'ಸರಿಗಮಪ ಸೀಸನ್ 15' ರ ಸ್ಪರ್ಧಿ ಈಗ ಕಿರುತೆರೆಯ ಬೇಡಿಕೆಯ ನಟಿ; ಯಾರೀ ನಟಿ?
ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳ ಪೈಕಿ 'ಸರಿಗಮಪ'ವೂ ಒಂದು. 'ಸರಿಗಮಪ ಸೀಸನ್ 15' ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಶೈನಿ ಪೆರೇರಾ ಇದೀಗ ನಟಿಯಾಗಿ ಬಡ್ತಿ ಪಡೆದಿದ್ದಾರೆ. ಸುಮಧುರ ಗಾಯನದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಶೈನಿ ಪೆರೇರಾ ಇದೀಗ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಗೀತಾ' ಧಾರಾವಾಹಿಯಲ್ಲಿ ವೈಜಯಂತಿಯಾಗಿ ನಟಿಸುತ್ತಿದ್ದಾರೆ ಶೈನಿ ಪೆರೇರಾ.
'ಗೀತಾ' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಮೋಡಿ ಮಾಡುತ್ತಿರುವ ಶೈನಿ ಪೆರೇರಾ ಬಣ್ಣದ ಲೋಕದ ನಂಟು ಶುರುವಾಗಿದ್ದು 'ಮೂರುಗಂಟು' ಧಾರಾವಾಹಿಯ ಮೂಲಕ. 'ಮೂರುಗಂಟು' ಧಾರಾವಾಹಿಯಲ್ಲಿ ಗಾನವಿ ಎನ್ನುವ ಪಾತ್ರಕ್ಕೆ ಜೀವ ತುಂಬಿದ ಈಕೆ ಅಕ್ಷರಶಃ ಖಳನಾಯಕಿಯಾಗಿಯೇ ಕಾಣಿಸಿಕೊಂಡರು ಎಂದರೆ ತಪ್ಪಾಗಲಾರದು.

ತದ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆಕಾಶದೀಪ' ಧಾರಾವಾಹಿಯಲ್ಲಿ ನಟಿಸಿದ್ದರು. ನಾಯಕಿಯ ಚಿಕ್ಕಮ್ಮ ಅರ್ಥಾತ್ ಮಲತಾಯಿ ಮಗಳು ಮಂಜರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶೈನಿ ಪೇರೆರಾ ಖಳನಾಯಕಿಯಾಗಿ ಅಬ್ಬರಿಸಿದ್ದರು. "ಮತ್ತೊಮ್ಮೆ ನಟಿಯಾಗಿ ಕಾಣಿಸುತ್ತಿದ್ದೇನೆ. ಅದು ಕೂಡಾ ವಿಲನ್ ಆಗಿ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಇರಲಿ ಅಂಥ ಕೇಳಿಕೊಳ್ತೇನೆ. ತಪ್ಪದೇ ವೀಕ್ಷಿಸಿ"ಎಂದು ಅವರು ಆ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸುಂದರಿ' ಧಾರಾವಾಹಿಯಲ್ಲಿ ನಮ್ರತಾ ಆಗಿ ಕಾಣಸಿಕೊಂಡ ಶೈನಿ ಸಂಪೂರ್ಣ ಪಾಸಿಟಿವ್ ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸಿದ್ದರು. ಹೌದು, ನಾಯಕನ ಪ್ರೇಯಸಿಯಾಗಿ ನಟಿಸಿದ್ದ ಈಕೆ ಧಾರಾವಾಹಿ ಯುದ್ದಕ್ಕೂ ಪಾಸಿಟಿವ್ ಆಗಿ ಕಾಣಿಸಿಕೊಂಡಿದ್ದರು. ಮುಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ತ್ರಿಪುರ ಸುಂದರಿ' ಧಾರಾವಾಹಿಯಲ್ಲಿ ಫ್ಯಾಷನ್ ಡಿಸೈನರ್ ಅನ್ಯಾ ಆಗಿ ಅಭಿನಯಿಸಿದ್ದ ಈಕೆ ಅಲ್ಲಿಯೂ ಕಾಣಿಸಿಕೊಂಡಿದ್ದು ಪಾಸಿಟಿವ್ ರೋಲ್‌ನಲ್ಲಿ.
ಇದೀಗ ಮತ್ತೊಮ್ಮೆ ಖಳನಾಯಕಿಯಾಗಿ ಕಿರುತೆರೆಯಲ್ಲಿ ಕಮಾಲ್ ಮಾಡಿದ ಶೈನಿ ಪೆರೇರಾ ವೈಜಯಂತಿ ಪಾತ್ರದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಶೈನಿ ಪೆರೇರಾ ಡ್ಯಾನ್ಸ್ ರಿಯಾಲಿಟಿ ಶೋವಿನಲ್ಲೂ ಗುರುತಿಸಿಕೊಂಡ ಬೆಡಗಿ. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನಲ್ಲಿ ಗಾಯಕ ಹನುಮಂತು ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು.

ಒಟ್ಟಿನಲ್ಲಿ ಸರಿಗಮಪ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟು, ಮುಂದೆ ನಟಿಯಾಗಿ ಭಡ್ತಿ ಪಡೆದಿರುವ ಶೈನಿ ಪರೇರಾ ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿರುವುದು ನಿಜ. ಮಾತ್ರವಲ್ಲ, ಮುಂದೊಂದು ದಿನ ಈಕೆ ಹಿರಿತೆರೆಯಲ್ಲಿ ಕಾಣಿಸಿಕೊಂಡರೆ ಆಶ್ವರ್ಯವೇನೂ ಇಲ್ಲ.


Click it and Unblock the Notifications











