Sanjana Burli: ಬೇಸರ, ಒತ್ತಡ, ಗೊಂದಲಗಳಿಗೆ ಒಂದೇ ಪರಿಹಾರ ಎಂದ ಪುಟ್ಟಕ್ಕನ ಮಗಳು
ಜೀ ಕನ್ನಡ ವಾಹಿನಿಯ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಈಗ ಸ್ನೇಹಾ ಹಾಗೂ ಕಂಠಿ ಮದುವೆ ವಿಚಾರ ದೊಡ್ಡ ಪಂಚಾಯ್ತಿ ಆಗಿದೆ. ಸ್ನೇಹಳನ್ನು ಬಿಟ್ಟಿರಲಾರದೇ ಕಂಠಿ ತಾಳಿ ಕಟ್ಟಿದ್ದಾನೆ. ಕಂಠಿ ಅನ್ನು ಪ್ರೀತಿಸಿದ ಸ್ನೇಹಾಳಿಗೆ ಅವನು ಬೇಕು ಎನಿಸುತ್ತಿದೆ. ಆತ ಬಂಗಾರಮ್ಮನ ಮಗ ಎಂಬ ಕಾರಣಕ್ಕೆ, ಬಲವಂತವಾಗಿ ತಾಳಿ ಕಟ್ಟಿದ್ದಾನೆ ಎಂದು ದೂರು ನೀಡಿದ್ದಾಳೆ.
ಸದ್ಯ ಕಂಠಿ ಜೈಲು ಪಾಲಾಗಿದ್ದಾನೆ. ಪುಟ್ಟಕ್ಕ ಪಂಚಾಯ್ತಿ ಕರೆದು, ಮಗಳ ಬದುಕನ್ನು ಸರಿ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದಾಳೆ. ಆದರೆ, ಸ್ನೇಹ ತಾಳಿಯನ್ನು ಕಿತ್ತು ಬಿಸಾಡುವ ನಿರ್ಧಾರ ಮಾಡಿದ್ದಾಳೆ. ಮಗಳಿಗೆ ಬುದ್ಧಿ ಹೇಳಿದ ಪುಟ್ಟಕ್ಕ ಸೀದಾ ಪಂಚಾಯ್ತಿಗೆ ತೆರಳಿದ್ದಾಳೆ. ಅಮ್ಮನ ಮಾತು ಕೇಳಿದ ಸ್ನೇಹ ಸಂಸಾರವೇ ಮುಖ್ಯ ಎಂಬುದನ್ನು ಅರಿತು ಕಂಠಿ ಅನ್ನು ಸ್ಟೇಷನ್‌ನಿಂದ ಬಿಡಿಸಿಕೊಂಡು ಬಂದಿದ್ದಾಳೆ. ಪಂಚಾಯ್ತಿಯಲ್ಲೂ ಕೂಡ ಈ ಮದುವೆಯನ್ನು ನಾನು ಒಪ್ಪಿಕೊಳ್ಳುತ್ತೇನೆ. ಕಂಠಿ ಜೊತೆಗೆ ಜೀವನ ಮಾಡುತ್ತೇನೆ ಎಂದು ಹೇಳಿದ್ದಾಳೆ.

ಸ್ನೇಹಳಈ ನಿರ್ಧಾರ ಈಗ ಬಂಗಾರಮ್ಮನಿಗೆ ಕೆಂಡ ಸೆರಗಿಗೆ ಕಟ್ಟಿಕೊಂಡಂತಾಗಿದೆ. ಸ್ನೇಹಳನ್ನು ಸೊಸೆ ಎಂದು ಒಪ್ಪಿಕೊಳ್ಳಲಾಗದೇ ಒದ್ದಾಡುತ್ತಿದ್ದಾಳೆ. ಆದರೆ, ಸ್ನೇಹಳ ಈ ನಿರ್ಧಾರ ಕಂಠಿ ಹಾಗೂ ಪುಟ್ಟಕ್ಕನಿಗೆ ಖುಷಿ ತಂದಿದೆ. ಮುಂದೆ ಸ್ನೇಹ, ಬಂಗಾರಮ್ಮನನ್ನು ಹೇಗೆ ಬದಲಾಯಿಸುತ್ತಾಳೆ. ಯಾವ ರೀತಿಯಲ್ಲಿ ಬಂಗಾರಮ್ಮ ಹಾಗೂ ಸ್ನೇಹ ಹೊಂದಿಕೊಳ್ಳುತ್ತಾರೆ ಎಂಬ ಕುತೂಹಲ ಕಾಡಿದೆ.
ಹೊಸ ರೀಲ್ ನೋಡಿ
ಧಾರಾವಾಹಿ ಕಥೆ ಒಂದ್ಕಡೆ ಆದರೆ ಈಗ ಸ್ನೇಹ ಅಲಿಯಾಸ್ ಸಂಜನಾ ಬುರ್ಲಿ ತಮ್ಮ ಅಭಿಮಾನಿಗಳಿಗೆ ಸಲ್ಯೂಷನ್ ಒಂದನ್ನು ನೀಡಿದ್ದಾರೆ. ಎಂಜಿನಿಯರಿಂಗ್ ಓದಿ, ನಟಿಯಾಗಿರುವ ಸಂಜನಾ ಬುರ್ಲಿ ಈಗ ಬಣ್ಣದ ಲೋಕದಲ್ಲಿ ನಿಧಾನವಾಗಿ ಬ್ಯುಸಿಯಾಗುತ್ತಿದ್ದಾರೆ. ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಸಂಜನಾ ಅವರು ಆಗಾಗ ರೀಲ್ಸ್ ಮಾಡಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಅಭಿಮಾನಿಗಳ ಕಮೆಂಟ್ ಗೆ ರಿಪ್ಲೈ ಮಾಡುವುದು, ಲೈಕ್ ಕೊಡುವುದು ಕೂಡ ಮಾಡುತ್ತಾರೆ. ಅಭಿಮಾನಿಗಳ ಜೊತೆಗೆ ಟಚ್ ನಲ್ಲಿ ಇರಲು ಬಯಸುವ ಸಂಜನಾ ಅವರು ಈಗ ಅಭಿಮಾನಿಗಳು ಜೀವನದಲ್ಲಿ ಎದುರಿಸುವ ಬೇಸರ, ಗೊಂದಲ ಹಾಗೂ ಇತರೆ ಸಮಸ್ಯೆ ಗಳಿಗೆ ಪರಿಹಾರವನ್ನು ನೀಡಿದ್ದಾರೆ. ಇದರ ರೀಲ್ ಅನ್ನು ನೀವು ಕೂಡ ನೋಡಿ.
ಅಭಿಮಾನಿಗಳಿಗೆ ಸಂಜನಾ ಸಲ್ಯೂಷನ್
ನಿಮಗೇನಾದರೂ ಬೇಸರವಾಗಿದ್ದರೆ, ಓದಿನ ಉದ್ವೇಗವಿದ್ದರೆ, ಯಾವುದಾದರೂ ವಿಚಾರದಲ್ಲಿ ಗೊಂದಲವಿದ್ದರೆ, ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗುತ್ತಿದ್ದರೆ, ಚೆನ್ನಾಗಿ ಸುತ್ತಾಡಿ. ಎಲ್ಲಾದರೂ ಪ್ರಯಾಣ ಮಾಡಿ. ಒಂದು ದಿನ ಅಥವಾ ಕೆಲವು ದಿನಗಳ ಬ್ರೇಕ್ ತೆಗೆದುಕೊಳ್ಳಿ. ಹೊಸ ಜಾಗ ನೋಡುವುದು, ಹೊಸ ಜನರನ್ನು ಭೇಟಿ ಮಾಡುವುದು, ಹೊಸ ಊಟ ಸೇವಿಸುವುದು ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ. ಗೊಂದಲಗಳನ್ನು ಪರಿಹಾರ ಮಾಡುತ್ತದೆ. ಪ್ರಶ್ನೆಗಳಿಗೆ ಉತ್ತರ ಸಿಗುವಂತೆ ಮಾಡುತ್ತದೆ ಎಂದು ಸಂಜನಾ ಅವರು ಹೇಳಿದ್ದಾರೆ.
ಬಣ್ಣದ ಲೋಕದ ಪಯಣ
ನಟಿ ಸಂಜನಾ ಬುರ್ಲಿ ಹಲವು ವರ್ಷಗಳಿಂದ ರಂಗಭೂಮಿಯಲ್ಲಿದ್ದು, ಕಿರುತೆರೆಗೂ ಎಂಟ್ರಿಕೊಟ್ಟು ಸುಮಾರು 5 ವರ್ಷವೇ ಕಳೆದಿದೆ. ಕೆಲ ಸಿನಿಮಾಗಳಲ್ಲೂ ಸಂಜನಾ ಅವರು ನಟಿಸಿದ್ದಾರೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಮೂಲಕ ಚಿರಪರಿಚಿತರಾಗಿದ್ದಾರೆ. ಸಂಜನಾ ಬುರ್ಲಿ ಅವರನ್ನು ಪ್ರೇಕ್ಷಕರು ಸ್ನೇಹಾ ಪಾತ್ರದಲ್ಲಿ ಮೆಚ್ಚಿಕೊಂಡಿದ್ದಾರೆ. ಓದಿನಲ್ಲಿ ರ್ಯಾಂಕ್ ಸ್ಟೂಡೆಂಟ್ ಆಗಿದ್ದ ಸಂಜನಾ ಈಗ ನಟನೆಯಲ್ಲೂ ಮುಂದಿದ್ದಾರೆ. 'ರಾಧ ಸರ್ಚಿಂಗ್ ರಮಣ ಮಿಸ್ಸಿಂಗ್', 'ನಾನ್ ವೆಜ್', 'ವೀಕೆಂಡ್', 'ಸ್ನೇಹರ್ಷಿ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications











