ಬಿಗ್ ಬಾಸ್ ಮುಗಿದ ಬಳಿಕ 'ಚಾರ್ಲಿ 777' ನಟಿ ಸಂಗೀತಾ ಶೃಂಗೇರಿ ಏನು ಮಾಡ್ತಿದ್ದಾರೆ?
ನಟಿ ಸಂಗೀತಾ ಶೃಂಗೇರಿ ಯಾರಿಗೆ ಗೊತ್ತಿಲ್ಲ ಹೇಳಿ? 'ಹರಹರ ಮಹಾದೇವ' ಧಾರಾವಾಹಿಯ ಸತಿಯಾಗಿ ಕಿರುತೆರೆಗೆ ಕಾಲಿಟ್ಟ ಈಕೆ ನಂತರ ಹಿರಿತೆರೆಯಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. 'ಬಿಗ್ ಬಾಸ್ ಸೀಸನ್ 10' ರ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟ ಈಕೆ ಸಿಂಹಿಣಿ ಎಂದೇ ಖ್ಯಾತಿ ಪಡೆದುಕೊಂಡಾಕೆ.
'ಹರಹರ ಮಹಾದೇವ' ಧಾರಾವಾಹಿಯ ನಂತರ ತೆಲುಗು ಧಾರಾವಾಹಿಯಲ್ಲಿ ಅಭಿನಯಿಸಿದ್ದ ಈಕೆ 'A+' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಮುಂದೆ 'ಸಾಲಗಾರರ ಸಹಕಾರ ಸಂಘ', 'ಚಾರ್ಲಿ 777' ಸೇರಿದಂತೆ 'ಶಿವಾಜಿ ಸುರತ್ಕಲ್', 'ಶರ್ಮಿಳಾ', 'ಲಕ್ಕಿಮಾನ್', 'ಅನು ಆಂಟನಿ ದೋಣಿಯಪ್ಪ', 'ಪಂಪ ಪಂಚಳ್ಳಿ ಪರಶಿವಮೂರ್ತಿ', 'ಲೇಖನ', 'ಮಾರಿಗೋಲ್ಡ್' ಮುಂತಾದ ಸಿನಿಮಾದಲ್ಲಿ ನಟಿಸಿದರು.

'ಸೂಪರ್ ಜೋಡಿ ಸೀಸನ್ 2' ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಈಕೆ 'ಬಿಗ್ ಬಾಸ್ ಸೀಸನ್ 10'ರ ಸ್ಪರ್ಧಿಯಾಗಿ ದೊಡ್ಮನೆಯಲ್ಲಿ ಮೋಡಿ ಮಾಡಿದ್ದರು. ಮಾತ್ರವಲ್ಲ ಸೆಕೆಂಡ್ ರನ್ನರ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ ಸಂಗೀತಾ ಶೃಂಗೇರಿ.
ಈಗಂತೂ ತಮ್ಮದೇ ಯುಟ್ಯೂಬ್ ಚಾನೆಲ್ ಅನ್ನು ತೆರೆದಿದ್ದು, ಅದರಲ್ಲಿ ಹಲವು ವಿಡಿಯೋಗಳು ಸೇರಿದಂತೆ ತಮ್ಮ ಖಾಸ ಗೆಳೆಯ ಡ್ರೋನ್ ಪ್ರತಾಪ್ ಅವರೊಂದಿಗಿನ ಪಿಕ್ನಿಕ್ ಹಾಗೂ ಫನ್ನಿ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಬಿಗ್ ಬಾಸ್ ಸೀಸನ್ ಹತ್ತರ ನಂತರ ಸಂಗೀತಾ ಶೃಂಗೇರಿ ಅವರಿಗೆ ಎಷ್ಟು ಪಾಪ್ಯುಲಾರಿಟಿ ಸಿಕ್ಕಿತೆಂದರೆ, ಬಹಳಷ್ಟು ಕಾರ್ಯಕ್ರಮಗಳಿಗೆ ಅವರನ್ನೇ ಮುಖ್ಯ ಅತಿಥಿಯಾಗಿ ಕರೆಯಲಾರಂಭಿಸಿದರು ಅಭಿಮಾನಿಗಳು. ಎಲ್ಲಿ ಹೋದರೂ ಸಂಗೀತಾ ಶೃಂಗೇರಿ ಅವರನ್ನು ಕಾಡುವ ಒಂದೇ ಒಂದು ಪ್ರಶ್ನೆ ಎಂದರೆ "ನಿಮ್ಮ ಮದುವೆ ಯಾವಾಗ?" ಈ ವಿಚಾರವಾಗಿ ಈಗಾಗಲೇ ಹಲವು ಬಾರಿ ನಟಿ ಸಂಗೀತಾ ಶೃಂಗೇರಿ ಮಾತನಾಡಿದ್ದಾರೆ.
ತಮಗೆ ಮದುವೆ ಎಂದರೆ ಬಹಳ ಭಯವಿದೆ ಎಂದು ಹೇಳಿಕೊಂಡಿದ್ದಾರೆ. ಚಿಕ್ಕಂದಿನಿಂದಲೂ ಕೆಟ್ಟ ಕನಸು ಎಂದರೆ ತಾವು ಮದುವೆಯಾಗುವುದು ಎಂಬುದನ್ನು ಬಿಗ್ ಬಾಸ್ ನಲ್ಲಿ ಒಮ್ಮೆ ಹಂಚಿಕೊಂಡಿದ್ದರು. ಹೀಗಿದ್ದರೂ ನಟಿ ಸಂಗೀತಾ ಶೃಂಗೇರಿ ಅವರಿಗೆ ಈ ಪ್ರಶ್ನೆಯನ್ನು ಮಾತ್ರ ಜನ ಕೇಳುವುದನ್ನು ಬಿಟ್ಟಿಲ್ಲ.
ತಮ್ಮ ಖಡಕ್ ಉತ್ತರಗಳಿಗೆ ಹೆಸರುವಾಸಿ ಆಗಿರುವ ಸಂಗೀತಾ ಶೃಂಗೇರಿ, ಯಾವ ಪ್ರಶ್ನೆಗೂ ಖಡಕ್ಕಾಗಿ ಉತ್ತರಿಸದೆ ಬಿಡುವುದಿಲ್ಲ. ಇನ್‌ಸ್ಟಾಗ್ರಾಂ ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಆ್ಯಕ್ಟೀವ್ ಇರುವ ನಟಿ ಸಂಗೀತಾ ಶೃಂಗೇರಿ ಅವರಿಗೆ ಬಹಳಷ್ಟು ಫ್ಯಾನ್ ಪೇಜ್‌ಗಳು ಇವೆ.
ಇತ್ತೀಚಿಗೆ ಅವರು ಪೋಸ್ಟ್ ಮಾಡಿದ ಒಂದು ಪೋಸ್ ಬಹಳ ವೈರಲ್ಲಾಗುತ್ತಿದೆ. ಹೌದು, ಟಿ ಎಸ್ಟೇಟ್‌ನಲ್ಲಿ ಟೀ ಕೊಯ್ಲು ಮಾಡುತ್ತಿರುವ ಒಂದಷ್ಟು ಇಂಟರೆಸ್ಟಿಂಗ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ಸಂಗೀತಾ ಶೃಂಗೇರಿ. ಈ ಪೋಸ್ಟ್ ಗೆ, "ಇಂತಹ ಚಿಕ್ಕ ಚಿಕ್ಕ ಕ್ಷಣಗಳು ಹೆಚ್ಚಿನ ಸಂತೋಷ ಕೊಡುತ್ತದೆ" ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಒಂದು ಲಕ್ಷಕ್ಕೂ ಹೆಚ್ಚಿನ ಲೈಕ್ ಗಳು ಬಂದಿದ್ದು ಅಭಿಮಾನಿಗಳು ಮುದ್ದು ಗೊಂಬೆ ಸಂಗೀತಾ ಎಂಬಿತ್ಯಾದಿ ಕಾಮೆಂಟ್ ಗಳನ್ನು ಹಾಕಿದ್ದಾರೆ.


Click it and Unblock the Notifications











