ಸರಳ ಜೀವನದಲ್ಲಿ ನಟ ಯಶ್ ಅಭಿನಯದ ಶಿವ ಧಾರವಾಹಿ

Recommended Video

ಸರಳ ಜೀವನದಲ್ಲಿ ನಟ ಯಶ್ ಅಭಿನಯದ ಶಿವ ಧಾರವಾಹಿ | FILMIBEAT KANNADA

ಕನ್ನಡದ ಇನ್‍ಫೋ-ಎಂಟರ್ಟ್ಮೇಂಟ್ ಚಾನೆಲ್ ಆಗಿರುವ ಸರಳ ಜೀವನ ಮಾರ್ಚ್ 4 ರಿಂದ 6 ಹೊಸ ಕಾರ್ಯಕ್ರಮಗಳನ್ನು ಆರಂಭಿಸುತ್ತಿದೆ. ಇದೇ ಮೊದಲ ಬಾರಿಗೆ ಫಿಕ್ಷನ್‍ಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಸರಳ ಜೀವನ ಚಾನೆಲ್ ಇತಿಹಾಸ, ಪ್ರವಾಸ, ಭಾರತೀಯ ಪರಂಪರೆ & ಸಂಸ್ಕೃತಿ ಹಾಗೂ ಪುರಾಣಗಳನ್ನು ಜನರಿಗೆ ತಲುಪಿಸುವ ಪ್ರಮುಖವಾದ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ ಮತ್ತು ಇಂತಹ ಕಾರ್ಯಕ್ರಮಗಳಿಗೆ ಖ್ಯಾತನಾಮ ಚಾನೆಲ್ ಎನಿಸಿದೆ. ಇದೀಗ ಇಂತಹ ಕಾರ್ಯಕ್ರಮಗಳ ಜತೆ ಜತೆಯಲ್ಲೇ ಫಿಕ್ಷನ್ ಆಧಾರಿತ ಕಾರ್ಯಕ್ರಮಗಳನ್ನೂ ನೀಡುವ ಮೂಲಕ ಇನ್ನೂ ಹೆಚ್ಚಿನ ವೀಕ್ಷಕರನ್ನು ತಲುಪುವ ಉದ್ದೇಶವನ್ನು ಹೊಂದಿದೆ.

ಫಿಕ್ಷನ್‍ಗಳು: ವಾರದ ದಿನಗಳಲ್ಲಿ ರಾತ್ರಿ 8 ರಿಂದ 10 ಗಂಟೆಯ ಪ್ರೈಂ ಟೈಂ ವೇಳೆಯಲ್ಲಿ 4 ಫಿಕ್ಷನ್‍ಗಳನ್ನು ಪ್ರಸಾರ ಮಾಡಲಾಗುತ್ತದೆ.

ಶಿವ: ಇದರಲ್ಲಿ ಕನ್ನಡದ ಚಿತ್ರನಟ ಯಶ ಅವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಇದೊಂದು ವ್ಯಾಪಾರ ಕುಟುಂಬದ ಆಧಾರಿತವಾದ ಕಥೆಯಾಗಿದೆ. ಇದರಲ್ಲಿ ಯಶ್ ಶ್ರೀಮಂತ ಕುಟುಂಬದ ಯುವ ವಾಣಿಜ್ಯೋದ್ಯಮಿಯಾಗಿದ್ದಾರೆ. ಈ ವಾಣಿಜ್ಯೋದ್ಯಮಿ ತನ್ನ ವ್ಯವಹಾರದೊಂದಿಗೆ ಸರಳವಾದ ಜೀವನ ಮತ್ತು ಪ್ರಕೃತಿಗೆ ಹತ್ತಿರವಾದ ಜೀವನವನ್ನು ನಡೆಸುತ್ತಾನೆ.

ಹೃದಯ ಸಾಕ್ಷಿ ಮತ್ತು ಭಾರತಿ: ಈ ಎರಡೂ ಕತೆಗಳು ಕುಟುಂಬದ ಮೌಲ್ಯ ಮತ್ತು ಭಾದ್ಯತೆಯ ಆಧಾರವಾಗಿವೆ. ಕರ್ನಾಟಕದ ಅರೆ ನಗರ ಪ್ರದೇಶದಲ್ಲಿನ ಮಧ್ಯಮ ವರ್ಗದ ಕುಟುಂಬಗಳಲ್ಲಿ ಮೌಲ್ಯ ವ್ಯವಸ್ಥೆಗೆ ಯಾವ ರೀತಿ ಮಹತ್ವವನ್ನು ನೀಡಲಾಗುತ್ತದೆ ಎಂಬುದರ ಸಾರ ಈ ಕತೆಗಳಲ್ಲಿ ಅಡಗಿದೆ.

Saral Jeevan Prime Time fiction Yash starrer Shiva Serial

ಅನುಗ್ರಹ: ಇದು ವಿವಾಹಿತ ಮಹಿಳೆಯು ಆನಂದದಿಂದ ಇರುವ ಸಂದರ್ಭದಲ್ಲಿ ಮಾನಸಿಕವಾಗಿ ಅಸ್ವಸ್ಥನಾದ ನಾಯಕನ ಹಳೆಯ ಗೆಳೆಯನ ಪ್ರವೇಶದ ಆಧಾರಿತವಾದ ಕತೆಯಾಗಿರುತ್ತದೆ.

ಮಹಾರಾಣಿ (ಶನಿವಾರ ರಾತ್ರಿ 9 ಕ್ಕೆ): ಇದೊಂದು ಇನ್‍ಫೋ & ಎಂಟರ್‍ಟೇನಿಂಗ್ ರಿಯಾಲಿಟಿ ಶೋ ಆಗಿದೆ. ಇಲ್ಲಿ ನಿರೂಪಕನು 4 ಸ್ಪರ್ಧಿಗಳಿಗೆ ಟಾಸ್ಕ್‍ಗಳನ್ನು ನೀಡಿ ಅವರೊಂದಿಗೆ ಸಂವಹನ ನಡೆಸುತ್ತಾನೆ. ಈ ಸ್ಪರ್ಧಿಗಳು ಸಿನೆಮಾ, ಟೆಲಿವಿಶನ್, ಮಾಡೆಲಿಂಗ್ ಅಥವಾ ಹೆಸರಾಂತ ಕಾಲೇಜಿನ ವಿದ್ಯಾರ್ಥಿಗಳಾಗಿರುತ್ತಾರೆ. ಈ ಟಾಸ್ಕ್‍ನಲ್ಲಿ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಗೇಮ್ಸ್ ಇರುತ್ತವೆ. ಈ ಸ್ಪರ್ಧಿಗಳಿಗೆ ಆಕರ್ಷಕವಾದ ಬಹುಮಾನಗಳಿರುತ್ತವೆ. ಇದರಲ್ಲಿ ವಿಜೇತರರಿಗೆ ವಿಶೇಷ ಬಹುಮಾನವಿರುತ್ತದೆ.

ನಮ್ ಕ್ಯಾಂಪಸ್ 2 (ಭಾನುವಾರ ರಾತ್ರಿ 8 ಗಂಟೆಗೆ): ಜನಪ್ರಿಯವಾದ ಕಾಲೇಜು ಕ್ಯಾಂಪಸ್ ಕಾರ್ಯಕ್ರಮದ ಸೀಸನ್ 2 ಆರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಇರಲಿದೆ. ಕ್ರೀಡೆ ಮತ್ತು ಫನ್ನಿ ಸ್ಪರ್ಧೆಗಳು ಇರಲಿದ್ದು, ಹೆಚ್ಚು ಹೆಚ್ಚು ಬಹುಮಾನಗಳನ್ನು ನೀಡಲಾಗುತ್ತದೆ.

ಸಿಜಿ ಪರಿವಾರ ಗ್ರೂಪ್‍ನ ಅಧ್ಯಕ್ಷರಾದ ಡಾ.ಚಂದ್ರಶೇಖರ ಗುರೂಜಿ ಅವರು ಮಾತನಾಡಿ, ಸರಳ ಜೀವನ ನಿರಂತರವಾಗಿ ಧನಾತ್ಮಕ ಮತ್ತು ಪ್ರೇರಣಾತ್ಮಕವಾದ ಕಾರ್ಯಕ್ರಮವನ್ನು ನೀಡುತ್ತಾ ಬಂದಿದೆ. ನಮ್ಮ ಈ ವಿನೂತನವಾದ ಗುರುತಿಗೆ ಫಿಕ್ಷನ್ ಅಡ್ಡಿಯಾಗುವುದಿಲ್ಲ. ಇದರ ಬದಲಾಗಿ ದೊಡ್ಡ ಮಟ್ಟದ ವೀಕ್ಷಕರಿಗೆ ಉತ್ತಮ ಸಂದೇಶವನ್ನು ನೀಡುತ್ತದೆ'' ಎಂದು ತಿಳಿಸಿದರು.

ಸರಳ ಜೀವನದ ಬ್ಯುಸಿನೆಸ್ ಹೆಡ್ ರಘುನಾಥ ರೆಡ್ಡಿ ಅವರು ಮಾತನಾಡಿ, ಇತ್ತೀಚೆಗೆ ಸರಳ ಜೀವನ 3 ವರ್ಷಗಳನ್ನು ಪೂರೈಸಿದೆ. ಇದೀಗ ಫಿಕ್ಷನ್‍ಗಳನ್ನು ಸೇರ್ಪಡೆ ಮಾಡಿರುವುದರಿಂದ ಚಾನೆಲ್‍ಗೆ ಮತ್ತಷ್ಟು ಬಲ ನೀಡಿದಂತಾಗಿದೆ. ನಮ್ಮ ಪ್ರಮುಖವಾದ ಕಾರ್ಯಕ್ರಮಗಳು ಭಾರತೀಯ ಪರಂಪರೆ & ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಮುಂದುವರಿಯುತ್ತವೆ'' ಎಂದು ತಿಳಿಸಿದರು.

More from Filmibeat

English summary
Saral Jeevan rejuvenates Prime Time with fiction. SHIVA starring noted Kannada cinema star Yash, is set on the backdrop of a business family. Where Yash plays a role of young business man of rich family, who prefers being simple and living close to the nature Vs taking care of Business Empire.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X