twitter
    For Quick Alerts
    ALLOW NOTIFICATIONS  
    For Daily Alerts

    ಅವಕಾಶಗಳ ಕೊರತೆಯಿಂದ ಡ್ರಗ್ ವ್ಯಸನಿಯಾದ ಸರಿಗಮಪ ವಿನ್ನರ್

    |

    7ನೇ ವಯಸ್ಸಿನಲ್ಲೇ ದೊಡ್ಡ ರಿಯಾಲಿಟಿ ಶೋ ಗೆದ್ದ ಹುಡುಗ ನಂತರ ಅವಕಾಶಗಳ ಕೊರತೆಯಿಂದ ಡ್ರಗ್ ವ್ಯಸನಿಯಾಗುತ್ತಾನೆ. ಆದರೆ, ಮತ್ತೆ ಸಂಗೀತಕ್ಕಾಗಿ ಕೆಟ್ಟ ಚಟವನ್ನು ದೂರ ಮಾಡುತ್ತಾನೆ. ಹೊಸ ಬದುಕು ಶುರು ಮಾಡುತ್ತಾನೆ.

    Recommended Video

    Sa Ri Ga Ma Pa 16 : ಕನ್ನಡದ ತಂಟೆಗೆ ಬರಬೇಡಿ..! | FILMIBEAT KANNADA

    ಇದು ಯಾವುದೇ ಸಿನಿಮಾದ ಕಥೆಯಲ್ಲ. ಸರಿಗಮಪ ಕಾರ್ಯಕ್ರಮ ಗೆದ್ದ ಹುಡುಗನ ಜೀವನದ ಕಥೆ. ಹಿಂದಿಯ ಜನಪ್ರಿಯ ಕಾರ್ಯಕ್ರಮವನ್ನು 2011 ಗೆದ್ದ ಹುಡುಗ ಅಜ್ಮತ್ ಹುಸೇನ್. ಈತ ಈಗ ಮತ್ತೊಂದು ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಬಂದಿದ್ದಾನೆ. ಈ ಮೂಲಕ ಮತ್ತೆ ತನ್ನ ಗಾಯನ ಪ್ರಯಾಣ ಪ್ರಾರಂಭ ಮಾಡುತ್ತಿದ್ದಾನೆ.

    ನಿಶ್ಚಿತಾರ್ಥ ಮಾಡಿಕೊಂಡ 'ರಾಧಾ ಕಲ್ಯಾಣ' ಕುವರಿ ರಾಧಿಕಾ ರಾವ್ನಿಶ್ಚಿತಾರ್ಥ ಮಾಡಿಕೊಂಡ 'ರಾಧಾ ಕಲ್ಯಾಣ' ಕುವರಿ ರಾಧಿಕಾ ರಾವ್

    ಕೇವಲ 18 ವರ್ಷದ ಈ ಹುಡುಗ ತನ್ನ ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದಾನೆ. ಸಾಕಷ್ಟು ಕಷ್ಟದ ದಿನಗಳನ್ನು ಅನುಭವಿಸಿ, ಈಗ ಹೊಸ ಭರವಸೆಯಿಂದ ಭವಿಷ್ಯದ ಹೆಜ್ಜೆ ಇಟ್ಟಿದ್ದಾನೆ.

    'ಇಂಡಿಯನ್ ಐಡಲ್ 11' ಕಾರ್ಯಕ್ರಮಕ್ಕೆ ಬಂದ ಅಜ್ಮತ್

    'ಇಂಡಿಯನ್ ಐಡಲ್ 11' ಕಾರ್ಯಕ್ರಮಕ್ಕೆ ಬಂದ ಅಜ್ಮತ್

    18 ವರ್ಷದ ಬಾಲಕ ಅಜ್ಮತ್ ಹುಸೇನ್ 'ಇಂಡಿಯನ್ ಐಡಲ್' ರಿಯಾಲಿಟಿ ಶೋ ಆಡಿಷನ್ ನಲ್ಲಿ ಭಾಗಿಯಾಗಿದ್ದಾನೆ. ಕಾರ್ಯಕ್ರಮಕ್ಕೆ ಬಂದ ಆತನನ್ನು ತೀರ್ಪುಗಾರ್ತಿ ನೇಹಾ ಕಕ್ಕರ್ ಗುರುತು ಹಿಡಿದರು. ನಂತರ ಉಳಿದ ತೀರ್ಪುಗಾರರು ಆತನ ಬಗ್ಗೆ ಕೇಳಿದಾಗ, ತನ್ನ ಹಿಂದಿನ ಕತ್ತಲ ದಿನದ ಬಗ್ಗೆ ಮಾತನಾಡಿದ.

    ಅವಕಾಶಗಳ ಕೊರತೆಯಿಂದ ಡ್ರಗ್ ವ್ಯಸನೆ

    ಅವಕಾಶಗಳ ಕೊರತೆಯಿಂದ ಡ್ರಗ್ ವ್ಯಸನೆ

    ಅಜ್ಮತ್ ಹುಸೇನ್ 2001 ರಲ್ಲಿ ಸರಿಗಮಪ ಕಾರ್ಯಕ್ರಮ ಗೆದ್ದರು. ಶಾರೂಖ್ ಖಾನ್ ಕೂಡ ಅಜ್ಮತ್ ಗಾಯನವನ್ನು ಹೊಗಳಿದರು. ಯಶಸ್ಸಿನ ಅಲೆಯಲ್ಲಿಯೇ ಆ ಹುಡುಗ ಅನೇಕ ಕಾರ್ಯಕ್ರಮಗಳನ್ನು ನೀಡಿದ. ಆದರೆ, ಆ ಕಾರ್ಯಕ್ರಮಗಳಿಂದ ತನ್ನ ಮನೆಯ ಹಣಕಾಸಿನ ಅಗತ್ಯಗಳನ್ನು ಪೂರೈಸಿಸಲು ಆಗಲಿಲ್ಲ. ಮನೆಯ ಪರಿಸ್ಥಿತಿ ಇನ್ನಷ್ಟು ಬಿಗಿಯಾಯ್ತು.

    ಅನುಬಂಧ ಅವಾರ್ಡ್ 2019: ಜನ ಮೆಚ್ಚಿದ ನಾಯಕ-ನಾಯಕಿ ಯಾರು?ಅನುಬಂಧ ಅವಾರ್ಡ್ 2019: ಜನ ಮೆಚ್ಚಿದ ನಾಯಕ-ನಾಯಕಿ ಯಾರು?

    ಕೈ ಕೊಟ್ಟ ಅಜ್ಮತ್ ಧ್ವನಿ

    ಕೈ ಕೊಟ್ಟ ಅಜ್ಮತ್ ಧ್ವನಿ

    ವರ್ಷಗಳು ಉರುತ್ತಿದ್ದ ಹಾಗೆ ಅಜ್ಮತ್ ಧ್ವನಿ ಬದಲಾಯಿತು. ಅವರ ಧ್ವನಿಯಲ್ಲಿ ಇದ್ದ ಮಾಧುರ್ಯತೆ ಕಳೆದುಹೋಯ್ತು. ಅದೇ ಸಮಯಕ್ಕೆ ಅಕ್ಕ ಪಕ್ಕದ ಜನ ಕೂಡ ನಿನ್ನ ಕತೆ ಮುಗಿತು ಎಂದು ಹೇಳಲು ಶುರು ಮಾಡಿದರು. ಅಜ್ಮತ್ ಗೆ ಧ್ವನಿ ಬದಲಾವಣೆಯಿಂದ ಯಾವುದೇ ಅವಕಾಶ ಸಿಗಲಿಲ್ಲ. ಹಾಡುವುದು ಇರಲಿ, ಹಾಡನ್ನು ಕೇಳುದನ್ನು ಕೂಡ ಆ ಹುಡುಗ ಬಿಟ್ಟ. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾದ ಅಜ್ಮತ್ ಡ್ರಗ್ ಮೊರೆ ಹೋದ.

    ಕೆಟ್ಟ ಚಟ ಬಿಟ್ಟು, ಹೊಸ ಜೀವನ ಆರಂಭ

    ಕೆಟ್ಟ ಚಟ ಬಿಟ್ಟು, ಹೊಸ ಜೀವನ ಆರಂಭ

    ಡ್ರಗ್ಸ್ ನಿಂದ ತನ್ನ ಜೀವನ ಹಣ ಎರಡು ಹಾಳಾಯ್ತು ಎಂದು ಅಜ್ಮತ್ ಅರಿವಿಗೆ ಬಂತು. ಇದೀಗ ಈ ಹುಡುಗ ಮತ್ತೆ ಸಿಂಗಿಂಗ್ ಕಾರ್ಯಕ್ರಮ ಮೂಲಕ ಹೊಸ ಜೀವನ ಪ್ರಾರಂಭ ಮಾಡಲು ಬಂದಿದ್ದಾನೆ. 'ಇಂಡಿಯನ್ ಐಡಲ್ 11' ಕಾರ್ಯಕ್ರಮದ ಸ್ಪರ್ಧಿಯಾಗಿದ್ದಾನೆ. ಅಜ್ಮತ್ ನಿರ್ಧಾರ ತೀರ್ಪುಗಾರರಿಗೂ ಇಷ್ಟ ಆಗಿದ್ದು, ಅಜ್ಮತ್ ಸ್ಫೂರ್ತಿಯ ಮಾತುಗಳನ್ನು ಹೇಳಿದ್ದಾನೆ. ಜೀವನದ ಪಾಠವೇ ಮುಗಿಯಿತು ಎಂದುಕೊಂಡಿದ್ದ ಈ ಯುವಕ ಈಗ ಪುಟ ತಿರುಗಿಸಿದ್ದಾನೆ.

    English summary
    Saregamapa 11 winner spoke about his struggling days.
    Tuesday, October 15, 2019, 19:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X