ಈಟಿವಿ ಮಧ್ಯರಾತ್ರಿ ಶೋನಲ್ಲಿ ಬಟ್ಟೆ ಕಳಚಿದ ತಾರೆ

ಇದು ಅಮೆರಿಕಾದ ಜನಪ್ರಿಯ E! ಟಿವಿ (ಎಂಟರ್ ಟೈನ್ ಮೆಂಟ್ ಟೆಲಿವಿಷನ್) ಕಾರ್ಯಕ್ರಮ. ಈ ಕಾರ್ಯಕ್ರಮದ ಹೆಸರು Chelsea Lately. ಇದೊಂದು ಕಾಮಿಡಿ ಶೋ ಆಗಿದ್ದು ತಾರೆ ಚೆಲ್ಸಿಯಾ ಹ್ಯಾಂಡ್ಲರ್ (37)ನಡೆಸಿಕೊಡುತ್ತಾರೆ.
ಆದರೆ ಇತ್ತೀಚೆಗೆ ಈ ಕಾರ್ಯಕ್ರಮಕ್ಕೆ ಮತ್ತೊಬ್ಬ ಹಾಲಿವುಡ್ ಖ್ಯಾತ ತಾರೆ ಸಾಂಡ್ರಾ ಬುಲಕ್ (48) ಆಗಮಿಸಿದ್ದರು. ಇಬ್ಬರೂ ಸ್ನಾನದ ಸನ್ನಿವೇಶದಲ್ಲಿ ಭಾಗವಹಿಸಬೇಕಾಯಿತು. ಇನ್ನೇನು ಷವರ್ ಆನ್ ಆಗಬೇಕು ನೋಡಿ ಕಟ್ ಕಟ್ ಕಟ್....
ನೇರ ಪ್ರಸಾರದಲ್ಲಿ ಇಬ್ಬರೂ ಬಟ್ಟೆ ಕಳಚಿ ನೇರಾನೇರ ನಿಂತು ಮಾತಿಗಿಳಿದ್ದಾರೆ. ಆ ದೃಶ್ಯಗಳನ್ನು ಮಧ್ಯರಾತ್ರಿ ವೀಕ್ಷಿಸುತ್ತಿದ್ದ ವೀಕ್ಷಕರು ಕುಳಿತಲ್ಲೇ ಬೆವರಿದ್ದಾರೆ. ಇಬ್ಬರೂ ಈ ಕಾರ್ಯಕ್ರಮದಲ್ಲಿ ಬಟ್ಟೆ ಕಳಚಿದ್ದಷ್ಟೇ ಅಲ್ಲದೆ. ಷವರ್ ಮುಂದೆ ಸಿಕ್ಕಾಪಟ್ಟೆ ಕಿತ್ತಾಡಿದ್ದಾರೆ.
ಈ ಶೋಗೆ ಆಗಮಿಸಿದ ಸಾಂಡ್ರಾ ಬೇಕೆಂದೇ ಚೆಲ್ಸಿಯಾರನ್ನು ಗೋಳುಹೊಯ್ದುಕೊಂಡಿದ್ದಾಳೆ. ಈ ಕಾರ್ಯಕ್ರಮ ಅಷ್ಟೇನು ಚೆನ್ನಾಗಿ ಮೂಡಿಬರುತ್ತಿಲ್ಲ. ಯುವತಿಯರಿಗೆ ನೀನು ರೋಲ್ ಮಾಡೆಲ್ ಆಗಬೇಕು...ನಿದ್ದೆಯಿಂದ ಎದ್ದೇಳು ಎಂದು ಚುಚ್ಚಿದ್ದಾಳೆ.
ನಿನ್ನ ಅತಿಥಿಗಳ ಜೊತೆ ಮಲಗುವುದನ್ನು ನಿಲ್ಲಿಸು. ಅದಕ್ಕಾಗಿಯೇ ನಿನ್ನ ಶೋಗೆ ನಾನು ಬಂದಿರಲಿಲ್ಲ. ನಿನ್ನ ಜೊತೆ ಮಲಗಲು ನನಗಿಷ್ಟವಿಲ್ಲ ಎಂದಿದ್ದಾಳೆ ಸಾಂಡ್ರಾ. ಇದರಿಂದ ಕುಪಿತಳಾದ ಚೆಲ್ಸಿಯಾ ಕೂಡ ಸಾಂಡ್ರಾಳನ್ನು ಬೆಂಡೆತ್ತಿದ್ದಾಳೆ. ಇಬ್ಬರೂ ಶರಂಪರ ಕಿತ್ತಾಡಿ ಕಡೆಗೆ ಟಿವಿ ಪ್ರೆಸೆಂಟರ್ ಅವರಿಗೆ ತೆಗೆದು ಒಂದು ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











