'ಭರ್ಜರಿ ಕಾಮಿಡಿ' ಕಾರ್ಯಕ್ರಮದಿಂದ ಹೊರ ಬಂದ ಸಂಜನಾ!
Recommended Video

'ಭರ್ಜರಿ ಕಾಮಿಡಿ' ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಕಾರ್ಯಕ್ರಮ. ಈ ಕಾರ್ಯಕ್ರಮ ಈಗಾಗಲೇ ಕಿರುತೆರೆಯ ವೀಕ್ಷಕರ ಮನ ಗೆದ್ದಿದೆ. ಕಾರ್ಯಕ್ರಮದ ಸ್ಪರ್ಧಿಗಳ ಪೈಕಿ ಒಬ್ಬರಾದ ನಟಿ ಸಂಜನಾ ಈಗ ಈ ಕಾರ್ಯಕ್ರಮದಿಂದ ಆಚೆ ಬಂದಿದ್ದಾರೆ.
'ಬಿಗ್ ಬಾಸ್' ಕಾರ್ಯಕ್ರಮದ ಮೂಲಕ ಕನ್ನಡಿಗರಿಗೆ ಪರಿಚಯ ಆದ ಸಂಜನಾ ಆ ಕಾರ್ಯಕ್ರಮದ ಮುಗಿದ ನಂತರ ಸಖತ್ ಫೇಮಸ್ ಆದರು. ಒಂದು ಹಂತದಲ್ಲಿ 'ಬಿಗ್ ಬಾಸ್' ನೋಡುಗರಿಗೆ ಪ್ರಥಮ್, ಭುವನ್ ಮತ್ತು ಸಂಜನಾ ಮೂರು ಜನರದ್ದು ತ್ರಿಕೋನ ಪ್ರೇಮಕಥೆಯಂತೆ ಬಿಂಬಿತವಾಗಿತು. ಅದೇನೇ ಇದ್ದರೂ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಇದ್ದ ಪ್ರಥಮ್, ಕಿರಿಕ್ ಕೀರ್ತಿ ಅವರ ರೀತಿ ಸಂಜನಾಗೆ ಕೂಡ ದೃಷ್ಟ ಖುಲಾಯಿಸಿತು. ಸಂಜನಾಗೆ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬಂತು. ಆದರೆ ಸಂಜನಾ ಕಲರ್ಸ್ ಸೂಪರ್ ವಾಹಿನಿಯ ನಂತರ ಸ್ಟಾರ್ ಸುವರ್ಣ ವಾಹಿನಿಗೆ ಶಿಫ್ಟ್ ಆದರು. ಹೀಗಿರುವಾಗ ಈಗ 'ಭರ್ಜರಿ' ಕಾಮಿಡಿ' ಕಾರ್ಯಕ್ರಮದಿಂದ ಸಂಜನಾ ಔಟ್ ಆಗಿದ್ದಾರೆ. ಮುಂದೆ ಓದಿ...

ಸಂಜನಾ ಔಟ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಭರ್ಜರಿ ಕಾಮಿಡಿ' ಕಾರ್ಯಕ್ರಮದಿಂದ ಸದ್ಯ ನಟಿ ಸಂಜನಾ ಕಣ್ಮರೇ ಆಗಿದ್ದಾರೆ. ಈ ಕಾರ್ಯಕ್ರಮದ ಸ್ಪರ್ಧಿಗಳ ಪೈಕಿ ಒಬ್ಬರಾಗಿ ಇಷ್ಟು ದಿನ ವೇದಿಕೆ ಮೇಲೆ ನಟನೆ ಮಾಡುತ್ತಿದ್ದ ಈ ನಟಿ ಈಗ ಕಾರ್ಯಕ್ರಮದಿಂದ ಹೊರ ಬಂದಿದ್ದಾರೆ. ನಟನೆಯಲ್ಲಿ ಹೆಚ್ಚು ಅನುಭವ ಇಲ್ಲದಿದ್ದರೂ ಸಂಜನಾ ತಮ್ಮ ಮ್ಯಾನರಿಸಂ ಮೂಲಕ ಎಲ್ಲರನ್ನು ನಗಿಸುತ್ತಿದ್ದರು.

ಕಾರಣ ಏನು?
ಇನ್ನೂ 'ಭರ್ಜರಿ ಕಾಮಿಡಿ' ಕಾರ್ಯಕ್ರಮ ಮುಗಿದಿಲ್ಲ. ಹೀಗಿರುವಾಗ ಇದ್ದಕ್ಕಿದ್ದ ಹಾಗೆ ಸಂಜಾನ ಕಾರ್ಯಕ್ರಮದಿಂದ ಏಕೆ ಹೊರ ಬಂದರು ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಅದಕ್ಕೆ ಉತ್ತರ ಕೂಡ ಈಗ ಸಿಕ್ಕಿದೆ. ಸಂಜಾನ ಈಗ ತೆಲುಗಿನ ಒಂದು ಧಾರಾವಾಹಿಯಲ್ಲಿ ನಟಿಸಲಿದ್ದಾರೆ. ಅದೇ ಕಾರಣದಿಂದ ಅವರು ಈಗ 'ಭರ್ಜರಿ ಕಾಮಿಡಿ' ಕಾರ್ಯಕ್ರಮದಿಂದ ಹೊರ ನಡೆದಿದ್ದಾರೆ.

ಹೈದರಾಬಾದ್ ನಲ್ಲಿ ಚಿತ್ರೀಕರಣ
ಸಂಜನಾ ಅವರ ಹೊಸ ಧಾರಾವಾಹಿಯ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ಒಂದು ಕಡೆ 'ಭರ್ಜರಿ ಕಾಮಿಡಿ' ಮತ್ತು ಇನ್ನೊಂದು ಕಡೆ ಧಾರಾವಾಹಿ ಎರಡರ ಶೂಟಿಂಗ್ ಒಂದೇ ವೇಳೆಗೆ ಇರುವ ಕಾರಣ ಡೇಟ್ಸ್ ಸಮಸ್ಯೆಯಿಂದಾಗಿ ಅವರು ಕಾರ್ಯಕ್ರಮದಿಂದ ಆಚೆ ಬಂದಿದ್ದಾರೆ. ಯಾವುದೇ ತಕರಾರು ಇಲ್ಲದೆ ವಾಹಿನಿ ಕೂಡ ಅವರನ್ನು ಖುಷಿ ಖುಷಿಯಿಂದ ಕಳುಹಿಸಿಕೊಟ್ಟಿದೆ.

ಸದ್ಯದಲ್ಲಿಯೇ ಕಾರ್ಯಕ್ರಮ ಮುಗಿಯಲಿದೆ
ಡಿಸೆಂಬರ್ 23ಕ್ಕೆ ಶುರು ಆಗಿದ್ದ 'ಭರ್ಜರಿ ಕಾಮಿಡಿ' ಕಾರ್ಯಕ್ರಮ ಸದ್ಯದಲ್ಲಿಯೇ ಮುಗಿಯಲಿದೆ. ಕೊನೆಯ ಹಂತದಲ್ಲಿ ಸಂಜನಾ ಕಾರ್ಯಕ್ರಮದಿಂದ ಆಚೆ ಬಂದಿದ್ದು, ಇದರಿಂದ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ತೊಂದರೆ ಸಹ ಆಗುತ್ತಿಲ್ಲ. 'ಬಿಗ್ ಬಾಸ್' ಬಳಿಕ 'ಭರ್ಜರಿ ಕಾಮಿಡಿ'ಗೆ ಬಂದಿದ್ದ ಸಂಜನಾ ಈಗ ಈ ಕಾರ್ಯಕ್ರಮ ಮುಗಿಯುವ ಮೊದಲೇ ತೆಲುಗಿಗೆ ಹಾರಿದ್ದಾರೆ.

ಕಾರ್ಯಕ್ರಮದ ಬಗ್ಗೆ
'ಭರ್ಜರಿ ಕಾಮಿಡಿ' ಕಾರ್ಯಕ್ರಮ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತಿದೆ. ಈ ಕಾರ್ಯಕ್ರಮದ ಮೂಲಕ ಫಸ್ಟ್ ಟೈಂ ನಟಿ ರಾಗಿಣಿ ಮತ್ತು ದೊಡ್ಡಣ್ಣ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. 'ಭರ್ಜರಿ ಕಾಮಿಡಿ' ಕಾರ್ಯಕ್ರಮದಲ್ಲಿ ಮೂರು ಜನ ತೀರ್ಪುಗಾರರು ಇದ್ದು, ರಾಗಿಣಿ ದ್ವಿವೇದಿ, ದೊಡ್ಡಣ್ಣ ಮತ್ತು ನಿರ್ದೇಶಕ ಗುರುಪ್ರಸಾದ್ ಕಾರ್ಯಕ್ರಮದ ಜಡ್ಜ್ ಆಗಿದ್ದಾರೆ. 'ಅಗ್ನಿಸಾಕ್ಷಿ' ಖ್ಯಾತಿಯ ನಟಿ ವೈಷ್ಣವಿ ಗೌಡ ಕಾರ್ಯಕ್ರಮದ ನಿರೂಪಣೆಯ ಹೊಣೆ ಹೊತ್ತಿದ್ದಾರೆ.


Click it and Unblock the Notifications











