BBK12: ನಿಂಗೆ ಬಿಟ್ಟಿ ಊಟ ಕೊಡೊ ಯೋಗ್ಯತೆ ಇದ್ಯಾ? ಗಿಲ್ಲಿ ವಿರುದ್ಧ ಉಗ್ರಂ ಮಂಜು ಭಾವಿ ಪತ್ನಿ ಗರಂ

ಬಿಗ್‌ಬಾಸ್ ಸೀಸನ್ 12 ದಿನದಿಂದ ದಿನಕ್ಕೆ ಭಾರೀ ಸುದ್ದಿ ಆಗ್ತಿದೆ. ಸದ್ಯ ಗಿಲ್ಲಿ ಹಾಗೂ ಉಗ್ರಂ ಮಂಜು ನಡುವೆ ಕಿರಿಕ್ ಶುರುವಾಗಿದೆ. ಕಳೆದ ಸೀಸನ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ ಅತಿಥಿಗಳಾಗಿ ಬಂದಿದ್ದಾರೆ. ಅವರ ಬಗ್ಗೆ ಗಿಲ್ಲಿ ಕಾಲೆಳೆದು ತಮಾಷೆ ಮಾಡುತ್ತಿದ್ದಾರೆ. ಕೆಲವರಿಗೆ ಇದು ಮನರಂಜನೆ ಅನ್ನಿಸಿದರೆ ಮತ್ತೆ ಕೆಲವರ ಬೇಸರಕ್ಕೆ ಕಾರಣವಾಗಿದೆ.

ಉಗ್ರಂ ಮಂಜು ಮದುವೆ ಬಗ್ಗೆ ಕೂಡ ಗಿಲ್ಲಿ ಕಾಮಿಡಿ ಮಾಡಿದ್ದರು. ಈ ಬಗ್ಗೆ ಮಂಜು ಮದುವೆ ಆಗುತ್ತಿರುವ ಹುಡುಗಿ ಸಂಧ್ಯಾ ಖುಷಿ ಪ್ರತಿಕ್ರಿಯಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಗಿಲ್ಲಿಗೆ ತಿರುಗೇಟು ನೀಡಿದ್ದಾರೆ. ನವೆಂಬರ್ 9ರಂದು ಉಗ್ರಂ ಮಂಜು ಹಾಗೂ ಸಂಧ್ಯಾ ಮದುವೆ ನಿಶ್ಚಿತಾರ್ಥ ನಡೆದಿತ್ತು. ಶೀಘ್ರದಲ್ಲೇ ಇಬ್ಬರ ಮದುವೆ ನಡೆಯಲಿದೆ.

Sandhya Slams Gilli for Personal Jibe at Ugram Manju Sparks Bigg Boss 12 Controversy

ಈ ವಾರ ಬಿಗ್‌ಬಾಸ್ ಮನೆ ಹೋಟೆಲ್ ಆಗಿ ಬದಲಾಗಿದೆ. ಸ್ಪರ್ಧಿಗಳೆಲ್ಲಾ ಹೋಟೆಲ್ ಸಿಬ್ಬಂದಿಗಳಾಗಿದ್ದಾರೆ. ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ರಜತ್, ಉಗ್ರಂ ಮಂಜು, ಮೋಕ್ಷಿತಾ ಪೈ ಹಾಗೂ ಚೈತ್ರಾ ಬಿಗ್‌ಬಾಸ್ ಹೋಟೆಲ್‌ಗೆ ಅತಿಥಿಗಳಾಗಿ ಹೋಗಿದ್ದಾರೆ. ಮನೆಮಂದಿ ಅವರನ್ನು ಉಪಚರಿಸಬೇಕಿದೆ. ಅತಿಥಿಗಳು ಮನೆ ಒಳಗೆ ಹೋಗುತ್ತಿದ್ದಂತೆ ಮದುವೆ ನಿಶ್ಚಯವಾಗಿರುವುದಕ್ಕೆ ಬಿಗ್‌ಬಾಸ್ ಅಭಿನಂದನೆ ತಿಳಿಸಿದ್ದಾರೆ.

ಮನೆಯಲ್ಲಿ ಮಂಜು ಮದುವೆ ವಿಷಾರ ಪ್ರಸ್ತಾಪ ಆಗುತ್ತಿದ್ದಂತೆ ಗಿಲ್ಲಿ ಪ್ರತಿಕ್ರಿಯಿಸಿ ಮದುವೆ ಎರಡನೆಯದಾ? ಅಥವಾ ಮೂರನೆಯದಾ? ಎಂದು ಕಾಲೆಳೆದಿದ್ದರು. ಇದು ಮಂಜು ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಗಿಲ್ಲಿ ಸಮಜಾಯಿಸಿ ನೀಡುವ ಪ್ರಯತ್ನ ಮಾಡಿದ್ದರು. ಇದೇ ವಿಚಾರದ ಬಗ್ಗೆ ಮಂಜು ಭಾವಿ ಪತ್ನಿ ಬೇಸರ ವ್ಯಕ್ತಪಡಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಾಕಿದ್ದಾರೆ.

