'ಸರಿಗಮಪ - 15' ವೇದಿಕೆ ಏರಿದ ಏಳು ತಿಂಗಳ ಗರ್ಭಿಣಿ !

ಯಾರು ಆಗಲಿ ಜೀವನೋತ್ಸಾಹ ಕಳೆದುಕೊಳ್ಳಬಾರದು. ಯಾವುದೇ ಸಂದರ್ಭ ಆಗಿದ್ದರೂ ಏನನ್ನಾದರೂ ಸಾಧಿಸುವ ಹಂಬಲ ಇರಬೇಕು. ಆ ರೀತಿ ಇದ್ದರೆ ಮಾತ್ರ ಒಬ್ಬ ವ್ಯಕ್ತಿ ಮುಂದೆ ಬರಲು ಸಾಧ್ಯ.

ಜೀ ಕನ್ನಡ ವಾಹಿನಿ 'ಸರಿಗಮಪ' ಕಾರ್ಯಕ್ರಮದಲ್ಲಿ ಈ ರೀತಿಯ ಒಂದು ಅಪರೂಪದ ಘಟನೆ ನಡೆಯಿತು. 'ಸರಿಗಮಪ ಸೀಸನ್ 15' ಕಳೆದ ಶನಿವಾರದಿಂದ ಪ್ರಾರಂಭ ಆಗಿದೆ. ಈ ಕಾರ್ಯಕ್ರಮದ ಮೆಗಾ ಆಡಿಷನ್ ನಲ್ಲಿ 7 ತಿಂಗಳ ಗರ್ಭಿಣಿಯೊಬ್ಬರು ಭಾಗಿಯಾಗಿದ್ದಾರೆ.

ಬೇರೆ ಬೇರೆ ವರ್ಗದ ಸ್ಪರ್ಧಿಗಳು ಈಗಾಗಲೇ 'ಸರಿಗಮಪ' ಕಾರ್ಯಕ್ರಮದಲ್ಲಿ ಹಾಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಒಬ್ಬ ಗರ್ಭಿಣಿ ಕಾರ್ಯಕ್ರಮದ ಸ್ಪರ್ಧಿ ಆಗಿದ್ದಾರೆ. ಆ ಹೆಣ್ಣು ಮಗಳ ಹಾಡುವ ಉತ್ಸಾಹ ನೋಡಿ ಇಡೀ ಸರಿಗಮಪ ತಂಡ ಬೆರಗಾಗಿದೆ. ಮುಂದೆ ಓದಿ..

ಸಂಧ್ಯಾ ಎಂಬ ಗರ್ಭಿಣಿ

ಸಂಧ್ಯಾ ಎಂಬ ಗರ್ಭಿಣಿ

'ಸರಿಗಮಪ ಸೀಸನ್ 15'ರಲ್ಲಿ ವಿಶೇಷ ಘಟನೆ ನಡೆದಿದೆ. ಸಂಧ್ಯಾ ಎಂಬ ಏಳು ತಿಂಗಳ ಗರ್ಭಿಣಿ ಕಾರ್ಯಕ್ರಮದ ಸ್ಪರ್ಧಿಯಾಗಿ ಹಾಡಿದ್ದಾರೆ. ಮೊದಲ ಆಡಿಷನ್ ನಲ್ಲಿ ಆಯ್ಕೆ ಆಗಿದ್ದ ಇರುವ ಮೆಗಾ ಆಡಿಷನ್ ನ 12ನೇ ಸ್ಪರ್ಧಿ ಆಗಿದ್ದರು. ಕಾರ್ಯಕ್ರಮದಲ್ಲಿ ಅವರ ಪತಿ ವಿಷ್ಣು ಕೂಡ ಪತ್ನಿಗೆ ಸಾಥ್ ನೀಡಿದರು.

ವೇದಿಕೆ ಮೇಲೆ ಸೀಮಂತ

ವೇದಿಕೆ ಮೇಲೆ ಸೀಮಂತ

ಸ್ಪರ್ಧಿಯಾಗಿ ಬಂದ ಸಂಧ್ಯಾ 'ನಮ್ಮೂರ ಮಂದಾರ ಹೂವೆ' ಸಿನಿಮಾದ 'ಓಂಕಾರದಿ...' ಹಾಡನ್ನು ಹಾಡಿದರು. ನಂತರ ಈ ತುಂಬು ಗರ್ಭಿಣಿಗೆ ಜೀ ಕನ್ನಡ ವತಿಯಿಂದ ಸೀಮಂತ ಮಾಡಲಾಯಿತು. ಮುತೈದೆಯರು ಬಂದು ಆರತಿ ಎತ್ತಿ ಸಂಧ್ಯಾ ಅವರಿಗೆ ಆಶೀರ್ವಾದ ಮಾಡಿದರು.

ಆಯಸ್ಸು, ಆರೋಗ್ಯ ಎಲ್ಲವನ್ನು ದೇವರು ನೀಡಲಿ - ವಿಜಯ ಪ್ರಕಾಶ್

ಆಯಸ್ಸು, ಆರೋಗ್ಯ ಎಲ್ಲವನ್ನು ದೇವರು ನೀಡಲಿ - ವಿಜಯ ಪ್ರಕಾಶ್

ಸಂಧ್ಯಾ ಅವರ ಹಾಡು ಕೇಳಿ ಖುಷಿಯಾದ ವಿಜಯ್ ಪ್ರಕಾಶ್ ''ಒಂದು ಗಾಯನದ ದೃಷ್ಟಿಯಿಂದ ನೋಡಿದಾಗ ಇನ್ನು ಸ್ವಲ್ಪ ಸಾಧನೆ ಬೇಕು ಅಂತ ಅನಿಸಿತು. ಆದರೆ, ಸದ್ಯ ಹಾಡಿಗಿಂತ ಬಹು ಮುಖ್ಯವಾದ ಕೆಲಸವನ್ನು ಭಗವಂತ ನಿಮಗೆ ನೀಡಿದ್ದಾನೆ. ನಿಮಗೆ ಆಯಸ್ಸು, ಆರೋಗ್ಯ ಎಲ್ಲವನ್ನು ದೇವರು ನೀಡಲಿ ಅಂತ ಕೇಳಿಕೊಳ್ಳುತ್ತೇನೆ.'' ಎಂದರು.

ಇದು ತುಂಬ ದೊಡ್ಡ ವಿಷಯ - ಅರ್ಜುನ್ ಜನ್ಯ

ಇದು ತುಂಬ ದೊಡ್ಡ ವಿಷಯ - ಅರ್ಜುನ್ ಜನ್ಯ

ಕಾರ್ಯಕ್ರಮದಲ್ಲಿ ಮಾತನಾಡಿದ ಅರ್ಜುನ್ ಜನ್ಯ ''ನಿಮ್ಮ ಜೊತೆಗೆ ನಿಮ್ಮ ಮಗು ಕೂಡ ವೇದಿಕೆ ಮೇಲೆ ಬಂದಿರುವುದು ತುಂಬ ದೊಡ್ಡ ವಿಷಯ. ನೀವು ಸಂತೋಷವಾಗಿ ಇರಿ.. ಖುಷಿಯಾಗಿ ಇರಿ.. ನಿಮ್ಮ ಆಸೆ ಈಗ ಈಡೇರಿದೆ ಎಂದುಕೊಂಡಿದ್ದೇವೆ. ನಿಮಗೆ ಒಳ್ಳೆದಾಗಲಿ.'' ಎಂದು ಶುಭ ಹಾರೈಸಿದರು.

ನಮ್ಮ ತಾಯಿ ನೆನಪಾದರು ರಾಜೇಶ್ ಕೃಷ್ಣನ್

ನಮ್ಮ ತಾಯಿ ನೆನಪಾದರು ರಾಜೇಶ್ ಕೃಷ್ಣನ್

''ನಿಮ್ಮ ಹಾಡು ಕೇಳಿ ನನಗೆ ನಮ್ಮ ತಾಯಿ ನೆನಪಾದರು. ನಾನು ನಮ್ಮ ತಾಯಿಯ ಹೊಟ್ಟೆಯಲ್ಲಿ ಇದ್ದಾಗ ಎಂಟು ತಿಂಗಳವರೆಗೆ ಅವರು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದರು. ಆ ನೆನಪು ನನಗೆ ಚಿಕ್ಕದಾಗಿ ಮೂಡುವಂತೆ ಮಾಡಿದ್ದೀರ. ನಿಮ್ಮ ಉತ್ಸಾಹವನ್ನು ಮೆಚ್ಚಬೇಕು.'' ಎಂದರು ರಾಜೇಶ್ ಕೃಷ್ಣನ್.

ಮನಸ್ಸು ತುಂಬಿ ಹಾರೈಸಿದ ಮಹಾಗುರುಗಳು

ಮನಸ್ಸು ತುಂಬಿ ಹಾರೈಸಿದ ಮಹಾಗುರುಗಳು

''ಸರಿಗಮಪದ ಎಲ್ಲ ಸಂದರ್ಭವನ್ನು ನೋಡು, ಕೇಳು, ಆನಂದಪಡು ಅದನ್ನು ನಿನ್ನ ಮಗುವಿಗೆ ಧಾರೆ ಏರಿ. ದೇವಭಾಷೆಯನ್ನು ಅನುವಾದಿಸಿ ಕರ್ನಾಟಕಕ್ಕೆ ಕೊಡು. ಆಲ್ ದಿ ಬೆಸ್ಟ್.'' ಅಂದು ಮನಸ್ಸು ತುಂಬಿ ಹಾರೈಸಿದರು ಮಹಾಗುರುಗಳಾದ ಹಂಸಲೇಖ.

ಆಯ್ಕೆ ಆಗಲಿಲ್ಲ

ಆಯ್ಕೆ ಆಗಲಿಲ್ಲ

12ನೇ ಸ್ಪರ್ಧಿ ಆಗಿ ವೇದಿಕೆ ಮೇಲೆ ಬಂದಿದ್ದ ಸಂಧ್ಯಾ ಅವರು ಆಯ್ಕೆ ಆಗಲು ಸಾಧ್ಯ ಆಗಲಿಲ್ಲ. ಸ್ಪರ್ಧೆಯ ದೃಷ್ಟಿಯಿಂದ ಅವರು ಇನ್ನೂ ಚೆನ್ನಾಗಿ ಹಾಡಬೇಕಿತ್ತು. ಆದರೆ, ಗರ್ಭಿಣಿ ಆಗಿದ್ದರೂ ಅವರು ಇಲ್ಲಿಯವರೆಗೆ ಬಂದು ಹಾಡಿದ್ದು, ಅದಕ್ಕಿಂತ ದೊಡ್ಡದಾಗಿ ಕಂಡಿತ್ತು. ಈ ವೇದಿಕೆಯಲ್ಲಿ ಹೆಂಡತಿಯ ಸೀಮಂತ ಮಾಡಿದಕ್ಕೆ ಅವರ ಪತಿ ವಿಷ್ಣು ಕೂಡ ಸಂತಸ ವ್ಯಕ್ತ ಪಡಿಸಿದ್ದರು.

More from Filmibeat

English summary
Sanday a pregnant woman participate in Zee Kannada channel's popular show 'Sarigamapa Season 15'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X