»   » ಸರಿಗಮಪ ಮತ್ತು ಕಾಮಿಡಿ ಕಿಲಾಡಿಗಳ ಮಹಾಸಂಗಮ

ಸರಿಗಮಪ ಮತ್ತು ಕಾಮಿಡಿ ಕಿಲಾಡಿಗಳ ಮಹಾಸಂಗಮ

Posted By:
Subscribe to Filmibeat Kannada

ಜೀ ಕನ್ನಡದಲ್ಲಿ ಪ್ರಸಾರವಾಗುವ 'ಸರಿಗಮಪ' ಕಳೆದ ಹದಿನಾಲ್ಕು ಸೀಸನ್ ಗಳಿಂದ ತನ್ನದೆ ಒಂದು ಸ್ಥಾನವನ್ನ ಉಳಿಸಿಕೊಂಡಿದೆ. ಜೊತೆಗೆ ಕಳೆದ ವರ್ಷವಷ್ಟೇ ಮೊದಲ ಸೀಸನ್ ಗೆ ಹೆಜ್ಜೆ ಇಟ್ಟು ಹೊಸ ಪ್ರಯೋಗ ಮತ್ತು ಹೊಸ ಪ್ರಯತ್ನದ ಕಾರ್ಯಕ್ರಮ 'ಕಾಮಿಡಿ ಕಿಲಾಡಿಗಳು' ಕೋಟ್ಯಾಂತರ ಕನ್ನಡಿಗರ ಮನಸಲ್ಲಿ ಮತ್ತು ಮುಖದಲ್ಲಿ ನಗುವನ್ನ ಮೂಡಿಸಿ ಖುಷಿ ಪಡಿಸುವುದರಲ್ಲಿ ಯಶಸ್ಸಾಗಿದೆ.

ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳ ಪಟ್ಟಿಯಲ್ಲಿ ಈ ಎರಡು ಕಾರ್ಯಕ್ರಮಗಳು ಟಾಪ್ ಮತ್ತು ಟಾಕ್ ಆಗಿದೆ.. ಈ ಎರಡೂ ಕಾರ್ಯಕ್ರಮಗಳು ಒಂದಾದ ನಂತರ ಒಂದು ಪ್ರತಿ ವಾರ ಪ್ರಸಾರವಾಗಿದ್ದು, ಎರಡರಲ್ಲೂ ಅಷ್ಟೇ ಮನರಂಜನೆ ತುಂಬಿರುತಿತ್ತು.

'ಸರಿಗಮಪ ಲಿಟಿಲ್ ಚಾಂಪ್ಸ್ ಸೀಸನ್ 14' ಇನ್ನೇನು ಎರಡೇ ವಾರದಲ್ಲಿ ಫಿನಾಲೆ ವೇದಿಕೆಗೆ ತಲುಪಲಿದೆ. 'ಕಾಮಿಡಿ ಕಿಲಾಡಿಗಳು' ಇನ್ನಷ್ಟು ವಾರಗಳು ಮನರಂಜಿಸಕ್ಕೆ ರೆಡಿಯಾಗೆ ಇದ್ದಾರೆ. ಒಂದು ಕಾರ್ಯಕಮ ಮುಗಿಯುವ ಸಲುವಾಗಿ "ಲಿಟಿಲ್ ಚಾಂಪ್ಸ್'ಗಳ ಜೊತೆ ಕಾಮಿಡಿ ಕಿಲಾಡಿಗಳೂ ಒಂದಾಗಿ ವೇದಿಕೆಯನ್ನ ಈ ವಾರ ಹಂಚಿಕೊಂಡು "ಮಹಾಸಂಗಮ" ಸ್ಪೆಷಲ್ ಎಪಿಸೋಡ್ಸ್ ರೆಡಿಯಾಗಿದೆ.

