TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಉದಯ ಟಿವಿಯ 'ಬ್ರಹ್ಮಾಸ್ತ್ರ'ದಲ್ಲಿ 'ಸಂತು ಮ್ಯಾರೇಜ್ ಸ್ಟೋರಿ'
ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ 'ಬ್ರಹ್ಮಾಸ್ತ್ರ' ಧಾರಾವಾಹಿ ಕುತೂಹಲ ಘಟ್ಟ ತಲುಪಿದೆ.
ಆಂಧ್ರದ ಹುಡುಗಿ ಶಿವರಂಜಿನಿ ಮನಸ್ಸನ್ನ ಗೆದ್ದಿರುವ ನಾಯಕ ಸಂತು ಹಲವು ಕಥೆ ಕಟ್ಟಿ ಅಲಮೇಲಮ್ಮನ ಮನೆಗೂ ಬಂದು ಸೇರಿರುತ್ತಾನೆ. ಇವನ ನಿಯತ್ತು ಹಾಗೂ ಗುಣವನ್ನ ಮೆಚ್ಚಿ ತನ್ನ ಮೊಮ್ಮಗಳು ಶಿವರಂಜಿನಿನ ಸಂತು ಜೊತೆ ಮದ್ವೆ ಮಾಡಿಸುವ ನಿರ್ಧಾರಕ್ಕೆ ಬರುತ್ತಾಳೆ ಅಲಮೇಲಮ್ಮ.
ನಾಯಕನ ತಾಯಿ ಅಲಮೇಲಮ್ಮನ ಸ್ವಂತ ಮಗಳಾಗಿದ್ದರೂ ಪ್ರೀತಿಸಿ ಓಡಿ ಹೋದಳೆಂಬ ಕಾರಣಕ್ಕೆ ದ್ವೇಷಿಸುತ್ತಿರುತ್ತಾಳೆ. ಹಾಗಾಗಿ ಬಾಡಿಗೆ ಅಪ್ಪ ಅಮ್ಮನನ್ನ ಕರೆತರುವ ಸಂತು ಅಲಮೇಲಮ್ಮನ ಮನೆಯಲ್ಲಿ ಅನೇಕ ಆತಂಕದ ಪರಿಸ್ಥಿತಿಯಲ್ಲೇ ಎಲ್ಲವನ್ನೂ ನಿಭಾಯಿಸಿಕೊಂಡು, ಇವಾಗ ಶಿವರಂಜಿನಿಯನ್ನ ಮನೆಯವರ ಒಪ್ಪಿಗೆ ಮೂಲಕ ಮದುವೆಯಾಗೋ ಹಂತದವರೆಗೂ ಬರುತ್ತಾನೆ.
ಆದರೆ ಮಗನ ಮದುವೆ ನೋಡಲು ಆಗುವುದಿಲ್ಲವೆಂಬ ಕೊರಗು ತಾಯಿ ಕೃಷ್ಣವೇಣಿ ಮತ್ತು ತಂದೆ ವೇಣುಗೆ ಕಾಡುತ್ತದೆ. ಅಣ್ಣನ ಮದುವೆ ನೋಡಲು ಮಗಳು ಖುಷಿ ಮನೆಗೆಲಸದವಳಾಗಿ ಹೋಗಿದ್ದಾಳೆ. ಹಿರಿ ಮಗ ಆನಂದ್ ಮದುವೆಯ ಫ್ಯಾಷನ್ ಡಿಸೈನರ್ ವೇಷದಲ್ಲಿ ಸಂತು ಶಿವರಂಜಿನಿ ಮದುವೆಗೆ ಹೋಗಿರುತ್ತಾನೆ.
ಮದುವೆ ನಡೆದರೆ ಅಪಾಯ.!
ಬೆಂಗಳೂರಿನಲ್ಲಿರುವ ನಾಯಕನ ತಂದೆ ತಾಯಿ ಮದುವೆಯಾಗುತ್ತಿರುವ ಜೋಡಿಗಳ ಜಾತಕವನ್ನ ಶಾಸ್ತ್ರಿಗಳ ಬಳಿ ತೋರಿಸಿದಾಗ, ಅವರಿಬ್ಬರೂ ಮದ್ವೆಯಾದರೆ ಮಗನಿಗೆ ಅಪಾಯ ಎದುರಾಗುವುದೆಂಬ ಭವಿಷ್ಯ ನುಡಿಯುತ್ತಾರೆ. ಹಾಗಾಗಿ ಮಗನ ಮದ್ವೆ ನಿಲ್ಲಿಸಬೇಕೆಂದು ಪಣತೊಡುತ್ತಾಳೆ ತಾಯಿ ಕೃಷ್ಣವೇಣಿ.
'ಬ್ರಹ್ಮಾಸ್ತ್ರ'ದಲ್ಲಿ ಶಿವರಾತ್ರಿ ವಿಶೇಷ: ವೀಕ್ಷಿಸಿ ಇಂದು ರಾತ್ರಿ 8ಕ್ಕೆ
ಕಿಡ್ನ್ಯಾಪ್ ಆಗುವ ಖುಷಿ
ಅತ್ತ ಮದುವೆ ಮನೆಯಿಂದ ತಂಗಿ ಖುಷಿಯನ್ನ ಯಾರೋ ಆಗಂತುಕರು ಕಿಡ್ನ್ಯಾಪ್ ಮಾಡಿ ಅವಳನ್ನ ಗುಟ್ಟಾಗಿ ಮದುವೆಯಾಗೋಕೆ ಸಿದ್ಧತೆ ನಡೆಸುತ್ತಿದ್ದಾರೆ. ಖುಷಿ ಇಲ್ಲದೇ ಮದ್ವೆ ಸಂಭ್ರಮವನ್ನ ಸಂಭ್ರಮಿಸಲು ಆಗದೇ ಶಾಸ್ತ್ರದಲ್ಲಿ ತೊಡಗಿರುವ ಸಂತು ಮತ್ತು ಶಿವರಂಜಿನಿಗೆ ಆತಂಕ.
ಉದಯ ಟಿವಿಯಲ್ಲಿ ಮೂಡಿಬರಲಿದೆ ಹೊಸ ಧಾರಾವಾಹಿ 'ಬ್ರಹ್ಮಾಸ್ತ್ರ'
ಸಂತು-ಶಿವರಂಜಿನಿ ಮದುವೆ ನಡೆಯುತ್ತಾ.?
ಒಂದು ಕಡೆ ಮದ್ವೆ ನಿಲ್ಲಿಸಬೇಕೆಂದು ತಾಯಿ ಕೃಷ್ಣವೇಣಿ ನಿರ್ಧಾರ ಮಾಡಿರುತ್ತಾಳೆ. ಮತ್ತೊಂದೆಡೆ ತಂಗಿ ಕಾಣದೆ ಕಂಗಲಾಗಿರುವ ಸಂತು. ಇವೆಲ್ಲದರ ನಡುವೆ ಶಿವರಂಜಿನಿ ಸಂತು ಮದ್ವೆ ನಡೆಯುತ್ತಾ ಅನ್ನೋದೇ ಇವತ್ತಿನ ಸಂಚಿಕೆಯ ಕುತೂಹಲ.
ಪ್ರಸಾರ ಯಾವಾಗ.?
ಕುತೂಹಲ ಘಟ್ಟ ತಲುಪಿರುವ 'ಬ್ರಹ್ಮಾಸ್ತ್ರ' ಧಾರಾವಾಹಿಯ ಈ ರೋಚಕ ತಿರುವು ನಾಳೆ (11.09.18) ರಾತ್ರಿ 8ಕ್ಕೆ ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ.