For Quick Alerts
  ALLOW NOTIFICATIONS  
  For Daily Alerts

  ಕಿರುತೆರೆಯಲ್ಲಿ ರಾಗಿಣಿ- ಸಂಜನಾ: ಯುಗಾದಿ ಸಂಭ್ರಮದಲ್ಲಿ ಕಣ್ಣೀರಿಟ್ಟ ನಟಿಯರು

  |

  ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ಸ್ಯಾಂಡಲ್ ವುಡ್ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ತಿಂಗಳ ಬಳಿಕ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಕಿರುತೆರೆಯ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವ ಇಬ್ಬರೂ ನಟಿಯರು ವೇದಿಕೆಯಲ್ಲಿ ಕುಣಿದು, ಕುಪ್ಪಳಿಸುವ ಜೊತೆಗೆ ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

  ಮಾದಕ ವಸ್ತು ಪ್ರಕರಣದಲ್ಲಿ ನಟಿ ರಾಗಿಣಿ ಮತ್ತು ಸಂಜನಾ ಕಳೆದ ವರ್ಷ ಸೆಪ್ಟಂಬರ್ ತಿಂಗಳಲ್ಲಿ ಜೈಲು ಸೇರಿದಿದ್ದರು. ಸುಮಾರು 4 ತಿಂಗಳ ಕಾನೂನು ಹೋರಾಟದ ಬಳಿಕ ಇಬ್ಬರೂ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಜೈಲಿನಿಂದ ಹೊರಬಂದ ರಾಗಿಣಿ ಮತ್ತು ಸಂಜನಾ ಸದ್ಯ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೆ ಬಣ್ಣದ ಲೋಕದಲ್ಲಿ ಸಕ್ರೀಯರಾಗಿರುವ ಇಬ್ಬರೂ ನಟಿಯರು ಇತ್ತೀಚಿಗೆ ಕಿರುತೆರೆಯ ಅದ್ದೂರಿ ಸಮಾರಂಭದಲ್ಲಿ ಭಾಗಿಯಾಗಿದ್ದರು. ಮುಂದೆ ಓದಿ..

  ಯುಗಾದಿ ಸಂಭ್ರಮದಲ್ಲಿ ರಾಗಿಣಿ-ಸಂಜನಾ

  ಯುಗಾದಿ ಸಂಭ್ರಮದಲ್ಲಿ ರಾಗಿಣಿ-ಸಂಜನಾ

  ಸಂಜನಾ ಮತ್ತು ರಾಗಿಣಿ ಇಬ್ಬರೂ ಕಿರುತೆರೆಯ ಯುಗಾದಿ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯುಗಾದಿ ಸಂಭ್ರಮದಲ್ಲಿ ವಿಶೇಷ ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದಾರೆ. ಜೈಲಿನಿಂದ ಹೊರ ಬಂದ ಬಳಿಕ ಇಬ್ಬರೂ ಮೊದಲ ಬಾರಿಗೆ ಅದ್ದೂರಿ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ.

  ರಾಗಿಣಿ ಈಸ್ ಬ್ಯಾಕ್: ತುಪ್ಪದ ಹುಡುಗಿ ಕೈಯಲ್ಲಿರುವ ಚಿತ್ರಗಳು ಯಾವುದು?ರಾಗಿಣಿ ಈಸ್ ಬ್ಯಾಕ್: ತುಪ್ಪದ ಹುಡುಗಿ ಕೈಯಲ್ಲಿರುವ ಚಿತ್ರಗಳು ಯಾವುದು?

