ರೋಚಕ ತಿರುವು ಪಡೆದ ಮಗಳು ಜಾನಕಿ : ಕೋರ್ಟ್ ಗೆ ಎಂಟ್ರಿ ಕೊಟ್ಟ ಸಿ ಎಸ್ ಪಿ

'ಮಗಳು ಜಾನಕಿ' ಧಾರಾವಾಹಿಗೆ ಈಗ ರೋಚಕ ತಿರುವು ಸಿಕ್ಕಿದೆ. ಹೊಸ ಅಧ್ಯಾಯ ಪ್ರಾರಂಭವಾದಾಗಿನಿಂದ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿರುವ ಮಗಳು ಜಾನಕಿ ಧಾರಾವಾಹಿಯಲ್ಲಿ ಈಗ ಕೋರ್ಟ್ ದೃಶ್ಯ ಪ್ರಾರಂಭವಾಗಿದೆ.

ಭಾರ್ಗಿಯ ಕುತಂತ್ರದ ಫಲ ಶಂಕರ್ ದೇವಘಟ್ಟ ಅರೆಸ್ಟ್ ಆಗಿದ್ದಾರೆ. ದೇವಘಟ್ಟ ಅವರನ್ನು ಅರೆಸ್ಟ್ ಮಾಡುವಂತೆ ಮಗಳು ಜಾನಕಿಗೆ ಭಾರ್ಗಿ ಸೂಚಿಸಿದ್ದರು. ಅರೆಸ್ಟ್ ಮಾಡಿಲ್ಲ ಅಂದ್ರೆ ಸಸ್ಪೆಂಡ್ ಮಾಡುವುದಾಗಿಯು ಬೆದರಿಕೆ ಹಾಕಿದ್ದರು. ಇದ್ಯಾವದಕ್ಕು ಬಗ್ಗದ ಜಾನಕಿ ಸಸ್ಪೆಂಡ್ ಆದರು ಪರವಾಗಿಲ್ಲ ಆದ್ರೆ ಅನ್ಯಾಯದ ದಾರಿಯಲ್ಲಿ ಹೋಗಲ್ಲ ಎಂದು ಖಡಕ್ ಆಗಿ ಹೇಳಿದ್ದರು.

ಆದ್ರೆ ಈ ಕೇಸನ್ನು ದೇವಘಟ್ಟದ ಡಿ ವೈ ಎಸ್ ಪಿ ಸಂತೋಷ್ ಶಾರ್ದೂಲ್ ಅವರಿಗೆ ವಹಿಸಲಾಗಿದೆ. ಸಂತೋಷ್ ಮತ್ತು ಬಾರ್ಗಿ ಇಬ್ಬರು ಕುತಂತ್ರಿಗಳೆ ಆದ್ದರಿಂದ ಶಂಕರ್ ದೇವಘಟ್ಟ ಅವರನ್ನು ಬಂಧಿಸಿ ಈಗ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಮುಂದೆ ಓದಿ..

ವ್ಯರ್ಥವಾದ ಜಾನಕಿ ಪ್ರಯತ್ನ

ವ್ಯರ್ಥವಾದ ಜಾನಕಿ ಪ್ರಯತ್ನ

ಚಂದು ಭಾರ್ಗಿ ಕುತಂತ್ರದಿಂದ ಶಂಕರ್ ಧೇವಘಟ್ಟ ಅರೆಸ್ಟ್ ಆಗಿದ್ದಾರೆ. ದೇವಘಟ್ಟ ಅವರನ್ನು ಕಾಪಾಡಲು ಜಾನಕಿ ಮಾಡಿದ ಪ್ರಯತ್ನ ವ್ಯರ್ಥವಾಗಿದೆ. ಪೊಲೀಸ್ ಆದ ನಂತರ ಮೊದಲ ಬಾರಿಗೆ ಸಿ ಎಸ್ ಪಿ ಅವರನ್ನು ಭೇಟಿಯಾಗಿ ಶಂಕರ್ ದೇವಘಟ್ಟ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ದೇವಘಟ್ಟ ಅವರನ್ನು ಬಂಧಿಸದಂತೆ ತಡೆಯಲು ಸಿ ಎಸ್ ಪಿ ಹೇಳಿದ ಪ್ಲಾನ್ ವರ್ಕೌಟ್ ಆಗಿಲ್ಲ. ಜಾನಕಿ ದೇವಘಟ್ಟಕ್ಕೆ ಹೋಗುವ ಮೊದಲೆ ಡಿ ವೈ ಎಸ್ ಪಿ ಸಂತೋಷ್ ಶಾರ್ದೂಲ್ ಶಂಕರ್ ಅವರನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋಗುತ್ತಾರೆ.

