Sanjana Burli: ಸೀರಿಯಲ್ ಬಿಟ್ರು ತಂಗಿನಾ ಬಿಡಲ್ಲ ಸ್ನೇಹಾ; ಡಿಸಿ ಮೇಡಂನ ನೋಡಿ ಖುಷಿ!
ಜೀ ಕನ್ನಡದಲ್ಲಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಆರಂಭದಲ್ಲಿ ಒಂದೊಳ್ಳೆ ಗಟ್ಟಿ ಕಥೆಯೊಂದಿಗೆ ಸಾಗುತ್ತಿತ್ತು. ಆದರೆ ಸ್ನೇಹಾಳ ಸಾವಿನಿಂದ ಕಥೆ ಎಲ್ಲೆಲ್ಲೋ ಸಾಗುತ್ತಿದೆ. ಕಂಠಿ ಹಳೆಯ ಚಾಳಿಯನ್ನೇ ಶುರು ಮಾಡಿದ್ದಾನೆ. ಸ್ನೇಹಾ ಪಾತ್ರ ಜೀವಂತವಾಗಿದ್ದರೆ, ಒಂದು ಹೆಣ್ಣು ಹಠ ತೊಟ್ಟರೆ ಏನೇ ಆದರೂ ಸಾಧಿಸಬಹುದು ಎಂಬ ಛಲ ಹುಟ್ಟುವಂತೆ ಇತ್ತು. ಆದರೆ ಈಗ ಸ್ನೇಹಾ ಪಾತ್ರ ಸತ್ತಿದೆ.
ಮ್ಯಾಕ್ಸಿಮಮ್ ಇನ್ನೊಂದು ವರ್ಷಗಳ ಕಾಲ 'ಪುಟ್ಟಕ್ಕ ಮಕ್ಕಳು' ಸೀರಿಯಲ್ ರನ್ ಆಗಬಹುದು ಎಂದು ನಿರ್ದೇಶಕ ಆರೂರು ಜಗದೀಶ್ ಅವರೇ ಹೇಳಿದ್ದಾರೆ. ಸದ್ಯ ಬಂಗಾರಮ್ಮನಿಗೆ ಸ್ನೇಹ ಸವಿನ ಸುದ್ದಿ ಈಗ ತಿಳಿದಿದೆ. ಇದರಿಂದ ಬಂಗಾರಮ್ಮನಿಗೆ ಏನಾದರೂ ಆಗುತ್ತಾ ಹೇಗೆ..? ನಂಜಮ್ಮ, ರಾಜೀ ದುರಹಂಕಾರವನ್ನ ಸಹನಾಳೆ ಮುರಿಯುತ್ತಾಳ ಎಂಬುದೆಲ್ಲವನ್ನು ಕಾದು ನೋಡಬೇಕಿದೆ. ಇದು ಸೀರಿಯಲ್ ವಿಚಾರ ಆದ್ರೆ ಆರ್ಟಿಸ್ಟ್ ರಿಯಲ್ ಲೈಫ್ ನಲ್ಲಿ ಬೇರೆ ರೀತಿಯೇ ಇದ್ದಾರೆ.

ತಂಗಿ ಭೇಟಿ ಮಾಡಿದ ಸ್ನೇಹಾ
ಪುಟ್ಟಕ್ಕನಿಗೆ ಮೂವರು ಹೆಣ್ಣು ಮಕ್ಕಳು. ಸ್ನೇಹಾ, ಸಹನಾ, ಸುಮಾ. ಈಗ ಸ್ನೇಹಾ ಪಾತ್ರದಿಂದ ಸಂಜನಾ ಬುರ್ಲಿ ಹೊರಗೆ ಬಂದಿದ್ದಾರೆ. ಆ ಪಾತ್ರಕ್ಕೆ ಇನ್ಯಾರನ್ನೋ ತೆಗೆದುಕೊಳ್ಳುವ ಬದಲಿಗೆ ಪಾತ್ರವನ್ನೇ ಸಾಯಿಸಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸದ್ಯ ಸಂಜನಾ ಇಲ್ಲ. ಆದರೆ ಧಾರಾವಾಹಿಯಿಂದಾಚೆಗೆ ಅಕ್ಕ ತಂಗಿಯ ನಂಟು ಹಾಗೆ ಉಳಿದಿದೆ. ಹೀಗಾಗಿಯೇ ಸುಮಾಳನ್ನ ಭೇಟಿ ಮಾಡಿದ್ದಾಳೆ.
ಎಮ್ಮಾಡಿ ಎಮ್ಮಾಡಿ ಎಂದ ಸಿಸ್ಟರ್ಸ್
ಸೀರಿಯಲ್‌ನಲ್ಲಿದ್ದಾಗಲೇ ಬಿಡುವು ಸಿಕ್ಕ ಕೂಡಲೇ ಸ್ನೇಹಾ ಹಾಗೂ ಸುಮಾ ರೀಲ್ಸ್ ಮಾಡುತ್ತಾ ಕೂರುತ್ತಿದ್ದರು. ಈಗ ಅಪರೂಪಕ್ಕೆ ಭೇಟಿಯಾಗಿದ್ದಾರೆ. ಒಂದು ರೀಲ್ಸ್ ಬೇಡ್ವಾ..? ಬಿಡೋದೆ ಇಲ್ಲ. ಇಬ್ಬರು ಎಮ್ಮಾಡಿ ಹಾಡಿಗೆ ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದಾರೆ. ಬಹಳ ದಿನಗಳ ಬಳಿಕ ಸಿಕ್ಕಿದ್ದಕ್ಕೆ ಫುಲ್ ಖುಷಿಯಾಗಿದ್ದಾರೆ. ಎಂಜಾಯ್ ಮಾಡಿದ್ದಾರೆ.
ಸೀರಿಯಲ್ ಬಿಟ್ಟರು ಸಂಬಂಧ ಬಿಡಲ್ಲ
ಕೆಲವೊಂದು ಸಲ ನಾವೂ ಕೆಲಸ ಮಾಡುವ ಜಾಗದಲ್ಲಿ ಮರೆಯಾಗಲಾಗದ, ಬಿಟ್ಟಿರಲಾರದ ವ್ಯಕ್ತಿಗಳ ಪರಿಚಯವಾಗಿ ಬಿಡುತ್ತದೆ. ಆ ಜಾಗ ಬಿಟ್ಟರು ಆ ವ್ಯಕ್ತಿಗಳನ್ನ ಬಿಡಲ್ಲ. ಇಲ್ಲಿಯೂ ಹಾಗೇ ಆಗಿರೋದು. ಸ್ನೇಹಾ ಪಾತ್ರಧಾರಿಯಿಂದ ಹೊರಗೆ ಬಂದರು, ಸುಮಾ ಜೊತೆಗಿನ ಬಂಧನವನ್ನು ದೂರ ಮಾಡಿಕೊಂಡಿಲ್ಲ. ಇಬ್ಬರ ರೀಲ್ಸ್ ಶೇರ್ ಮಾಡಿ 'ಸಮಯ ಹಾಗೂ ದೂರ ಕೆಲವೊಂದು ಸಂಬಂಧಗಳನ್ನು ದೂರ ಮಾಡುವುದಿಲ್ಲ' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನಾವಿಬ್ಬರು ಒಂದೇ ಧಾರಾವಾಹಿಯಲ್ಲಿ ಈಗ ಜೊತೆಗಿಲ್ಲದೆ ಹೋದರು ಆ ಬಾಂಧವ್ಯ ಹಾಗೆ ಇರಲಿದೆ ಎಂದಿದ್ದಾರೆ.
ಫ್ಯಾನ್ಸ್ ಲೈಕ್ಸ್, ಕಮೆಂಟ್
ಇನ್ನು ಸಂಜನಾ ಬುರ್ಲಿಯನ್ನು ಬಹಳ ದಿನಗಳ ಬಳಿಕ ತಂಗಿಯ ಜೊತೆಗೆ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಕಮೆಂಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಅಕ್ಕ ತಂಗಿಯರ ಬಾಂಡಿಂಗ್ ಹೀಗೆ ಇರಲಿ ಎಂದು ಹಾರೈಸಿದ್ದಾರೆ. ಫೋಟೋಶೂಟ್, ಆಡ್ ಶೂಟ್ ಅಂತ ಬ್ಯುಸಿ ಇರುವ ಸಂಜನಾ ಬುರ್ಲಿ ಆಗಾಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಹಳೆಯ ಸ್ನೇಹಾಳನ್ನು ನೆನಪು ಮಾಡಿಕೊಳ್ಳುತ್ತಾ ಇರುತ್ತಾರೆ. ಅದಕ್ಕೆ ಹಳೆಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.


Click it and Unblock the Notifications











