'ಕಾಟೇರ'ದಲ್ಲಿ ಮಿಂಚಿದ ನಟಿ ರಿಯಾಲಿಟಿ ಶೋಗಳಲ್ಲಿ ಬ್ಯುಸಿ; ಗಿಚ್ಚಿ ಗಿಲಿ ಗಿಲಿ ಎಂದ ಶ್ರುತಿ

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ರಿಯಾಲಿಟಿ ಶೋಗಳ ಪೈಕಿ 'ಗಿಚ್ಚಿ ಗಿಲಿಗಿಲಿ'ಯೂ ಒಂದು. ಯಶಸ್ವಿ ಎರಡು ಸಂಚಿಕೆ ಪೂರೈಸಿರುವ 'ಗಿಚ್ಚಿ ಗಿಲಿಗಿಲಿ' ರಿಯಾಲಿಟಿ ಶೋವಿ ಮೂರನೇ ಸೀಸನ್ ಕಳೆದ ವಾರದಿಂದ ಶುರುವಾಗಿದೆ. 'ಗಿಚ್ಚಿ ಗಿಲಿಗಿಲಿ' ಶೋವಿನಲ್ಲಿ ತೀರ್ಪುಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ ನಟಿ ಶ್ರುತಿ ಕೃಷ್ಣ. ಕಳೆದ ಎರಡು ಸೀಸನ್‌ಗಳಲ್ಲೂ ತೀರ್ಪುಗಾರ್ತಿಯಾಗಿ ಮೋಡಿ ಮಾಡಿರುವ ಶ್ರುತಿ ಕೃಷ್ಣ ಈ ಬಾರಿಯೂ ತೀರ್ಪುಗಾರ್ತಿಯಾಗಿ ಮೋಡಿ ಮಾಡುತ್ತಿದ್ದಾರೆ.

ಮಲಯಾಳಂ ಸಿನಿಮಾ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಶ್ರುತಿ ಕೃಷ್ಣ ಮುಂದೆ ಕನ್ನಡ ಸಿನಿಮಾದಲ್ಲಿ ಪೋಷಕ ಪಾತ್ರದ ಮೂಲಕ ಗುರುತಿಸಿಕೊಂಡಿದ್ದರು. ದ್ವಾರಕೀಶ್ ನಿರ್ಮಾಣದಲ್ಲಿ ಮೂಡಿ ಬಂದ 'ಶ್ರುತಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಶ್ರುತಿ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ.

Sandalwood senior actress Shruthi is charming as Gicchi Gili Gili judge

ಸುಮಾರು ಅರುವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಸಿನಿಮಾ ಪ್ರಿಯರ ಮನೆ-ಮನ ಸೆಳೆದಿರುವ ಶ್ರುತಿ ಇತ್ತೀಚೆಗಷ್ಟೇ ತೆರೆ ಕಂಡಿರುವ ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ'ದಲ್ಲಿ ಅಭಿನಯಿಸಿದ್ದಾರೆ. ಕನ್ನಡ ಸಿನಿಮಾ ರಂಗದ ಮೇರು ನಟರೆಂಬ ಖ್ಯಾತಿಗೆ ಪಾತ್ರರಾಗಿರುವ ವಿಷ್ಣುವರ್ಧನ್, ಅಂಬರೀಶ್, ಟೈಗರ್ ಪ್ರಭಾಕರ್, ಶಿವರಾಜ್ ಕುಮಾರ್, ಶಶಿಕುಮಾರ್, ರಮೇಶ್ ಅರವಿಂದ್, ಜಗ್ಗೇಶ್, ದೇವರಾಜ್, ಸುನೀಲ್, ಅಭಿಜಿತ್, ರಾಮ್ ಕುಮಾರ್ ಅವರೊಂದಿಗೆ ತೆರೆ ಹಂಚಿಕೊಂಡಿರುವ ಬೆಡಗಿ.

ಕನ್ನಡದ ಜೊತೆಗೆ ಮಲಯಾಳಂ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಈಕೆ ಚರ್ತುಭಾಷಾ ತಾರೆ ಹೌದು. ಮಲಯಾಳಂ ಸಿರೀಸ್ 'ಸ್ತ್ರೀತ್ವಂ'ನಲ್ಲಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು. ಮುಂದೆ ತಮಿಳು ಸಿರೀಸ್ 'ಕಾರ್ತಿಗೈ ಪೆಂಗಾಲ್'ನಲ್ಲಿ ಈಕೆ ಅಭಿನಯಿಸಿದರು. ಮುಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಿರೂಪಣೆಯಲ್ಲಿ ಮೂಡಿಬಂದ 'ಸೂಪರ್ ಮಿನಿಟ್'ನಲ್ಲಿ ಸ್ಪರ್ಧಿಯಾಗಿ ಶ್ರುತಿ ಕಾಣಿಸಿಕೊಂಡಿದ್ದರು.

Sandalwood senior actress Shruthi is charming as Gicchi Gili Gili judge

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 3'ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಈಕೆ ಆ ಸೀಸನ್‌ನ ವಿನ್ನರ್ ಆಗಿ ಹೊರಹೊಮ್ಮಿದರು. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಜಾಭಾರತ' ಕಾರ್ಯಕ್ರಮದ ತೀರ್ಪುಗಾರ್ತಿಯಾಗಿ ಶ್ರುತಿ ಕಾಣಿಸಿಕೊಂಡರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ವೀಕೆಂಡ್ ವಿತ್ ರಮೇಶ್'ನಲ್ಲಿ ಭಾಗವಹಿಸಿ ತನ್ನ ಸಿನಿ ಜೀವನದ ಕುರಿತು ಮಾತನಾಡಿದ ಈಕೆ ಉದಯ ವಾಹಿನಿಯ 'ಸತ್ಯಕಥೆ'ಯ ನಿರೂಪಕಿಯಾಗಿ ವೀಕ್ಷಕರ ಮನ ಸೆಳೆದರು.

ನಂತರ 'ಮರೆಯಲಾರೆ', 'ಹೆಜ್ಜೆ ಗುರುತು' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರುತಿ 'ಗಿಚ್ಚಿ ಗಿಲಿ ಗಿಲಿ'ಯ ತೀರ್ಪುಗಾರ್ತಿಯಾಗಿ ಭಡ್ತಿ ಪಡೆದರು. ಇದೀಗ ಮೂರನೇ ಸೀಸನ್‌ನ ತೀರ್ಪುಗಾರ್ತಿಯಾಗಿ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಈಕೆ ಇತ್ತೀಚಿಗೆ ಮುಕ್ತಾಯಗೊಂಡ 'ಬಿಗ್ ಬಾಸ್ ಸೀಸನ್ 10' ರಲ್ಲಿ ಅತಿಥಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದರು.

More from Filmibeat

English summary
The new season of Gicchi Gili Gili has started senior actress Shruthi again shining as a judge
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X