡೆ. ಯಾರು ಕೂಡ ಇಲ್ಲಿ ಪರ್ಫೆಕ್ಟ್ ಅಲ್ಲ. ಇದನ್ನೆ ಇನ್ನಷ್ಟು ಹುಡುಕಿ ಹೈಲೆಟ್ ಮಾಡುತ್ತಾರೆ."

  'ಕಷ್ಟ ಪಟ್ಟು ಸಂಪಾದನೆ ಮಾಡಿದ ಹೆಸರನ್ನು ಹಾಳು ಮಾಡಬೇಡಿ'

  'ಕಷ್ಟ ಪಟ್ಟು ಸಂಪಾದನೆ ಮಾಡಿದ ಹೆಸರನ್ನು ಹಾಳು ಮಾಡಬೇಡಿ'

  "ನಾನು ಏನು ಪರ್ಫೆಕ್ಟ್ ಅಲ್ಲ. ಆದರೆ ಕಾನೂನು ಬಾಹಿರ ಕೆಲಸ ಏನು ಮಾಡಿಲ್ಲ. ಮಾಧ್ಯಮದವರು ಜವಾಬ್ದಾರಿಯಿಂದ ವರ್ತಿಸಿ. ಸತ್ಯ ತಿಳಿಯದೆ ಸುಳ್ಳು ಸುದ್ದಿ ಬಿತ್ತರಿಸ ಬೇಡಿ. ಕಷ್ಟ ಪಟ್ಟು ಸಂಪಾದನೆ ಮಾಡಿದ ಹೆಸರನ್ನು ಹಾಳುಮಾಡಬೇಡಿ. ಮೌನ ದುರ್ಬಲತೆ ಅಲ್ಲ. ಬಿರುಗಾಳಿ ನಿಲ್ಲುವವರೆಗೂ ಶಾಂತವಾಗಿರುವ ಧೈರ್ಯ. ಕೆಲವು ವಿಚಾರಳಿಗೆ ಪ್ರತಿಕ್ರಿಯೆ ಕೊಡಬೇಕಾಗಿಲ್ಲ. ಸರಿಯಾಗಿ ಸ್ಪಂದಿಸಬೇಕು." ಎಂದು ಹೇಳಿದ್ದಾರೆ.

  ಧಾರಾವಾಹಿ, ಸಿನಿಮಾದಲ್ಲಿ ನಟಿಸಿರುವ ಶ್ವೇತಾ

  ಧಾರಾವಾಹಿ, ಸಿನಿಮಾದಲ್ಲಿ ನಟಿಸಿರುವ ಶ್ವೇತಾ

  ನಟಿ ಶ್ವೇತಾ ಪ್ರಸಾದ್ ಎರಡು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ರಾಧಾ ರಮಣ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರಿಯರ ಮನೆ ಮಾತಾಗಿದ್ದರು. ಆದರೆ ವೈಯಕ್ತಿಕ ಕಾರಣಗಳಿಗಾಗಿ ಧಾರಾವಾಹಿಯನ್ನುಅರ್ಧದಲ್ಲಿಯೇ ಬಿಟ್ಟು ಹೊರಬಂದರು. ಇನ್ನೂ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿಯೂ ಶ್ವೇತಾ ಕಾಣಿಸಿಕೊಂಡಿದ್ದಾರೆ. ಕಿರುತೆರೆ ಮಾತ್ರವಲ್ಲದೆ 'ಕಳ್ಬೆಟ್ಟದ ದರೋಡೆಕಾರರು' ಸಿನಿಮಾದಲ್ಲಿಯೂ ನಟಿಸಿದ್ದಾರೆ.

  ನಟ ರಕ್ಷ್ ಪ್ರತಿಕ್ರಿಯೆ

  ನಟ ರಕ್ಷ್ ಪ್ರತಿಕ್ರಿಯೆ

  "ನನ್ನ ದೇಹದಲ್ಲಿ ಡ್ರಗ್ಸ್ ಬೇಡ ಗಾಂಜಾ ಸೇವಿಸಿರುವ ಬಗ್ಗೆ ಒಂದೇ ಒಂದು ಸುಳಿವು ಸಿಕ್ಕಿರೂ ನಾನು ಇಂಡಸ್ಟ್ರಿ ಬಿಡ್ತೀನಿ. ಸಿಸಿಬಿ ಅಥವಾ ನಾರ್ಕೋಟಿಕ್ಸ್ ಅಧಿಕಾರಿಗಳು ಯಾರೇ ಬಂದು, ಎಂತಹ ಪರೀಕ್ಷೆಗೆ ಬೇಕಾದರೂ ನನ್ನನ್ನು ಒಳಪಡಿಸಲಿ, ನಾನು ಸಿದ್ಧನಿದ್ದೇನೆ. ನಾನು ಡ್ರಗ್ಸ್ ಅಥವಾ ಗಾಂಜಾ ಸೇವಿಸಿದ್ದೇನೆ ಅಂತ ಸಾಬೀತು ಪಡಿಸಿದರೆ ಅವರ ಮನೆಯಲ್ಲಿ ಜೀತಕ್ಕೆ ಕೆಲಸ ಮಾಡ್ತೀನಿ'' ಎಂದು ಕಿರುತೆರೆಯ ಖ್ಯಾತ ನಟ ರಕ್ಷ್ ಪ್ರತಿಕ್ರಿಯಿಸಿದ್ದಾರೆ.

  English summary
  Serial Actress Swetha Prasad reaction on photos with drug peddler sheikh-fazil.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X