»   » ತಮಿಳು ರಿಯಾಲಿಟಿ ಶೋಗೆ ಆಯ್ಕೆ ಆದ ಸರಿಗಮಪ ಗಾಯಕ ಸಂಜಿತ್ ಹೆಗ್ಡೆ

ತಮಿಳು ರಿಯಾಲಿಟಿ ಶೋಗೆ ಆಯ್ಕೆ ಆದ ಸರಿಗಮಪ ಗಾಯಕ ಸಂಜಿತ್ ಹೆಗ್ಡೆ

Posted By:
Subscribe to Filmibeat Kannada

'ಜೀ ಕನ್ನಡ' ವಾಹಿನಿಯ ಸರಿಗಮಪ ಸೀಸನ್ 13 ಕಾರ್ಯಕ್ರಮದ ಸ್ಪರ್ಧಿಯಾಗಿದ್ದ ಸಂಜಿತ್ ಹೆಗ್ಡೆ ಈಗ ತಮಿಳಿನ ಒಂದು ರಿಯಾಲಿಟಿ ಶೋ ಒಂದಕ್ಕೆ ಆಯ್ಕೆ ಆಗಿದ್ದಾರೆ.

ಕನ್ನಡದ ಸರಿಗಮಪ ನಂತರ ದೊಡ್ಡ ಜನಪ್ರಿಯತೆ ಗಳಿಸಿದ ಸಂಜಿತ್ ಹೆಗ್ಡೆ ಸಿನಿಮಾಗಳಲ್ಲಿ ಹಾಡುವ ಅವಕಾಶವನ್ನು ಪಡೆದರು. ಆದರೆ ಇದೀಗ ಸಿನಿಮಾದ ಜೊತೆಗೆ ಮತ್ತೆ ಸಂಜಿತ್ ಇನ್ನೊಂದು ಸಿಂಗಿಂಗ್ ಶೋದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೀ ತಮಿಳು ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ ಸಂಜಿತ್ ಈಗ ತಮ್ಮ ಹಾಡು ಶುರು ಮಾಡಿದ್ದಾರೆ. ಮುಂದೆ ಓದಿ...

ಸಂಚಿತ್ ಹೆಗ್ಡೆ ಆಯ್ಕೆ

ಜೀ ತಮಿಳು ವಾಹಿನಿಯ ಸರಿಗಮಪ ಕಾರ್ಯಕ್ರಮದ ಆಡಿಷನ್ ನಲ್ಲಿ ಸ್ಪರ್ಧಿಯಾಗಿ ಸಂಜಿತ್ ಹೆಗ್ಡೆ ಆಯ್ಕೆ ಆಗಿದ್ದಾರೆ.

ತೀರ್ಪುಗಾರರಾಗಿ ವಿಜಯ ಪ್ರಕಾಶ್

ವಿಶೇಷ ಅಂದರೆ ತಮಿಳಿನ ಈ ಕಾರ್ಯಕ್ರಮದಲ್ಲಿಯೂ ಕನ್ನಡದ ಗಾಯಕ ವಿಜಯ ಪ್ರಕಾಶ್ ಅವರೇ ತೀರ್ಪುಗಾರರಾಗಿದ್ದಾರೆ.

ಮೊದಲ ಹಾಡಿನಲ್ಲೇ ಮೋಡಿ

ಸಂಜಿತ್ ಈ ಕಾರ್ಯಕ್ರಮದಲ್ಲಿ ತಮ್ಮ ಮೊದಲ ಹಾಡಿನಲ್ಲಿಯೇ ಮೋಡಿ ಮಾಡಿದ್ದಾರೆ. ಕಾರ್ಯಕ್ರಮದ ಉಳಿದ ತೀರ್ಪುಗಾರರಾಗಿದ್ದ ಕಾರ್ತಿಕ್ ಮತ್ತು ಉದಿತ್ ನಾರಾಯಣ್ ಕೂಡ ಸಂಜಿತ್ ಹಾಡಿನ್ನು ಸಖತ್ ಮೆಚ್ಚಿಕೊಂಡಿದ್ದಾರೆ.

ಜನ ಕೂಡ ಇಷ್ಟ ಪಟ್ಟಿದ್ದಾರೆ.

ಸಂಜಿತ್ ಹಾಡಿನ ಬಗ್ಗೆ ನೂರಾರುಜನ ಜೀ ತಮಿಳು ವಾಹಿನಿಯ ಫೇಸ್ ಬುಕ್ ಪೇಜ್ ನಲ್ಲಿ ಕಾಮೆಂಟ್ ಮಾಡಿದ್ದಾರೆ.

ಸಿನಿಮಾಗಳಲ್ಲಿ ಹಾಡು

ಸದ್ಯ ಸಂಜಿತ್ ಹೆಗ್ಡೆ 'ಚಮಕ್' ಮತ್ತು 'ಕಾಲೇಜ್ ಕುಮಾರ್' ಚಿತ್ರದ ಹಾಡಿಗೆ ಧ್ವನಿಯಾಗಿದ್ದಾರೆ.

English summary
Zee Kannada channel's 'Sarigamapa Season 13' contestant Sanjith Hegde got the chance to participate in Zee Tamil Sarigamapa show.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada