ಸಂಜನಾ ಪತಿ ಗೌತಮ್ ನ ಗುರುತು ಹಿಡಿಯುತ್ತಾಳಾ ಜಾನಕಿ

ಮಗಳು ಜಾನಕಿ ಧಾರಾವಾಹಿ ಬಾರಿ ಕುತೂಹಲದ ಘಟ್ಟದಲ್ಲಿದೆ. ಏಳು ವರ್ಷಗಳಿಂದ ಪತಿ ಸತ್ತುಹೋಗಿದ್ದಾರೆ ಅಂತಾನೆ ತಿಳಿದು ಏಕಾಂಗಿ ಜೀವನ ನಡೆಸುತ್ತಿದ್ದ ಸಂಜನಾಗೆ ದಿಢೀರ್ ಶಾಕ್ ಎದುರಾಗಿದೆ. ಸಂಜನಾ ಪತಿಯನ್ನು ಟಿವಿಯಲ್ಲಿ ನೋಡಿದ್ದಾರೆ. ಪತಿ ಈಗ ದೊಡ್ಡ ಉದ್ಯಮಿಯಾಗಿದ್ದಾರೆ. ಇದನ್ನು ನಂಬುವ ಸ್ಥಿತಿಯಲ್ಲಿ ಸಂಜನಾ ಇಲ್ಲದಿದ್ದರು ಆಕೆಯ ಮನಸ್ಸು ಮಾತ್ರ ಇದು ಪತಿಯೆ ಎಂದು ಹೇಳುತ್ತಿದೆ.

ಸಂಜನಾ ಪತಿಯ ಬಗ್ಗೆ ತಾಯಿ ದೇವಕಿ ಬಳಿ ಹೇಳಿದ್ದಾರೆ. ಆದ್ರೆ ದೇವಕಿ ಸಂಜನಾ ಮಾತನ್ನು ನಂಬುತ್ತಿಲ್ಲ. ದೇವಕಿ ಮಾತ್ರವಲ್ಲ ಮನೆಯವರು ಯಾರು ಕೂಡ ಸಂಜನಾ ಮಾತನ್ನು ನಂಬುವಂತ ಸ್ಥಿತಿಯಲ್ಲಿ ಇಲ್ಲ. ಏಳು ವರ್ಷದ ನಂತರ ಸತ್ತುವರು ಹೇಗೆ ಬದುಕಿ ಬರುತ್ತಾರೆ ಎಂದು ಎಲ್ಲರು ಸಂಜನಾ ಅವರಿಗೆ ಪ್ರಶ್ನೆ ಮಾಡುತ್ತಿದ್ದಾರೆ.

ಆದ್ರೆ ಸಂಜನಾ ಮಾತ್ರ ಇದು ಪತಿ ಗೌತಮ್ ಅವರೆ ಎಂದು ಬಲವಾಗಿ ನಂಬಿದ್ದಾರೆ. ಈ ಮಧ್ಯೆ ಸಂಜನಾ ನೋಡಿದ ಪತಿ ಎಂದು ಹೇಳುತ್ತಿರುವ ವ್ಯಕ್ತಿ ಭಾರ್ಗಿ ಮನೆಗೆ ಅತಿಥಿಯಾಗಿ ಬರುತ್ತಿದ್ದಾರೆ. ಅಲ್ಲದೆ ಭಾರ್ಗಿಗೆ ತುಂಬಾ ಆಪ್ತರಾಗಿದ್ದಾರೆ ವರುಣ್ ವೈಭವ್. ಮುಂದೆ ಓದಿ..

ಸಂಜನಾ ಮಾತನ್ನು ನಂಬುತ್ತಿಲ್ಲ ದೇವಕಿ

ಸಂಜನಾ ಮಾತನ್ನು ನಂಬುತ್ತಿಲ್ಲ ದೇವಕಿ

ಸಂಜನಾ ಪತಿ ಗೌತಮ್ ಅವರನ್ನು ಟಿವಿಯಲ್ಲಿ ನೋಡುತ್ತಿದ್ದಂತೆ ಫುಲ್ ಶಾಕ್ ಆಗಿದ್ದಾರೆ. ತಾಯಿಯನ್ನು ಕರೆದು ಹೇಳಿದ್ರೆ ದೇವಕಿ ಮಗಳ ಮಾತನ್ನು ನಂಬುತ್ತಿಲ್ಲ. ದೇವಕಿ ಗಾಬರಿಯಾಗಿದ್ದನ್ನು ನೋಡಿ ಆಕೆಯ ಭ್ರಮೆ ಇರಬೇಕೆಂದು ನಂಬಿದ್ದಾರೆ. ಗಂಡು ಸತ್ತೋಗಿದ್ದಾರೆ ಎಂದೇ ನಂಬಿಕೊಂಡು ಬಂದಿದ್ದ ಸಂಜನಾಗೆ ದಿಢೀರನೆ ಶಾಕ್ ಆಗಿದೆ. ಮಗಳ ಗಾಬರಿಯನ್ನು ನೋಡಿ ಸಮಾಧಾನ ಮಾಡಿದ್ದಾರೆ ದೇವಕಿ.

ಸಂಜನಾ ಮಾತು ನಂಬುತ್ತಾರಾ ಜಾನಕಿ

ಸಂಜನಾ ಮಾತು ನಂಬುತ್ತಾರಾ ಜಾನಕಿ

ಪತಿ ಗೌತಮ್ ಬದುಕಿರುವ ಬಗ್ಗೆ ಸಂಜನಾ ಜಾನಕಿ ಬಳಿ ಹೇಳಿಕೊಂಡಿದ್ದಾರೆ. ಶಾಕ್ ನಲ್ಲಿ ಕೂತಿದ್ದ ಸಂಜನಾರನ್ನು ವಿಚಾರಿದ ಜಾನಕಿಗೆ ಟಿವಿಯಲ್ಲಿ ಕಂಡ ಗೌತಮ್ ಅವರನ್ನು ನೋಡಿದ ವಿಚಾರ ಹೇಳಿದ್ದಾರೆ. ಸಂಜನಾ ಮಾತನ್ನು ಕೇಳಿದ ಜಾನಕಿ ಕೂಡ ಗೊಂದಲದಲ್ಲಿದ್ದಾರೆ. ಅಲ್ಲದೆ ಮತ್ತೆ ಟಿವಿಯಲ್ಲಿ ಬಂದರೂ ಬರಬಹುದು ಮತ್ತೆ ನ್ಯೂಸ್ ನೋಡುವಂತೆ ಹೇಳಿದ್ದಾರೆ. ಮತ್ತೆ ಗೌತಮ್ ಕಂಡರೆ ಹೇಳಿ ಎಂದು ಕೆಸಲಕ್ಕೆ ಹೋಗಿದ್ದಾರೆ ಜಾನಕಿ.

ಭಾರ್ಗಿ ಮನೆಗೆ ವಿಶೇಷ ಅಥಿತಿ

ಭಾರ್ಗಿ ಮನೆಗೆ ವಿಶೇಷ ಅಥಿತಿ

ಭಾರ್ಗಿ ಮನೆಗೆ ವಿಶೇಷವಾದ ಅತಿಥಿ ಒಬ್ಬರು ಬರ್ತಿದ್ದಾರೆ. ವರುಣ್ ವೈಭವ್ ಎನ್ನುವ ವಜ್ರದ ವ್ಯಾಪಾರಿ ಬರುತ್ತಿರುವುದಾಗಿ ರಶ್ಮಿ ಬಳಿ ಹೇಳಿದ್ದಾರೆ ಬಾರ್ಗಿ. ವರುಣ್ ವೈಭವ್ ಅಂದ್ರೆ ಸಂಜನಾ ಪತಿಯೆ ಇರಬಹುವುದಾ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ. ಚಂಚಲ ನಿಶ್ಚಿತಾರ್ಥಕ್ಕೆ ವಜ್ರದ ಉಂಗುರಗಳನ್ನು ವರುಣ್ ವೈಭವ್ ಅವರ ಬಳಿಯೆ ಕೊಂಡುಕೊಂಡಿದ್ದಾರೆ ಭಾರ್ಗಿ.