Sandhya Slams Gilli for Personal Jibe at Ugram Manju Sparks Bigg Boss 12 Controversy

"ಎಲ್ಲರ ಹತ್ತಿರ ಪರ್ಸನಲ್ ವಿಷಯಗಳನ್ನ ಇಡ್ಕೊಂಡು ಕೆಟ್ಟ ಜೋಕ್ಸ್ ಮಾಡೋದು ಕಾಮಿಡಿನಾ? ಎಲ್ಲಾ ಶೋಗಳಲ್ಲು ಒಂದ್ ಒಂದ್ ಹುಡುಗಿ ಬಲಿಕೊಟ್ಟು ಗೆಲ್ಲೋ ಗಿಲ್ಲಿ ಬೇರೆ ಅಲ್ಲಿಗೆ ಎಷ್ಟನೇದು ಅಂತ ಕೇಳ್ತಿದಾನಾ? ಬಿಟ್ಟಿ ಊಟ ಕೊಡೋ ಅಂಥ ಯೋಗ್ಯತೆ ಇದ್ಯಾ ನಿನಗೆ ಗಿಲ್ಲಿ? ಗಿಲ್ಲಿ ನಿನಗೇ ಬಿಟ್ಟಿ ಊಟ ಹಾಕ್ತಿರೋದು ಬಿಗ್ ಬಾಸ್‌ ಮತ್ತು ಕಲರ್ಸ್ ಅನ್ನೋದು ನೆನಪಿರಲಿ" ಎಂದು ಸಂಧ್ಯಾ ಖುಷಿ ತಿರುಗೇಟು ನೀಡಿದ್ದಾರೆ. ಈ ಸ್ಕ್ರೀನ್‌ಶಾಟ್ ವೈರಲ್ ಆಗ್ತಿದ್ದು ಗಿಲ್ಲಿ ಬಗ್ಗೆ ನೆಟ್ಟಿಗರು ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಮಂಜು ಮದುವೆ ಆಗುತ್ತಿರುವ ಹುಡುಗಿ ಸಂಧ್ಯಾ ಖುಷಿ ಸದ್ಯ ಆರ್‌ಆರ್‌ ನಗರದ ಸ್ಪರ್ಶ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಬಿಜಿಎಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. 3 ತಿಂಗಳ ಹಿಂದೆ ಸ್ನೇಹಿತರೊಬ್ಬರ ಮೂಲಕ ಮಂಜು ಅವರಿಗೆ ಸಂಧ್ಯಾ ಅವರ ಪರಿಚಯವಾಗಿತ್ತು. ಬಳಿಕ ಅದು ಸ್ನೇಹಕ್ಕೆ ತಿರುಗಿ ಇಬ್ಬರ ಆಲೋಚನೆಗಳು ಒಂದೇ ರೀತಿ ಇದೆ. ಇಬ್ಬರೂ ಮದುವೆ ಆಗಬಹುದು ಎಂದು ನಿರ್ಧರಿಸಿದ್ದರು. ಮನೆಯಲ್ಲಿ ಮಾತುಕತೆ ನಡೆಸಿ ಕೊನೆಗೆ ಮದುವೆ ನಿಶ್ಚಯವಾಯಿತು. ಪೀಣ್ಯದಲ್ಲಿರುವ ಸಂಧ್ಯಾ ಅವರ ಮನೆಯಲ್ಲೇ ನವೆಂಬರ್ 9ರಂದು ಎಂಗೇಜ್ಮೆಂಟ್ ನಡೆದಿತ್ತು.

ಜನವರಿ ಅಥವಾ ಫೆಬ್ರವರಿಯಲ್ಲಿ ಮಂಜು ಹಾಗೂ ಸಂಧ್ಯಾ ಮದುವೆ ನಡೆಯಲಿದೆ. ಸಂಧ್ಯಾ ಅವರಿಗೂ ಚಿತ್ರರಂಗಕ್ಕೂ ಯಾವುದೇ ನಂಟಿಲ್ಲ. ಆಸ್ಪತ್ರೆ ಕೆಲಸಗಳಲ್ಲಿ ಬ್ಯುಸಿಯಾಗಿರ್ತಾರೆ. ಸಿನಿಮಾಗಳನ್ನು ನೋಡುವುದು ಕಮ್ಮಿ. ಕಳೆದ ವರ್ಷ ಬಿಗ್‌ಬಾಸ್ ಶೋ ವೀಕ್ಷಿಸಿದ್ದರಂತೆ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡ ಸಂದರ್ಶನದಲ್ಲಿ ಮಂಜು ಮಾಹಿತಿ ನೀಡಿದ್ದರು. ರಂಗಭೂಮಿ ಹಿನ್ನೆಲೆಯಿಂದ ಬಂದ ಮಂಜು 'ಉಗ್ರಂ' ಚಿತ್ರದ ಪಾತ್ರದಿಂದ ಗಮನ ಸೆಳೆದಿದ್ದರು. ಅಂದಿನಿಂದ ಉಗ್ರಂ ಮಂಜು ಎಂದೇ ಖ್ಯಾತರಾಗಿದ್ದಾರೆ. 'ಮ್ಯಾಕ್ಸ್' ಚಿತ್ರದಲ್ಲಿ ಕೂಡ ನಟಿಸಿದ್ದರು.

More from Filmibeat

Read more about: bigg boss 12 bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X