ಸಂಕ್ರಾಂತಿ ಹಬ್ಬದ ಸಂಭ್ರಮ: ಉದಯ ಟಿವಿಯಲ್ಲಿ ನಾನ್ ಸ್ಟಾಪ್ ಮನರಂಜನೆ

ಎರಡು ದಶಕಗಳಿಂದ ನಿಮ್ಮ ನೆಚ್ಚಿನ ಉದಯ ಟಿವಿ ಕನ್ನಡಿಗರಲ್ಲಿ ಬೆರೆತಿರುವ ಮನರಂಜನಾ ವಾಹಿನಿ. ಇಲ್ಲಿ ಬಿತ್ತರವಾಗುವ ಧಾರಾವಾಹಿಗಳು ರಿಯಾಲಿಟಿ ಶೋಗಳು ಜನಜನಿತ. ಜನರಿಗೆ ಹತ್ತಿರವಾಗಲು ಧಾರಾವಾಹಿಯ ನಟ-ನಟಿಯರು ಕರ್ನಾಟಕದಾದ್ಯಂತ ವೀಕ್ಷಕರನ್ನು ಭೇಟಿ ಮಾಡುವುದು ಅವರೊಂದಿಗೆ ಸಂವಾದ ಮಾಡುವುದು ಸರ್ವೆ ಸಾಮಾನ್ಯ.

ಅದರಂತೆ, ಉದಯ ಟಿವಿಯಲ್ಲಿ ಪ್ರಸಾರವಾಗುವ ಸೂಪರ್ ಹಿಟ್ ಧಾರಾವಾಹಿಗಳ ಕಲಾವಿದರ ಜೊತೆ ಕನ್ನಡದ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಮತ್ತು ಅನುರಾಧ ಭಟ್ ತಮ್ಮ ಹಾಡುಗಳ ಮೂಲಕ ಚಿತ್ರದುರ್ಗದಲ್ಲಿ ನೆರೆದಿದ್ದ ಸಾವಿರಾರು ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದು, ಒಟ್ಟಾರೆ ವೀಕ್ಷಕರಿಗೆ ಉದಯ ಸಂಕ್ರಾಂತಿ ಉತ್ಸವ ಮನರಂಜನೆಯ ಮಹಾಪೂರವನ್ನೇ ಹರಿಸಲಿದೆ.

ಉದಯ ಟಿವಿಯಲ್ಲಿ ಇದೇ ಮಂಗಳವಾರ... ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಧ್ಯಾಹ್ನ 1 ಗಂಟೆಗೆ 'ಉದಯ ಸಂಕ್ರಾಂತಿ ಉತ್ಸವ' ಕಾರ್ಯಕ್ರಮ ಪ್ರಸಾರವಾಗಲಿದೆ.

Sankranthi festival special: Non stop entertainment programs in Udaya TV

ಅಂದು ಸಂಜೆ 4 ಗಂಟೆಗೆ ಸೀರಿಯಲ್ ನಟ-ನಟಿಯರ ಜೊತೆ ನಡೆದ ವಿಶೇಷ ಕಾರ್ಯಕ್ರಮ 'ಉದಯ ಸೀರಿಯಲ್ ಸಂಕ್ರಾಂತಿ' ಪ್ರಸಾರವಾಗಲಿದೆ.

ಇದರ ಜೊತೆ ಕಾಮಿಡಿ ಕಿಂಗ್ ಶರಣ್ ಅಭಿನಯದ ಬ್ಲಾಕ್‍ ಬಸ್ಟರ್ ಪ್ರೀಮಿಯರ್ ಮೂವಿ 'ವಿಕ್ಟರಿ-2' ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ.

ಹಾಗೆ ಸಂಕ್ರಾಂತಿ ಹಬ್ಬದ ವಿಶೇಷವಾಗಿ ನಂದಿನಿ ಧಾರಾವಾಹಿಯ ಮಹಾಸಂಚಿಕೆ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ.

ಈ ಸಂಕ್ರಾಂತಿ ಹಬ್ಬಕ್ಕೆ ಉದಯ ಟಿವಿ ನಾನ್ ಸ್ಟಾಪ್ ಮನರಂಜನೆಯನ್ನು ಕರುನಾಡ ಜನೆತೆಗೆ ನೀಡಲಿದೆ.

More from Filmibeat

English summary
Sankranthi festival special: Non stop entertainment programs in Udaya TV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X