ನನಗೆ ನೀವೇ ಬಿಗ್ ಬಾಸ್ ; ಕಿಚ್ಚ ಸುದೀಪ್ ಗೆ ಉಘೇ ಉಘೇ ಎಂದ ಸಂಗೀತಾ

ಮಳೆ ನಿಂತು ಹೋದ ಮೇಲೂ ಹನಿಯೊಂದು ಮೂಡಿದೆ ಎಂಬಂತೆ, ಬಿಗ್ ಬಾಸ್ ಕನ್ನಡ 10 ಮುಗಿದು ಒಂದು ವಾರವಾಗ್ತಾ ಬಂದರೂ ಬಿಗ್ ಬಾಸ್ ಕುರಿತು ಚರ್ಚೆ ನಿಲ್ತಿಲ್ಲ. ಬಿಗ್ ಬಾಸ್ ಮನೆಯಲ್ಲಿದ್ದ ಸ್ಫರ್ಧಿಗಳ ಅಭಿಮಾನಿ ಬಳಗ ಸಾಮಾಜಿ ಜಾಲತಾಣದಲ್ಲಿ ಇವತ್ತಿಗೂ ಕೂಡ ಬಿಗ್ ಬಾಸ್ ಬಗ್ಗೆ ಚರ್ಚೆಯನ್ನ ಮಾಡ್ತಿದೆ. ತಮ್ಮ ತಮ್ಮ ನೆಚ್ಚಿನ ಸ್ಫರ್ಧಿಯ ಬಗ್ಗೆ ಅಭಿಮಾನದ ಮಾತುಗಳನ್ನಾಡ್ತಿದೆ.

ಇನ್ನೂ ಸಾಮಾಜಿಕ ಜಾಲತಾಣದಲ್ಲಿಯೇ ಇಷ್ಟೊಂದು ಚರ್ಚೆ ನಡೆಯುತ್ತಿರುವಾಗ ಆ ಮನೆಯಲ್ಲಿ ಇದ್ದು 112 ದಿನ ಬದುಕನ್ನ ಬದುಕಿ, ಪ್ರತಿಷ್ಠೆಯ ಕಣವನ್ನಾಗಿ ಸ್ವೀಕರಿಸಿದ ಸ್ಫರ್ಧಿಗಳು ಆ ಅನುಭವ ಹಾಗೂ ಆ ದಿನಗಳನ್ನ ಹೇಗೆ ತಾನೇ ಮರೆಯಲು ಸಾಧ್ಯ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಕೋಟಿ ಕೊಟ್ಟರೂ ಬಿಗ್ ಬಾಸ್ ಗೆ ಹೋಗಲ್ಲವೆಂದು ಮೊದಲು ಹೇಳಿ ಆ ನಂತರ ಬಿಗ್ ಬಾಸ್ ಸೀಟಿ ಊದಿದ ತಕ್ಷಣ ಮನೆ ಸೇರಿಕೊಂಡಿದ್ದ ಸಂಗೀತಾ ಶೃಂಗೇರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಗ್ ಬಾಸ್ ನ ದಿನಗಳನ್ನ ನೆನಪು ಮಾಡಿಕೊಂಡಿದ್ದಾರೆ. ನಮ್ಮ ಬಿಗ್ ಬಾಸ್ ನೀವೇ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನ ಬಾಯ್ತುಂಬ ಹೊಗಳಿದ್ದಾರೆ.

Sangeetha Sringeri is all praises for Bigg Boss Host Sudeep

ಕಿಚ್ಚ ಸುದೀಪ್ ಗೆ ಸಂಗೀತಾ ಬಹುಪರಾಕ್..!

ನಮ್ಮೆಲ್ಲರ ಪ್ರೀತಿಯ ಕಿಚ್ಚನಿಗೆ ನಾನು ಎಂದೆಂದೂ ಆಭಾರಿ. ಮೊದಲನೇ ವಾರದಿಂದ ಕೊನೆಯ ದಿನದವರೆಗೂ ಬಹಳ ಸೂಕ್ಷ್ಮತೆಯಿಂದ, ಕಾಳಜಿಯಿಂದ ಕಂಡಿರಿ, ತಿದ್ದಿ ಸರಿ ದಾರಿ ತೋರಿದಿರಿ. ನಮ್ಮ ಬಿಗ್ ಬಾಸ್ ನೀವೇ ಎಂದು ತಮ್ಮ ಮನದ ಮಾತುಗಳಿಗೆ ಅಕ್ಷರದ ರೂಪವನ್ನ ಕೊಟ್ಟಿದ್ದಾರೆ ಬಿಗ್ ಬಾಸ್ ನ ಎರಡನೇ ರನ್ನರ್ ಅಪ್ ಸಂಗೀತಾ ಶೃಂಗೇರಿ

ಇನ್ನೂ ಅತ್ಯಂತ ಕಷ್ಟಕರವೆನಿಸಿದ್ದ ಬಿಗ್ ಬಾಸ್ ಪ್ರಯಾಣವನ್ನ, ಅಡ್ವೆಂಚರ್ ರೂಪದಲ್ಲಿ ಬದಲಿಸಿದ್ದಕ್ಕೆ ಸುದೀಪ್ ಅವರಿಗೆ ಧನ್ಯವಾದವನ್ನೂ ತಿಳಿಸಿರುವ ಸಂಗೀತಾ, ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಸಮಯದಲ್ಲಿ ಕಿಚ್ಚನ ಜೊತೆ ಕಳೆದ ಕೆಲ ಅವಿಸ್ಮರಣೀಯ ಕ್ಷಣಗಳನ್ನೂ ಹಂಚಿಕೊಂಡಿದ್ದಾರೆ.

Sangeetha Sringeri is all praises for Bigg Boss Host Sudeep

ಪ್ರಶಸ್ತಿ ಗೆಲ್ಲುವ ಭರವಸೆಯನ್ನೊಂದಿದ್ದ ಸಂಗೀತಾ

ಗ್ರ್ಯಾಂಡ್ ಫಿನಾಲೆಗೆ ತೆರೆ ಬೀಳುವುದಕ್ಕಿಂತ ಮುನ್ನ, ಬಿಗ್ ಬಾಸ್ ಪ್ರಶಸ್ತಿ ಎತ್ತಿ ಹಿಡಿಯೋದು ನಾನೇ' ಎಂಬ ಆತ್ಮವಿಶ್ವಾಸದಲ್ಲಿ ಸಂಗೀತಾ ಶೃಂಗೇರಿ ಇದ್ದರು. ವಿನಯ್, ಕಾರ್ತಿಕ್, ಡ್ರೋನ್ ಪ್ರತಾಪ್, ಎಲ್ಲರನ್ನೂ ಹಿಂದಿಕ್ಕಿ ಪ್ರಶಸ್ತಿಯನ್ನ ಮುಡಿಗೇರಿಸಿಕೊಳ್ಳುವ ಕನಸನ್ನೂ ಕೂಡ ಸಂಗೀತಾ ಕಂಡಿದ್ದರು. ಆದರೆ, ದುರಾದೃಷ್ಟ. ಸಂಗೀತಾ ಶೃಂಗೇರಿ 2ನೇ ರನ್ನರ್ ಅಪ್ ಆದರು. ಪ್ರಶಸ್ತಿ ಇಲ್ಲದೇ ಮನೆಗೆ ಬಂದರು. ಆ ನಂತರ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷವಾಗಿದ್ದ ಸಂಗೀತಾ ಬಿಗ್ ಬಾಸ್ ಮನೆಯಲ್ಲಿದ್ದಾಗ ಪ್ರೀತಿ ತೋರಿಸಿ, ಹರಸಿ ಹಾರೈಸಿದ ಸಮಸ್ತ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದರು ಸಂಗೀತಾ ಶೃಂಗೇರಿ.

More from Filmibeat

English summary
Sangeetha Sringeri expressed her gratitude and says thanks to kichcha sudeep those wonderfull & joyfull moments
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X