ಪ್ರಪಂಚದಲ್ಲಿ ಮದುವೆಯಾಗಲು ಹಿಂದೂ ಹುಡುಗನೇ ಸಿಕ್ಕಿದ್ನಾ ? ಧರ್ಮನಿಷ್ಠೆಯ ಪ್ರಶ್ನೆ- ತಿರುಗೇಟು ನೀಡಿದ ಬಿಗ್ ಬಾಸ್ ಸ್ಫರ್ಧಿ
ಭಾರತದಲ್ಲಿ ಸದ್ಯ ಧರ್ಮಾಧಾರಿತ ವ್ಯವಸ್ಥೆಯಲ್ಲಿ ಜನ್ಮ ಸ್ಥಾನ ಮತ್ತು ಸಮಯದಿಂದ ಹಿಡಿದು ಸಾಯುವ ತನಕ ಜಾತಿ ಮತ್ತು ಧರ್ಮ ಎಲ್ಲವನ್ನೂ ನಿಭಾಯಿಸುತ್ತೆ. ಕೋಮುದ್ವೇಷದ ಖಾಯಿಲೆ ಬೇರೆ ಎಲ್ಲ ದೇಶಕ್ಕಿಂತ ಭಾರತವನ್ನು ಹೈರಾಣು ಮಾಡಿದೆ. ಕುಂತರು, ನಿಂತರು ತಪ್ಪೆನ್ನುವ ಒಂದು ವರ್ಗ ಹುಟ್ಟುಕೊಂಡಿದೆ. ಜಾತ್ಯಾತೀತ ತತ್ವದಲ್ಲಿ ನಂಬಿಕೆ ಹೊಂದಿರುವವರನ್ನು ಕೂಡ ಧಾರ್ಮಿಕ ಮತ್ತು ಜಾತಿ ಆಧಾರಿತ ವ್ಯವಸ್ಥೆ ಪ್ರಶ್ನೆ ಮಾಡುತ್ತೆ.
ಸಮಾನತೆಯ ತತ್ವದಡಿಯಲ್ಲಿ ಸೋಷಿಯಲಿಸ್ಟ್, ಸೆಕ್ಯುಲರ್ ಡೆಮಾಕ್ರೆಟಿಕ್, ರಿಪಬ್ಲಿಕ್ ಎಂದು ಭಾರತ ಹೇಳಿದರು ಕೂಡ ವ್ಯಕ್ತಿಯ ವ್ಯೆಯಕ್ತಿಕ ನಂಬಿಕೆಗಳನ್ನು ಕೂಡ ಪ್ರಶ್ನೆ ಮಾಡಲಾಗುತ್ತೆ. ಇನ್ನೂ ಅಂತರಧರ್ಮೀಯ ಮದುವೆಯಾದರೆ ಮುಗಿದೇ ಹೋಯ್ತು. ಮಾನಸಿಕ ಕಿರುಕುಳ ನೀಡುವ ಕಿಡಿಗೇಡಿಗಳು ಸೋಶಿಯಲ್ ಮೀಡಿಯಾಗೆ ದಾಂಗುಡಿ ಇಡುತ್ತಾರೆ. ನೈತಿಕತೆ ಮತ್ತು ಧರ್ಮನಿಷ್ಠೆಯನ್ನು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಸಾರಾ ಖಾನ್ ಪಾಠಕ್ ಅವರಿಗೆ ಕಳುಹಿಸಲಾದ ಸಂದೇಶವೇ ಕೈಗನ್ನಡಿ.

ಹೌದು, ಸಾರಾ ಖಾನ್.. ಹಿಂದಿ ಕಿರುತೆರೆಯ ಪ್ರಖ್ಯಾತ ಹೆಸರು. ''ಲೈಫ್ ಓಕೆ''.. ''ಜುನೂನ್- ಐಸಿ ನಪ್‌ರಥ್ ತೋ ಕೈಸಾ ಇಷ್ಕ್''.. ''ಸಸುರಾಲ್ ಸಿಮರ್ ಕಾ''.. ಹೀಗೆ ಹಲವು ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವ ಸಾರಾಗೆ ''ಸಪ್ನಾ ಬಾಬುಲ್ ಕಾ.. ಬಿದಾಯಿ'' ಧಾರಾವಾಹಿ ಭಾರೀ ಜನಪ್ರಿಯತೆಯನ್ನು ತಂದು ಕೊಟ್ಟಿತ್ತು.
ಇಂಥಾ ಸಾರಾ ಖಾನ್ ಕಳೆದ ವರ್ಷಾಂತ್ಯದಲ್ಲಿ ಕ್ರಿಶ್ ಪಾಠಕ್ ಜೊತೆ ಮದುವೆಯಾಗಿದ್ದರು. ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯದಂತೆ ಇವರ ಮದುವೆ ನಡೆದಿತ್ತು.
ಇನ್ನು ಈ ಕ್ರಿಶ್ ಪಾಠಕ್ ಬೇರೆ ಯಾರು ಅಲ್ಲ ಬದಲಿಗೆ ರಮಾನಂದ್ ಸಾಗರ್ ಅವರ ಜಗದ್ವಿಖ್ಯಾತ ಧಾರಾವಾಹಿ ''ರಾಮಾಯಣ''ದಲ್ಲಿ ಲಕ್ಷ್ಮಣನ ಪಾತ್ರವನ್ನು ಮಾಡಿದ್ದ ಸುನೀಲ್ ಲಹ್ರಿ ಅವರ ಮಗ. ನಿರ್ಮಾಪಕನಾಗಿ ಮತ್ತು ನಟನಾಗಿ ಕೂಡ ಹೆಸರು ಮಾಡಿರುವ ಕ್ರಿಶ್ ಪಾಠಕ್ ಬೆನ್ನ ಹಿಂದೆ ''ಯೇ ಜುಕಿ ಜುಕಿ ಸಿ ನಜರ್'' ಧಾರಾವಾಹಿಯ ಖ್ಯಾತಿ ಇದೆ.
ಹೀಗೆ ಮದುವೆಯ ಬಂಧನಕ್ಕೊಳಗಾದ ಇಬ್ಬರು ಸದ್ಯ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಇವರ ನೆಮ್ಮದಿ ಕೆಡಿಸುವ ಪ್ರಯತ್ನವನ್ನು ವ್ಯಕ್ತಿಯೊಬ್ಬ ಮಾಡಿದ್ದಾನೆ. ಸದ್ಯ ಸಾರಾ ಖಾನ್ ಪಾಠಕ್ ಈ ಕಿಡಿಗೇಡಿಯ ಗ್ರಹಚಾರ ಬಿಡಿಸಿದ್ದಾರೆ.

ಹೌದು, ಇಡೀ ಪ್ರಪಂಚದಲ್ಲಿ ನಿನಗೆ ಮದುವೆಯಾಗಲು ಒಬ್ಬ ಹಿಂದೂ ವ್ಯಕ್ತಿ ಮಾತ್ರ ಸಿಕ್ಕಿದ್ನಾ? ತುಂಬಾ ನಿರಾಸೆಯಾಯಿತು. ನೀನು ಇನ್ನು ಮುಂದೆ ಮುಸ್ಲಿಂ ಅಲ್ಲ ಎಂದು ಸಾರಾ ಖಾನ್‌ಗೆ ಮೆಸೇಜ್ ಮಾಡಿರುವ ವ್ಯಕ್ತಿಯೊಬ್ಬ ನೀನು ಇನ್ನು ಮುಂದೆ ಮುಸ್ಲಿಂ ಅಲ್ಲ, ನಿನ್ನ ಹೆಸರಿನಿಂದ ಖಾನ್ ಎಂಬ ಸರ್ ನೇಮ್ ತೆಗೆದುಹಾಕು ಎಂದು ಹೇಳಿದ್ದಾನೆ.
