BBK 10 Grand Finale ; ಇತಿಹಾಸ ಸೃಷ್ಟಿಸುವಲ್ಲಿ ವಿಫಲವಾದ ಸಂಗೀತಾ ; ಬಿಗ್ ಬಾಸ್ ಕಿರೀಟ ಮುಡಿಗೇರಿಸಿಕೊಂಡ ಏಕೈಕ ನಟಿ ಇವರೇ !

ಈ ಬಾರಿಯ ಬಿಗ್ ಬಾಸ್ ಶೋ ನಲ್ಲಿ ಗೆಲ್ಲುವ ಸ್ಪರ್ಧಿ ಅಂತಲೇ ಬಿಂಬಿತವಾಗಿದ್ದವರು ಸಂಗೀತಾ ಶೃಂಗೇರಿ. ಒಂದಷ್ಟು ಕಿರಿಕ್ಕು, ಕೀಟಲೆ, ವಾದ, ವಿವಾದಗಳಿಂದ ಸದ್ದು ಮಾಡಿದ್ದ ಸಂಗೀತಾ ಈ ಬಾರಿ ಗೆದ್ದೆ ಗೆಲ್ತಾರೆ ಅನ್ನುವ ವಿಶ್ವಾಸ ಎಲ್ಲರಲ್ಲಿತ್ತು. ಕನ್ನಡದ ಹಿರಿಯ ನಟಿ ಶ್ರುತಿ ನಂತರ ಬಿಗ್ ಬಾಸ್ ಕಿರೀಟವನ್ನ ಮುಡಿಗೇರಿಸಿಕೊಂಡ ಎರಡನೇ ಮಹಿಳಾ ಸ್ಫರ್ಧಿಯಾಗಲಿದ್ದಾರೆ ಎಂಬ ನಂಬಿಕೆ ಬಹುತೇಕರಲ್ಲಿತ್ತು. ಆದರೆ ಅದು ಆಗಲಿಲ್ಲ. ಸಂಗೀತಾ ಶೃಂಗೇರಿ ಇತಿಹಾಸವನ್ನ ಸೃಷ್ಟಿಸಲಿಲ್ಲ.

ಬಿಗ್ ಬಾಸ್' ಕಾರ್ಯಕ್ರಮ ಗೆದ್ದ ಮೊದಲ ಮಹಿಳಾ ಸ್ಪರ್ಧಿ ಶ್ರುತಿ.

ಕನ್ನಡದಲ್ಲಿ ಇಲ್ಲಿಯವರೆಗೆ ಬಿಗ್ ಬಾಸ್ ನ ಹತ್ತು ಸೀಸನ್ ಪ್ರಸಾರವಾಗಿವೆ. ಆದರೆ ವಿಶೇಷ ಏನೆಂದರೆ ಈ ಹತ್ತರಲ್ಲಿ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡ ಏಕೈಕ ಮಹಿಳಾ ಸ್ಫರ್ಧಿ ಅಂದ್ರೆ ಅದು ಹಿರಿಯ ನಟಿ ಶ್ರುತಿ ಮಾತ್ರ. ಶ್ರುತಿ ಅವರನ್ನ ಹೊರತು ಪಡಿಸಿದರೆ ಬೇರೆ ಯಾರು ಪ್ರಶಸ್ತಿಯನ್ನ ಗೆಲ್ಲಲಿಲ್ಲ. ಈ ಕಾರಣಕ್ಕೆ ಸಂಗೀತಾ ಮೇಲೆ ಅನೇಕರಿಗೆ ನಿರೀಕ್ಷೆ ಇತ್ತು. ಗೆಲ್ತಾರೆ ಅನ್ನುವ ವಿಶ್ವಾಸ ಇತ್ತು. ಆದರೆ ಆ ನಿರೀಕ್ಷೆ ಹುಸಿಯಾಯಿತು.

Sangeetha Sringeri Gets Eliminated From Bigg Boss Kannada Season 10

ಬಿಗ್ ಬಾಸ್ 03ರಲ್ಲಿ ಶ್ರುತಿ VS ಚಂದನ್

ಬಿಗ್ ಬಾಸ್' ಮನೆಯಲ್ಲಿದ್ದ ಅಷ್ಟೂ ದಿನ ಅನೇಕ ವಾದ-ವಿವಾದಗಳು ಆದರೂ, ಎಲ್ಲೂ ಸಹನೆ ಮತ್ತು ತಾಳ್ಮೆ ಕಳೆದುಕೊಳ್ಳದೆ, ಗಾಂಭೀರ್ಯದಿಂದ ಇದ್ದ ಶ್ರುತಿ, 14 ವಾರ ಮನೆಯಲ್ಲಿದ್ದರು. ನಿಜ ಜೀವನದಲ್ಲಿ ಇದ್ದ ಹಾಗೇ ಶ್ರುತಿ ಬಿಗ್ ಬಾಸ್ ಮನೆಯಲ್ಲಿ ಇಲ್ಲ ಎಂಬ ಸ್ಫರ್ಧಿಗಳ ರಾಗದ ನಡುವೆಯೂ ಶ್ರುತಿ ಬಿಗ್ ಬಾಸ್ ಕಿರೀಟವನ್ನ ಮುಡಿಗೇರಿಸಿಕೊಂಡಿದ್ದರು. ಗೆದ್ದು ಬೀಗಿದ್ದರು.

ಈ ಬಾರಿಯೂ ಅದೇ ಪವಾಡ ನಡೆಯುವ ನಿರೀಕ್ಷೆ ಇತ್ತು

ಬಿಗ್ ಬಾಸ್ ಸೀಸನ್ ಮೂರರಂತೆಯೇ ಈ ಬಾರಿಯೂ ಕೂಡ ಸಂಗೀತಾ ಶೃಂಗೇರಿ ಗೆಲ್ತಾರೆ ಎಂದು ಎಲ್ಲರು ಭಾವಿಸಿದ್ದರು. ಆದರೆ ಸಂಗೀತಾ ಶೃಂಗೇರಿ ಗೆಲುವಿನ ರೇಸ್‌ನಿಂದ ಹೊರಬಿದ್ದರು. 2ನೇ ರನ್ನರ್‌ ಅಪ್‌ ಅರ್ಥಾತ್ 3ನೇ ಸ್ಥಾನಕ್ಕೆ ಸಂಗೀತಾ ಶೃಂಗೇರಿ ತೃಪ್ತಿ ಪಟ್ಟರು. ಈ ಮೂಲಕ ಬಿಗ್ ಬಾಸ್ ಪ್ರಶಸ್ತಿ ಗೆದ್ದ ಎರಡನೇ ಮಹಿಳಾಮಣಿ ಅನ್ನುವ ಪಟ್ಟದಿಂದ ಕೂಡ ಸಂಗೀತಾ ವಂಚಿತರಾದರು.

Sangeetha Sringeri Gets Eliminated From Bigg Boss Kannada Season 10

ಸಂಗೀತಾ ಹೇಳಿದ್ದೇನು..?

2ನೇ ರನ್ನರ್ ಅಪ್ ಆದ್ಮೇಲೆ ಇಷ್ಟು ದಿನಗಳವರೆಗೆ ನನಗೆ ಸಪೋರ್ಟ್ ಮಾಡಿದ ಕರ್ನಾಟಕದ ಜನತೆ, ಅಭಿಮಾನಿಗಳಿಗೆ ಧನ್ಯವಾದಗಳು. ಬಿಗ್ ಬಾಸ್‌ ತಂಡ ಹಾಗೂ ಕಿಚ್ಚ ಸುದೀಪ್‌ ಸರ್‌ಗೆ ಧನ್ಯವಾದಗಳು. ಇಲ್ಲಿ ನಾನು ಕಲಿತಿರುವ ಪಾಠವನ್ನ ನನ್ನ ಜೀವನದಲ್ಲಿ ಮರೆಯೋಲ್ಲ. ಲೈಫ್ ಗೋಸ್ ಆನ್. ಇಟ್ಸ್ ಎ ಗೇಮ್‌. ನಾನು ಗೆಲ್ಲೋಕೆ ಆಗಿಲ್ಲ. ಆದರೆ, ಕರ್ನಾಟಕದ ಜನರ ಹೃದಯ ಗೆದ್ದಿದ್ದೀನಿ. ಇಲ್ಲಿಗೆ ಬಂದಾಗ ಕರ್ನಾಟಕದ ಕ್ರಶ್ ಆಗಿದ್ದೆ. ಈಗ ಸಿಂಹಿಣಿ ಆಗಿ ಹೊರಗೆ ಹೋಗುತ್ತಿದ್ದೇನೆ'' ಎಂದರು ಸಂಗೀತಾ ಶೃಂಗೇರಿ. ಇಷ್ಟೇ ಅಲ್ಲ ಇಡೀ 'ಬಿಗ್ ಬಾಸ್' ತಂಡಕ್ಕೆ ನಾನು ಥ್ಯಾಂಕ್ಸ್ ಹೇಳೋಕೆ ಇಷ್ಟ ಪಡ್ತೀನಿ. ನಾನು ಹಲವು ಬಾರಿ ಬ್ರೇಕ್ ಡೌನ್ ಆಗಿದ್ದೇನೆ. ಆಗಲೇ ಅವರು ನನ್ನನ್ನ ಕಳುಹಿಸಬಹುದಿತ್ತು. ಆದರೆ, ಎಲ್ಲರೂ ಆತ್ಮಸ್ಥೈರ್ಯ ತುಂಬಿದ್ದಾರೆ. ನಾನು ಮುಂದೆ ಲೈಫ್‌ನಲ್ಲಿ ಏನಾಗ್ತೀನಿ.. ಅದಕ್ಕೆ 100% ಕ್ರೆಡಿಟ್ಸ್ ಬಿಗ್ ಬಾಸ್‌'ಗೆ ಹೋಗುತ್ತೆ. ಇಲ್ಲಿಂದ ಏನು ಪಡೆದುಕೊಂಡಿದ್ದೇನೋ, ಅದನ್ನ ಉಳಿಸಿಕೊಳ್ಳುತ್ತೇನೆ ಎಂದು ಕೂಡಾ ಸಂಗೀತಾ ಹೇಳಿದರು.

More from Filmibeat

English summary
In an unexpected twist Sangeetha Sringeri who participated in Bigg Boss Kannada Season 10 got evicted from the house during grand finale of the show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X