ಕೋರ್ಟ್ ಗೆ ಎಂಟ್ರಿ ಕೊಟ್ಟ ಸಿ ಎಸ್ ಪಿ

ಕೋರ್ಟ್ ಗೆ ಎಂಟ್ರಿ ಕೊಟ್ಟ ಸಿ ಎಸ್ ಪಿ

ನಿರ್ದೇಶಕ ಟಿ ಎನ್ ಸೀತಾರಾಮ್ ಧಾರಾವಾಹಿಗಳು ಕೋರ್ಟ್ ದೃಶ್ಯಗಳ ಮೂಲಕವೆ ಖ್ಯಾತಿಗಳಿಸಿವೆ. ಆದ್ರೆ ಇದೂವರೆಗೂ ಮಗಳು ಜಾನಕಿ ಧಾರಾವಾಹಿಯಲ್ಲಿ ಕೋರ್ಟ್ ದೃಶ್ಯ ತೋರಿಸಿರಲಿಲ್ಲ. ಆದ್ರೀಗ ಮೊದಲ ಬಾರಿಗೆ ಸಿ ಎಸ್ ಪಿ ಕೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕರಿ ಕೋಟು ಧರಿಸಿ ಸಿ ಎಸ್ ಪಿ ಶಂಕರ್ ದೇವಘಟ್ಟ ಪರ ವಕಾಲತ್ತು ವಹಿಸಿದ್ದಾರೆ.

ಶಂಕರ್ ದೇವಘಟ್ಟ ಪರ ಸಿ ಎಸ್ ಪಿ

ಶಂಕರ್ ದೇವಘಟ್ಟ ಪರ ಸಿ ಎಸ್ ಪಿ

ಆರೆಸ್ಟ್ ಆದ ಶಂಕರ್ ದೇವಘಟ್ಟ ಅವರನ್ನು ಕೋರ್ಟ್ ಗೆ ಹಾಜರು ಪಡಿಸಲಾಗಿದೆ. ಒಳ್ಳೆಯ ವ್ಯಕ್ತಿ ದೇವಘಟ್ಟ ಪರ ಸಿ ಎಸ್ ಪಿ ವಾದ ಮಂಡಿಸಲಿದ್ದಾರೆ. ಈಗಾಗಲೆ ಸಿ ಎಸ್ ಪಿ ಕೋರ್ಟ್ ನಲ್ಲಿ ಹಾಜರಾಗಿದ್ದಾರೆ. ಸೆ ಎಸ್ ಪಿ ಮಧ್ಯ ಪ್ರವೇಶ ಭಾರ್ಗಿ ಗಮನಕ್ಕೆ ಇನ್ನು ಬಂದಿಲ್ಲ. ಮನೆಯಲ್ಲಿ ನಗು ಬೀರುತ್ತ ಕುಳಿತಿರುವ ಭಾರ್ಗಿಗೆ ಸಿ ಎಸ್ ಪಿ ಎಂಟ್ರಿ ಕೊಟ್ಟಿದ್ದು ಗೊತ್ತಾದರೆ ಭಾರ್ಗಿ ಮತ್ತಷ್ಟು ಕೆಂಡಾಮಂಡಲವಾಗುವ ಸಾಧ್ಯತೆ ಇದೆ.

ಜಡ್ಡ್ ಆಗಿ ಕಾಣಿಸಿಕೊಂಡ ಲೇಖಕಿ ಗೀತಾ

ಜಡ್ಡ್ ಆಗಿ ಕಾಣಿಸಿಕೊಂಡ ಲೇಖಕಿ ಗೀತಾ

ಬಹಗಾರ್ತಿ ಗೀತಾ ಬಿ ಯು ಅವರಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಶಂಕರ್ ದೇವಘಟ್ಟ ಅವರ ಕೇಸ್ ಅವರ ಪ್ರಕರಣದಲ್ಲಿ ಗೀತಾ ಅವರು ಕೂಡ ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಹಿಂದೆ ಟಿ ಎನ್ ಸೀತಾರಾಮ್ ಅವರ ಮನ್ವಂತರ, ಮುಕ್ತ ಧಾರಾವಾಹಿ ಸಂದರ್ಭದಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ 'ಮುಕ್ತ' ಧಾರಾವಾಹಿಯಲ್ಲಿ ರಾಜ್ಯಾಪಲರ ಪಾತ್ರ ಹಾಗೂ 'ಮಹಾಪರ್ವ' ಧಾರಾವಾಹಿಯಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಈಗ ಮತ್ತೆ 'ಮಗಳು ಜಾನಕಿ' ಧಾರಾವಾಹಿಯಲ್ಲು ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
DYSP Santesh Shardul was arrested by Shankar Devgatta in Magalu janaki serial. Lawyer CSP entre to court to argue for Shankar deva katta.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X