ವ್ಯಕ್ತಿ ಕಳುಹಿಸಿದ ಈ ಹಗೆತನ ಮತ್ತು ದ್ವೇಷ ತುಂಬಿರುವ ಮೆಸೇಜ್‌ನ ಸ್ಕ್ರೀನ್ ಶಾಟ್‌ನ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ಸಾರಾ ಖಾನ್ ನಿರಾಸೆಯಾಗಿದೆಯಾ ???? ಪಾಪ.. ಆ ನಿರಾಸೆಯಲ್ಲೇ ಸತ್ತು ಹೋಗು ಎಂದು ಬರೆದುಕೊಂಡಿದ್ದಾರೆ. ನಗುವ ಎಮೋಜಿಯನ್ನು ಹಾಕಿದ್ದಾರೆ. ಈ ಮೂಲಕ ತಮ್ಮ ಬದುಕಿನ ಆಯ್ಕೆಗೆ ಸೋಶಿಯಲ್ ಮೀಡಿಯಾದಲ್ಲಿ ಕುಳಿತಿರುವ 'ಧರ್ಮ ರಕ್ಷಕರ' ಅನುಮತಿ ಬೇಕಿಲ್ಲ ಎಂಬ ಸಂದೇಶವನ್ನು ಸಾರಾ ಖಾನ್ ರವಾನೆ ಮಾಡಿದ್ಧಾರೆ.
ಸಾರಾ ಖಾನ್ ಹಂಚಿಕೊಂಡ ಸ್ಟೋರಿ ಡಿಲೀಟ್ ಆಗಿದ್ದರೂ ಕೂಡ ಸದ್ಯ ಆ ಮೆಸೇಜ್‌ನ ಸ್ಕ್ರೀನ್ ಶಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಪರ ವಿರೋಧ ಚರ್ಚೆ ನಡೆಯುತ್ತಿದೆ.
ಅಂದ್ಹಾಗೇ ಸಾರಾ ಖಾನ್‌ಗೆ ಇದು ಎರಡನೇ ಮದುವೆ. 2010ರಲ್ಲಿ ಸಾರಾ ಖಾನ್ ಹಿಂದಿ ''ಬಿಗ್ ಬಾಸ್''ನ ಸೀಸನ್ ನಾಲ್ಕರಲ್ಲಿ ಭಾಗವಹಿಸಿದಾಗ ಪ್ರೇಕ್ಷಕರನ್ನು ಸೆಳೆಯಲು ಮನೆಗೆ ಸ್ಫರ್ಧಿಗಳಾಗಿ ಬಂದ ಸಾರಾ ಖಾನ್ ಮತ್ತು ಅಲಿ ಮರ್ಚೆಂಟ್ ಅವರ ಮದುವೆಯನ್ನು ಮಾಡಿಸಲಾಗಿತ್ತು. ಇಷ್ಟೇ ಅಲ್ಲ. ಮದುವೆ ನಂತರ ಇಬ್ಬರ ಮೊದಲ ರಾತ್ರಿಗೆ ಕೂಡ ಇದೇ ''ಬಿಗ್ ಬಾಸ್'' ಮನೆ ವೇದಿಕೆಯಾಗಿತ್ತು. ಇಬ್ಬರ ಮಿಲನಕ್ಕೆ ಸೀಕ್ರೆಟ್ ರೂಮ್‌ನ ಸಿಂಗಾರ ಮಾಡಲಾಗಿತ್ತು.
ಇನ್ನುಳಿದಂತೆ ಕ್ರಿಶ್ ಪಾಠಕ್ ಮತ್ತು ಸಾರಾ ಖಾನ್ ನಡುವೆ ನಾಲ್ಕು ವರ್ಷಗಳ ವಯಸ್ಸಿನ ಅಂತರ ಇದೆ. ಸಾರಾ ಖಾನ್‌ಗೆ ಈಗ 36 ವರ್ಷವಾದರೆ ಕ್ರಿಶ್ ಪಾಠಕ್‌ಗೆ ಈಗ 32ರ ಹರೆಯ.


Click it and Unblock the Notifications