ಬೆಂಗಳೂರಿನ ಬಿಸಿಲಿನ ಬಿಸಿ ತಾಳಲಾರದೇ ಕಾಶ್ಮೀರಕ್ಕೆ ತೆರಳಿದ ನಟಿ ಸಂಜನಾ ಬುರ್ಲಿ ..!

By ಪ್ರಿಯಾ ದೊರೆ

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರವನ್ನ ನಿರ್ವಹಿಸುತ್ತಿರುವ ಸಂಜನಾ ಬುರ್ಲಿ, ಸದ್ಯಕ್ಕೆ ಜಾಲಿ ಮೂಡ್ ನಲ್ಲಿ ಇದ್ದಾರೆ. ಕಾಶ್ಮೀರದಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ. ಶ್ರೀನಗರ ಹಾಗೂ ಕಾಶ್ಮೀರದ ತಮ್ಮ ಪ್ರವಾಸದ ಫೋಟೋಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಕಾಶ್ಮೀರದಲ್ಲಿ ತಮ್ಮ ನೆಚ್ಚಿನ ನಟಿಯನ್ನ ನೋಡಿದ ಅಭಿಮಾನಿಗಳು ಕೂಡ ಸದ್ಯಕ್ಕೆ ಖುಷಿಯಾಗಿದ್ದಾರೆ.

ನಟಿ ಸ್ನೇಹಾ ಅಲಿಯಾಸ್ ಸಂಜನಾ

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನ್ಯಾಯಕ್ಕೋಸ್ಕರ ಹೋರಾಡುವ ಸ್ನೇಹಾ ಈಗ ಸುಳ್ಳು ಹೇಳಿ ತಪ್ಪಿಗೆ ಸಿಕ್ಕಿ ಬಿದ್ದಿದ್ದಾಳೆ. ಗಂಡ ಕಂಠಿ ಬೇಸರಕ್ಕೆ ಗುರಿಯಾಗಿದ್ದಾಳೆ. ಇನ್ನು ಸ್ನೇಹ ಅಲಿಯಾಸ್ ಸಂಜನಾ ಬುರ್ಲಿ ಅವರು ಸ್ನೇಹರ್ಷಿ ಎಂಬ ಸಿನಿಮಾದಲ್ಲಿ ನಟಿಸಿದ್ದರು.

sanjana burli Srinagar and Kashmir trip

ಇನ್ನು ಕಳೆದ ವರ್ಷ ಸಂಜನಾ ಅವರು ರಾಧ ಸರ್ಚಿಂಗ್ ರಮಣ ಮಿಸ್ಸಿಂಗ್ ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಟ್ರೈಲರ್ ಹಾಗೂ ಹಾಡು ರಿಲೀಸ್ ಆಗಿದೆ. ಸಿನಿಮಾ ರಿಲೀಸ್ ಗಾಗಿ ಸಂಜನಾ ವೈಟ್ ಮಾಡುತ್ತಿದ್ದಾರೆ. ಇನ್ನು ಅನಂತ್ ನಾಗ್ ಅವರ ಜೊತೆಗೆ ವೀಕೆಂಡ್ ಸಿನಿಮಾ ಹಾಗೂ ನಾನ್ ವೆಜ್ ಎಂಬ ಚಿತ್ರದಲ್ಲೂ ಸಂಜನಾ ನಟಿಸಿದ್ದು, ತಮಿಳಿನ ಚಿತ್ರವೊಂದಕ್ಕೂ ಬಣ್ಣ ಹಚ್ಚಿದ್ದಾರೆ. ಮುಂದಿನ ದಿನಗಳಲ್ಲೂ ಒಳ್ಳೊಳ್ಳೆಯ ಪಾತ್ರಗಳು ಬಂದರೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.

ಅಭಿಮಾನಿಗಳೊಂದಿಗೆ ಸಂಪರ್ಕ

ಸಂಜನಾ ಬುರ್ಲಿ ಅವರ ಸ್ನೇಹಾ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ಆಗಾಗ ಫೋಟೋಶೂಟ್ ಮಾಡಿಸುವ ಸಂಜನಾ ಅವರು, ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಫೋಟೋಗಳನ್ನ ಹಂಚಿಕೊಳ್ಳುತ್ತಿರುತ್ತಾರೆ. ಇವರು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹರಿ ಬಿಟ್ಟು ನೋಡುಗರ ಮನ ತಣಿಸುತ್ತ ಇರುತ್ತಾರೆ.

