DC ಸ್ನೇಹ ಯಾಕೀ ನಿರ್ಧಾರ? ಸಂಜನಾ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಬಿಡಲು ಕಾರಣ ಇದೇನಾ?

By ಎಸ್ ಸುಮಂತ್

ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಸಿಕ್ಕಾಪಟ್ಟೆ ಅಭಿಮಾನಿ ಬಳಗವಿದೆ. ಇಂದಿನಿಂದ ಅಂತಲ್ಲ ಆರಂಭದಿಂದಾನೂ ಅಭಿಮಾನಿಗಳಿದ್ದಾರೆ. ಧಾರಾವಾಹಿಯ ಕಂಟೆಂಟ್ ಕೂಡ ಅದೆಷ್ಟೋ ತಾಯಂದಿರ ನಿಜ ಜೀವನವೇ ಕಣ್ಣ ಮುಂದೆ ಬಂದಂತೆ ಆಗುತ್ತದೆ. ಕೆಲವೊಂದು ಸಲ ಸಂವಾದ ಕಾರ್ಯಕ್ರಮಗಳಲ್ಲಿಯೂ ರಿಯಲ್ ಪುಟ್ಟಕ್ಕನ ಕುರಿತ ಬದುಕು ಅನಾವರಣವಾಗಿತ್ತು. ಅದೆಷ್ಟೋ ಜಿಲ್ಲೆಗಳಲ್ಲಿ ಪುಟ್ಟಕ್ಕನನ್ನು ಅಪ್ಪಿ ಒಪ್ಪಿದ್ದರು.

ಪುಟ್ಟಕ್ಕನಿಗೆ ಮೂವರು ಹೆಣ್ಣು ಮಕ್ಕಳು. ಗಂಡ ಬಿಟ್ಟು ಹೋದರೂ ಎದೆಗುಂದದೆ ಮಕ್ಕಳನ್ನು ಸಾಕಿದ್ದು ಪುಟ್ಟಕ್ಕ. ಮೊದಲನೇ ಮಗಳು ಸಹನಾ ಅಂಜಿಕೆ, ಹೆದರಿಕೆಯಿಂದಾನೇ ಬೆಳೆದವಳು. ಆದರೆ ಎರಡನೇಯ ಮಗಳು ಸ್ನೇಹಾ, ಸಿಕ್ಕಾಪಟ್ಟೆ ಸ್ಟ್ರಾಂಗ್. ತಪ್ಪು ಕಂಡರೆ ಅಲ್ಲಿ ಖಂಡಿಸುವ ಗುಣ. ಈಗ ಜಿಲ್ಲಾಧಿಕಾರಿಯಾಗಿದ್ದಾಳೆ. ಆದರೆ ಅದ್ಯಾಕೋ ಏನೋ ಸೀರಿಯಲ್ ಬಿಡುವ ಮಾತನ್ನೇ ಆಡಿದ್ದಾರೆ ಸಂಜನಾ ಬುರ್ಲಿ.

Sanjana Burli cryptic post hints her exit from Puttakkana Makkalu serial

ಶಾಕಿಂಗ್ ಪೋಸ್ಟ್ ಹಾಕಿದ ಸಂಜನಾ

ಸಂಜನಾ ಬುರ್ಲಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಫೋಟೋ, ವಿಡಿಯೋಗಳನ್ನು ಹಾಕುತ್ತಲೇ ಇರುತ್ತಾರೆ. ಸಂಜನಾಗೆ ಫಾಲೋವರ್ಸ್ ಕೂಡ ಜಾಸ್ತಿನೆ ಇದಾರೆ. ಅದರಲ್ಲೂ ಸಾಕಷ್ಟು ಕಡೆ ಟ್ರಿಪ್ ಹೋಗ್ತಾ ಇರ್ತಾರೆ. ಆದರೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಒಂದನ್ನು ಹಾಕಿರುವ ಸಂಜನಾ, ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಆ ಸುದ್ದಿ ಓದಿ ಯಾವ ವಿಚಾರಕ್ಕೆ ಎಂದು ಅಂದಾಜಿಸುವುದಕ್ಕೂ ಕಷ್ಟವಾಗಿದೆ.

ಸೀರಿಯಲ್ ಬಿಡ್ತಾ ಇದಾರಾ ಸಂಜನಾ?

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸಂಜನಾ, ಸ್ನೇಹ ಪಾತ್ರವನ್ನು ಮಾಡುತ್ತಿದ್ದಾರೆ. ಪುಟ್ಟಕ್ಕನ ಆಸೆಯಂತೆ ಜಿಲ್ಲಾಧಿಕಾರಿಯೂ ಆಗಿದ್ದಾಳೆ. ಜಿಲ್ಲಾಧಿಕಾರಿಯಾದಾಗಿನಿಂದ ತನ್ನ ಅಕ್ಕನನ್ನು ಕಾಪಾಡಿದ್ದಾಳೆ, ತನ್ನ ಅತ್ತೆಯನ್ನು ಕಾಪಾಡಿ, ಮೋಸಗಾರರನ್ನು ಮಟ್ಟ ಹಾಕಿದ್ದಾಳೆ. ಆದರೆ ಜಿಲ್ಲಾಧಿಕಾರಿಯಾದ ಮೇಲೆ ಸ್ನೇಹ ಸೀರಿಯಲ್ ತೊರೆಯುವ ನಿರ್ಧಾರ ಮಾಡಿಬಿಟ್ಟರಾ? ಎಂಬ ಅನುಮಾನ ಶುರುವಾಗಿದೆ. ಯಾಕಂದ್ರೆ ಸಂಜನಾ ಬುರ್ಲಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ 'ಕೆಲವೊಂದಕ್ಕೆ ವಿದಾಯ ಹೇಳುವುದು ತುಂಬಾನೇ ಕಷ್ಟ. ಆದರೆ ಕೆಲವೊಂದು ಬೆಳವಣಿಗೆವೆ ಇದು ಬಹಳ ಅವಶ್ಯಕವಾಗಿದೆ' ಎಂದು ಪೋಸ್ಟ್ ಹಾಕಿದ್ದಾರೆ.

Sanjana Burli cryptic post hints her exit from Puttakkana Makkalu serial

ಈ ಜೋಡಿಗೆ ಸಿಕ್ಕಾಪಟ್ಟೆ ಫ್ಯಾನ್ಸ್

ಸೀರಿಯಲ್ ಶುರುವಾದಾಗಿನಿಂದ ಕಂಠಿಗೆ ತನ್ನದೇ ಆದ ಅಭಿಮಾನಿ ಬಳಗವಿದೆ. ಅದರಲ್ಲೂ ಕಂಠಿ ಮತ್ತು ಸ್ನೇಹಾ ಪರಿಚಯವಾದ ಮೇಲಂತೂ ಅಭಿಮಾನಿ ಬಳಗ ದೊಡ್ಡದಾಗಿದೆ. ಇಬ್ಬರ ಪೋಟೋ, ವಿಡಿಯೋಗಳನ್ನು ಕೊಲಾಜ್ ಮಾಡಿ, ಫ್ಯಾನ್ ಪೇಜ್‌ಗಳಲ್ಲಿ ಹಾಕಿ ಎಂಜಾಯ್ ಮಾಡುತ್ತಿದ್ದಾರೆ. ಕಂಠಿಯನ್ನ ಅಣ್ಣ ಎಂದು ಸಂಜನಾ ಅವರನ್ನ ಅತ್ತಿಗೆ ಎಂದೇ ಕೊಂಡಾಡುತ್ತಿದ್ದಾರೆ. ಆ ಅಭಿಮಾನಿಗಳಿಗೆಲ್ಲಾ ಸಂಜನಾ ನಿರಾಸೆ ಮಾಡಿದ್ದಾರೆ.

ಸುದ್ದಿ ನೋಡಿ ಫ್ಯಾನ್ಸ್ ಬೇಸರ

ಸಂಜನಾ ಬುರ್ಲಿ ಹಾಕಿರುವ ಪೋಸ್ಟ್‌ಗೆ ಫ್ಯಾನ್ಸ್ ಅಂತೂ ಬೇಸರ ಮಾಡಿಕೊಂಡಿದ್ದಾರೆ. ಆಗಾಗ ಪಾತ್ರಧಾರಿಗಳು ಬದಲಾಗುವುದು ಸಹಜ. ಆದರೆ ಪ್ರಮುಖ ಪಾತ್ರಧಾರಿಗಳು ಬದಲಾಗುವುದು ಕಡಿಮೆಯೇ ಸರಿ. ಒಮ್ಮೊಮ್ಮೆ ಅದು ಕೂಡ ಆಗುತ್ತದೆ. ಆದರೆ ಒಮ್ಮೆ ಒಂದು ಜೋಡಿ ಜನರ ಮನಸ್ಸಲ್ಲಿ ಉಳಿದು ಬಿಟ್ಟರೆ ಮತ್ತೆ ಆ ಜಾಗಕ್ಕೆ ಬೇರೆಯವರನ್ನು ಊಹೆ ಮಾಡಿಕೊಳ್ಳುವುದು ಕಷ್ಟ. ಇದೀಗ ಈ ಸುದ್ದಿ ನೋಡಿ ಒಂದು ವೇಳೆ ಸ್ನೇಹಾ ಪಾತ್ರಧಾರಿ ಬದಲಾದರೆ ಕಂಠಿಯ ಜೋಡಿ ಯಾರಾಗಬಹುದು ಎಂಬ ಊಹೆ ಜನರಲ್ಲಿದೆ. ಸಂಜನಾಗೆ ಸಿನಿಮಾದ ಅವಕಾಶವೇನಾದರೂ ಸಿಕ್ಕಿತಾ? ಎಂಬ ಪ್ರಶ್ನೆಯೂ ಅಭಿಮಾನಿಗಳಲ್ಲಿ ಕಾಡುತ್ತಿದೆ.

More from Filmibeat

English summary
Zee kannada puttakkana makkalu Written Update on October 17th episode. Here is the details about Sanjana Burli viral post;
Read more about: tv serial sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X