ಗೌತಮ್ ಗೊಂದಲದಲ್ಲಿ ಸಂಜನಾ

ಗೌತಮ್ ಗೊಂದಲದಲ್ಲಿ ಸಂಜನಾ

ಸಂಜನಾ ಮನೆಯವರ ಬಳಿ ಎಲ್ಲಾ ಪತಿ ಗೌತಮ್ ನೋಡಿದ ಕಥೆ ಹೇಳಿದ್ದಾರೆ. ಆದ್ರೆ ಸಂಜನಾ ಮಾತನ್ನು ಯಾರು ನಂಬುವಂತ ಸ್ಥಿತಿಯಲ್ಲಿ ಇಲ್ಲ. ಏಳು ವರ್ಷಗಳ ನಂತರ ಮತ್ತೆ ಪತಿ ಕಾಣಿಸಿಕೊಳ್ಳುತ್ತಾರೆ ಅಂತ ಹೇಳಿದ್ರೆ ಯಾರು ನಂಬುವುದಿಲ್ಲ ಎಂದು ಹೇಳುತ್ತಿದ್ದಾರೆ. ಒಂದುವರೆ ವರ್ಷ ಜೊತೆಯಲ್ಲೆ ಸಂಸಾರ ಮಾಡಿದವರು ಅದೂ ಪತಿಯೆ ಎಂದು ಮನೆಯವರಿಗೆಲ್ಲ ಬಿಡಿ ಬಿಡಿಸಿ ಹೇಳುತ್ತಿದ್ದಾರೆ ಸಂಜನಾ. ಆದ್ರೆ ಯಾರು ಸಂಜನಾ ಮಾತನ್ನು ನಂಬುತ್ತಿಲ್ಲ.

ಗೌತಮ್ ಬಗ್ಗೆ ವಿಚಾರಿಸಿದ ಸಂಜನಾ

ಗೌತಮ್ ಬಗ್ಗೆ ವಿಚಾರಿಸಿದ ಸಂಜನಾ

ಸಂಜನಾ ಸುದ್ದಿ ಚಾನಲ್ ಗೆ ಹೋಗಿ ವಿಚಾರಿಸಿಕೊಂಡು ಬಂದಿದ್ದಾರೆ. ಆದ್ರೆ ಅಲ್ಲೂ ಖಾತ್ರಿಯಾಗಿಲ್ಲ. ಆ ಸುದ್ದಿ ಚಾನಲ್ ನಲ್ಲಿ ಗೌತಮ್ ಇರುವ ವಿಡಿಯೋವನ್ನು ಡಿಲಿಟ್ ಮಾಡಿದ್ದಾರೆ. ಅಲ್ಲಿಯವರ ಸಹಾಯದ ಮೇರೆಗೆ ಫೋಟೋವನ್ನು ತೆಗೆದುಕೊಂಡು ಬಂದಿದ್ದಾರೆ. ಗೌತಮ್ ಹಳೆಯ ಫೋಟೋ ಜೊತೆ ಹೋಲಿಕೆ ಮಾಡಿ ನೋಡಿದ ದೇವಕಿ ಇದು ಗೌತಮ್ ಅಲ್ಲ ಎಂದು ಹೇಳಿದ್ದಾರೆ. ಆದ್ರೆ ಜಾನಕಿ ಈ ಫೋಟೋ ನೋಡಿ ಗುರುತು ಹಿಡಿಯುತ್ತಾರ ಎನ್ನುವುದೀಗ ಕುತೂಹಲ ಮೂಡಿಸಿದೆ.

More from Filmibeat

English summary
Sanjana is shocked upon seeing her husband Gautham, She was believed to be dead, on the news. She grows depressed as Devaki and Janaki refuse to believe that Gautham is alive.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X