sanjana burli Srinagar and Kashmir trip

ಅಭಿಮಾನಿಗಳ ಕಮೆಂಟ್ ಗೆ ರಿಪ್ಲೈ ಮಾಡುವುದು, ಲೈಕ್ ಕೊಡುವುದು ಕೂಡ ಮಾಡುತ್ತಾರೆ. ಅಭಿಮಾನಿಗಳ ಜೊತೆಗೆ ಟಚ್ ನಲ್ಲಿ ಇರಲು ಬಯಸುವ ಸಂಜನಾ ಅವರು ಅಭಿಮಾನಿಗಳು ಜೀವನದಲ್ಲಿ ಎದುರಿಸುವ ಬೇಸರ, ಗೊಂದಲ ಹಾಗೂ ಇತರೆ ಸಮಸ್ಯೆ ಗಳಿಗೆ ಪರಿಹಾರವನ್ನು ರೀಲ್ಸ್ ಮೂಲಕ ನೀಡಿದ್ದರು. ಸಂಜನಾ ಅವರಿಗೆ ಇನ್ ಸ್ಟಾಗ್ರಾಂ ಪೇಜ್ ನಲ್ಲಿ 306ಕೆ ಫಾಲೋವರ್ಸ್ಗಳಿದ್ದು, 497 ಪೋಸ್ಟ್ ಗಳನ್ನು ಸಂಜನಾ ಅವರು ಮಾಡಿದ್ದಾರೆ.

ಚುಮು ಚುಮು ಚಳಿಯಲ್ಲಿ ನಡುಗುತ್ತಿರುವ ಬೆಡಗಿ

ಸಂಜನಾ ಬುರ್ಲಿ ಪುಟ್ಟಕ್ಕನಿಗೆ ಮಕ್ಕಳು ಧಾರಾವಾಹಿಯಿಂದ ಎಲ್ಲರಿಗೂ ಪರಿಚಿತವಾದರು. ಆ ಗಟ್ಟಿತನದ ಹೆಣ್ಣನ್ನು ಕಂಡು ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡುವುದಕ್ಕೆ ಶುರು ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಂಜನಾ ಬುರ್ಲಿ ಕೂಡ ಸಿಕ್ಕಾಪಟ್ಟೆ ಆಕ್ಟೀವ್.

sanjana burli Srinagar and Kashmir trip

ಸಂಜನಾ ಬುರ್ಲಿ ಶೂಟಿಂಗ್ ನಲ್ಲಿ ಗ್ಯಾಪ್ ಸಿಕ್ಕಿದ್ದೆ ತಡ ಟ್ರಿಪ್ ಹೊರಟು ಬಿಟ್ಟಿದ್ದಾರೆ. ಕಾಶ್ಮೀರದ ಫೇಮಸ್ ಪ್ಲೇಸ್ ಗಳಲ್ಲಿ ಸುತ್ತಾಡುತ್ತಿದ್ದಾರೆ. ದಾಲ್ ಲೇಕ್, ಶ್ರೀನಗರ, ಜಮ್ಮು ಮತ್ತು ಕಾಶ್ಮೀರದಲ್ಲಿ ಸುತ್ತಾಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕನಸಿನ ಲೋಕದಲ್ಲಿ ಸಂಜನಾ

ಇವರೊಬ್ಬರೇ ಹೋಗದೇ ಸ್ನೇಹೊತೆಯ ಜೊತೆಗೆ ಹೋಗಿದ್ದು, ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಬಿಸಿಲಿಗೆ ಬೆಂದು ಬಿಸಿಯಿಂದ ಎಸ್ಕೇಪ್ ಆಗಲೂ ಕಾಶ್ಮೀರಕ್ಕೆ ಫ್ಲೈಟ್ ನಲ್ಲಿ ತೆರಳಿದ್ದಾರೆ. ಅಲ್ಲಿನ ಚುಮು ಚುಮು ಚಳಿಯಲ್ಲಿ ಎಂಜಾಯ್ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಅಪ್ ಡೇಟ್ ಗಳನ್ನು ನೀಡುತ್ತಿದ್ದಾರೆ. ಇಲ್ಲಿಗೆ ತೆರಳುವುದು ಅವರ ಕನಸಾಗಿತ್ತು ಎಂದು ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಹಾಕಿದ್ದಾರೆ.

More from Filmibeat

English summary
sanjana burli trip in Kashmir and shrinagar with her friend
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X