  ಅಪ್ಪ-ಅಮ್ಮನ ಕಣ್ಣಲ್ಲಿ ನೀರು ನೋಡಿದ್ರೆ ಪ್ರಾಣ ಹೋಗುತ್ತೆ

  ಅಪ್ಪ-ಅಮ್ಮನ ಕಣ್ಣಲ್ಲಿ ನೀರು ನೋಡಿದ್ರೆ ಪ್ರಾಣ ಹೋಗುತ್ತೆ

  ಯುಗಾದಿ ಹಬ್ಬದ ಸಂಭ್ರಮ, ಸಡಗರ ನಡುವೆಯೂ ಸಂಜನಾ ಮತ್ತು ರಾಗಿಣಿ ಕಣ್ಣೀರೀಟ್ಟಿದ್ದಾರೆ. ವೇದಿಕೆ ಮೇಲೆ ಭರ್ಜರಿ ಸ್ಟೆಪ್ ಹಾಕಿದ ನಟಿಯರು ಬಳಿಕ ಕಷ್ಟದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ. ವೇದಿಕೆ ಮೇಲೆ ಮಾತನಾಡಿದ ನಟಿ ರಾಗಿಣಿ, 'ಇಡೀ ಪ್ರಪಂಚದ ವಿರುದ್ಧ ನಿಂತು ಫೈಟ್ ಮಾಡಬಹುದು, ನನಗೇನಿಲ್ಲ. ಆದರೆ ಅಪ್ಪ-ಅಮ್ಮನ ಕಣ್ಣಲ್ಲಿ ನೀರು ನೋಡಿದ್ರೆ ಪ್ರಾಣ ಹೋದಾಗೆ ಆಗುತ್ತೆ. ಅದು ನನಗೆ ತುಂಬಾ ಕಷ್ಟವಾದ ಸಮಯ' ಎಂದಿದ್ದಾರೆ.

  ನಮ್ಮವರು ಅಂತ ಯಾರು ಇಲ್ಲ

  ನಮ್ಮವರು ಅಂತ ಯಾರು ಇಲ್ಲ

  ಇದೇ ವೇದಿಕೆಯಲ್ಲಿ ಮಾತನಾಡಿದ ಸಂಜನಾ, 'ಇವತ್ತು ನೋಡಿದ್ರೆ ತುಂಬಾ ಭಾವುಕ ಆಗುತ್ತೆ. ಆ ರೀತಿಯ ವಿವಾದದಲ್ಲಿ ಬಿದ್ದು, ಮನರಂಜನೆ ಆಗೋದು ಅಲ್ಲ. ನಮ್ಮವರು ಅಂತ ಯಾರು ಇಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದೀನಿ ಜೀವನದಲ್ಲಿ. ತಂದೆ-ತಾಯಿ ಆಶೀರ್ವಾದದಿಂದನೇ ಬದುಕಿದ್ದೀನಿ. ಯಾರು ಬಂದಿಲ್ಲ, ತುಂಬಾ ಬೇಜಾರು ಆಯ್ತು' ಎಂದು ಕಣ್ಣೀರಾಕಿದ್ದಾರೆ.

  ಕರ್ವ-3 ಸಿನಿಮಾದಲ್ಲಿ ಬ್ಯುಸಿ ಇರುವ ರಾಗಿಣಿ

  ಕರ್ವ-3 ಸಿನಿಮಾದಲ್ಲಿ ಬ್ಯುಸಿ ಇರುವ ರಾಗಿಣಿ

  ಈ ಕಾರ್ಯಕ್ರಮ ಇದೇ ಭಾನುವಾರ ಸಂಜೆ ಪ್ರಸಾರವಾಗುತ್ತಿದೆ. ಇನ್ನು ರಾಗಿಣಿ ಜೈಲಿನಿಂದ ಬಂದ ಬಳಿಕ ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ. ಕರ್ವ-3 ಚಿತ್ರದಲ್ಲಿ ರಾಗಿಣಿ ನಟಿಸುತ್ತಿದ್ದಾರೆ. ಗಾಂಧಿಗಿರಿ ಸಿನಿಮಾ ಕೊನೆಯ ಹಂತದಲ್ಲಿದೆ. ಈ ಚಿತ್ರದಲ್ಲಿ ನಟ ಪ್ರೇಮ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ನಾನೆ ನೆಕ್ಸ್ಟ್ ಸಿಎಂ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

  English summary
  Actress Sanjanaa Galrani and Ragini Dwivedi emotional in Ugadi special program in Star Suvarna.
  Saturday, April 10, 2021, 9:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X