For Quick Alerts
  ALLOW NOTIFICATIONS  
  For Daily Alerts

  ಕರೋಡ್ ಪತಿಯಲ್ಲಿ 7 ಕೋಟಿ ಗೆಲ್ಲುವ ಅವಕಾಶ ಕಳೆದುಕೊಂಡ ಸನೋಜ್ ರಾಜ್

  |

  ಕೌನ್ ಬನೇಗಾ ಕರೋಡ್ ಪತಿ 11ನೇ ಆವೃತ್ತಿಯ ಶುಕ್ರವಾರದ ಎಪಿಸೋಡ್ ನಲ್ಲಿ ಅತ್ಯುತ್ತಮವಾಗಿ ಆಟವಾಡಿದ ಸನೋಜ್ ರಾಜ್ ಒಂದು ಕೋಟಿ ಗೆದ್ದರು. ಸನೋಜ್ ಕರೋಡ್ ಪತಿ ಆಗ್ತಾರೆ ಎಂಬ ಪ್ರೋಮೋ ಮೊದಲೇ ಬಿಡುಗಡೆಯಾಗಿತ್ತು.

  ಪ್ರೋಮೋದಲ್ಲಿ ನೋಡಿದಂತೆ ಸನೋಜ್ ರಾಜ್ ಒಂದು ಕೋಟಿ ಗೆದ್ದರು. ನಂತರ ಏಳು ಕೋಟಿ ಪ್ರಶ್ನೆ ಎದುರಿಸದ ಸನೋಜ್ ಇದಕ್ಕೂ ಸರಿ ಉತ್ತರ ಕೊಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಹುಸಿಯಾಯಿತು.

  'ಕರೋಡ್ ಪತಿ ' ಆಟದಲ್ಲಿ 1 ಕೋಟಿ ಗೆದ್ದು ಇತಿಹಾಸ ಬರೆದ ಯುವಕ'ಕರೋಡ್ ಪತಿ ' ಆಟದಲ್ಲಿ 1 ಕೋಟಿ ಗೆದ್ದು ಇತಿಹಾಸ ಬರೆದ ಯುವಕ

  ಕ್ರಿಕೆಟ್ ಆಟದ ಕುರಿತು ಕೇಳಲಾದ ಏಳು ಕೋಟಿ ಪ್ರಶ್ನೆ ನೋಡುತ್ತಿದ್ದಂತೆ ಗೊಂದಲಕ್ಕೆ ಒಳಗಾದ ಸನೋಜ್, ಆಟವನ್ನ ಕ್ವಿಟ್ ಮಾಡಲು ನಿರ್ಧರಿಸಿದರು. ಅಷ್ಟಕ್ಕೂ, ಏಳು ಕೋಟಿಗೆ ಕೇಳಲಾದ ಆ ಪ್ರಶ್ನೆ ಯಾವುದು?

  1 ಕೋಟಿ ಪ್ರಶ್ನೆ ಯಾವುದು

  1 ಕೋಟಿ ಪ್ರಶ್ನೆ ಯಾವುದು

  7 ಕೋಟಿ ಪ್ರಶ್ನೆಗೂ ಮುಂಚೆ ಸನೋಜ್ ರಾಜ್ 1 ಕೋಟಿ ಪ್ರಶ್ನೆ ಎದುರಿಸಿದರು. ಆ ಪ್ರಶ್ನೆಗೆ ಸರಿ ಉತ್ತರ ನೀಡಿದರು. ಈ ಮೂಲಕ ಹನ್ನೊಂದನೇ ಆವೃತ್ತಿಯಲ್ಲಿ ಒಂದು ಕೋಟಿ ಗೆದ್ದ ಮೊದಲ ಅಭ್ಯರ್ಥಿ ಸನೋಜ್ ಆದರು. ಯಾವುದು ಆ ಪ್ರಶ್ನೆ?

  ಪ್ರಶ್ನೆ: ಭಾರತದ ಯಾವ ಮುಖ್ಯ ನ್ಯಾಯಾಧೀಶರ ತಂದೆ ಭಾರತೀಯ ರಾಜ್ಯದ ಮುಖ್ಯಮಂತ್ರಿಯಾಗಿದ್ದರು?

  ಉತ್ತರಗಳು ಹೀಗಿತ್ತು

  ಉತ್ತರಗಳು ಹೀಗಿತ್ತು

  1 ಕೋಟಿಯ ಪ್ರಶ್ನೆಗೆ ನಾಲ್ಕು ಆಯ್ಕೆಗಳು ಈ ಕೆಳಗಿನಂತಿತ್ತು. ಇದಕ್ಕೆ 'ಎಕ್ಸ್ ಪೋರ್ಟ್ ಲೈನ್ ಲೈನ್' ಬಳಸಿ ಸನೋಜ್ ಅವರ ಸಹಾಯದಿಂದ ಉತ್ತರಿಸಿದರು.

  A ಜಸ್ಟಿಸ್ ರಂಜನ್ ಗೋಗಾಯ್

  B ಜಸ್ಟಿಸ್ ದೀಪಕ್ ಮಿಶ್ರಾ

  C ಜಸ್ಟಿಸ್ ಟಿಎಸ್ ಠಾಕೂರ್

  D ಜಸ್ಟಿಸ್ ರಂಗನಾಥ್ ಮಿಶ್ರಾ

  ಸರಿ ಉತ್ತರ: A ಜಸ್ಟಿಸ್ ರಂಜನ್ ಗೋಗಾಯ್

  7 ಕೋಟಿ ಪ್ರಶ್ನೆ ಯಾವುದಾಗಿತ್ತು?

  7 ಕೋಟಿ ಪ್ರಶ್ನೆ ಯಾವುದಾಗಿತ್ತು?

  1 ಕೋಟಿ ಗೆದ್ದ ಸನೋಜ್ ರಾಜ್ ಏಳು ಕೋಟಿಯ ಪ್ರಶ್ನೆ ಎದುರಿಸಿದರು. ಕ್ರಿಕೆಟ್ ಕುರಿತು ಈ ಪ್ರಶ್ನೆ ಕೇಳಲಾಗಿತ್ತು. ಆದರೆ ಉತ್ತರ ಕೊಡಲು ಮುಂದಾಗಲಿಲ್ಲ. ಯಾವುದು ಆ ಪ್ರಶ್ನೆ?

  ಪ್ರಶ್ನೆ: ಆಸ್ಟ್ರೇಲಿಯಾದ ದಂತಕಥೆ ಡಾನ್ ಬ್ರಾಡ್ಮನ್ ಅವರ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ನೂರನೇ ಶತಕ ತಲುಪಲು ಒಂದು ರನ್ ನೀಡಿದ ಭಾರತೀಯ ಬೌಲರ್ ಯಾರು?

  ಆಯ್ಕೆಗಳು ಹೀಗಿತ್ತು

  ಆಯ್ಕೆಗಳು ಹೀಗಿತ್ತು

  ಈ ಪ್ರಶ್ನೆಗೆ ಸರಿಯಾದ ಉತ್ತರ ಸನೋಜ್ ಅವರಿಗೆ ಗೊತ್ತಿರಲಿಲ್ಲ. ಪೂರ್ತಿ ಪ್ರಶ್ನೆ ನೋಡಿದ ಬಳಿಕ ಆಟವನ್ನ ಕ್ವಿಟ್ ಮಾಡಲು ನಿರ್ಧರಿಸಿದರು. ಅಲ್ಲಿಗೆ ಒಂದು ಕೋಟಿ ಗೆದ್ದುಕೊಂಡು ಹೋದರು.
  A ಬಕಾ ಜಿಲಾನಿ

  B ಕಮಂದೂರ್ ರಂಗಚಾರಿ

  C ಗೋಗುಮಲ್ ಕಿಶನ್ ಚಂದ್

  D ಕನ್ವರ್ ರಾಯ್ ಸಿಂಗ್

  ಸರಿ ಉತ್ತರ ಯಾವುದಿತ್ತು?

  ಸರಿ ಉತ್ತರ ಯಾವುದಿತ್ತು?

  ಏಳು ಕೋಟಿ ಪ್ರಶ್ನೆಗೆ ಸರಿಯಾದ ಉತ್ತರ C ಗೋಗುಮಲ್ ಕಿಶನ್ ಚಂದ್ ಆಗಿತ್ತು. ಸನೋಜ್ ರಾಜ್ ಅವರು ಈ ಆವೃತ್ತಿಯಲ್ಲಿ ಒಂದು ಕೋಟಿ ಗೆದ್ದ ಮೊದಲ ಅಭ್ಯರ್ಥಿ. ಈ ಮೂಲಕ ಕೌನ್ ಬನೇಗಾ ಕರೋಡ್ ಪತಿಯಲ್ಲಿ ದಾಖಲೆ ನಿರ್ಮಿಸಿದ್ದಾರೆ.

  English summary
  Sanoj Raj wins 1 Crore in kaun banega crorepati. he faced 7 crore quetion. but, did not answered.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X