saregamapa and comedy kiladigalu Mahasangama episode

ಕಾರ್ಯಕ್ರಮದ ವಿಶೇಷಗಳು
ಎಲ್ಲಾ ಲಿಟಿಲ್ ಚಾಂಪ್ಸ್ ಜೋಡಿ ಜೋಡಿ ಹಾಡಿದ್ದ್ರು, ಸೀಸನ್ 12ನ ವಿನ್ನರ್ ಅನ್ವಿತ ಗೆಸ್ಟ್ ಆಗಿ ಇವರೊಂದಿಗೆ ಸೇರಿ ಒಂದು ಹಾಡನ್ನಾ ಹಾಡಿದ್ದ್ರು, ಎಂದಿನಂತೆ ಪುಟಾಣಿ ನೇಹಾಳ ಕ್ಯೂಟ್ ವಾಯ್ಸ್ ವೇದಿಕೆಯಲ್ಲಿ ಸುಂಟರಗಾಳಿ ಎಬ್ಬಿಸಿದ್ದು, ಅದಕ್ಕೆ ಸ್ಟೆಪ್ ಹಾಕಿದ ರಕ್ಷಿತ ಮತ್ತು ಎಲ್ಲಾ ಜ್ಯೂರಿ ಲೇಡಿಸ್ ಪ್ಯಾನೆಲ್, ವೆದಿಕೆಗೆ ಒಂದು ಕಳೆ ತಂದಿತು.

ನಾದಬ್ರಹ್ಮ ಹಂಸಲೇಖ ರವರ ಮಾತು, ಉಳಿದ ಜಡ್ಜಸ್ಗಳ ಕಮೆಂಟ್ಸ್ ಮತ್ತು ಗಿಮಿಕ್ಸ್ ಗಳು ಕಾರ್ಯಕ್ರಮಕ್ಕೆ ಸ್ಪೆಷಲ್. ಎಲ್ಲಾ ಕಾಮಿಡಿ ಕಿಲಾಡಿಗಳು ಒಂದು ದೊಡ್ಡ ಸ್ಕಿಟ್ ನಲ್ಲಿ ಇಡಿ "ಸರಿಗಮಪ ಲಿಟಿಲ್ ಚಾಂಪ್ಸ್" ಕಾರ್ಯಕ್ರಮದ ತೆರೆ ಹಿಂದೆ ನಡೆಯುವ ನೈಜ ವಿಷವನ್ನ ವೇದಿಕೆಗೆ ಹಾಸ್ಯವಾಗಿ ತಂದಿದ್ದು 'ಲಿಟಿಲ್ ಚಾಂಪ್ಸ್' ಕಾರ್ಯಕ್ರಮದ ಪ್ರತಿಯೊಬ್ಬ ಕಂಟೆಸ್ಟಂಟ್ಸ್, ಜಡ್ಜಸ್, ಆಂಕರ್ ಅನುಶ್ರೀ ಮತ್ತು ತಂತ್ರಜ್ಞರ ಎಲ್ಲಾ ಪಾತ್ರದಾರಿಗಳನ್ನ ವೇದಿಕೆಯಲ್ಲಿ ನೋಡಿದ್ದು, ಅವರವರ ಪಾತ್ರಗಳನ್ನ ನೋಡಿ ನಕ್ಕಿದ್ದು, ಖುಷಿಪಟ್ಟಿದ್ದು ಇಡಿ ಕಾರ್ಯಕ್ರಮದಲ್ಲಾದ ಹೈಲೈಟ್.

saregamapa and comedy kiladigalu Mahasangama episode

ಆಂಕರ್ ಅನುಶ್ರೀಗೆ ಮದ್ವೆ ಆದ್ದ್ರೆ ಅವರು ಆಂಕರ್ ಮಾಡ್ತಾರ..? ಮದ್ವೆ ಆಗ್ತಾರ? ಅನ್ನೊ ಸ್ಕಿಟ್ ಬಹಳ ಮಜವಾಗಿ, ತಮಾಷೆಯಾಗಿ ಕಾಮಿಡಿ ಕಿಲಾಡಿಗಳು ವೇದಿಕೆ ಮೇಲೆ ತಂದಿದ್ದು ಮತ್ತೊಂದು ವಿಷೇಶ.

saregamapa and comedy kiladigalu Mahasangama episode

ಒಟ್ಟು 26 ಪ್ರತಿಭೆಗಳು, 2 ಕಾರ್ಯಕ್ರಮಗಳು, 2 ಕಾರ್ಯಕ್ರಮಗಳ ಜಡ್ಜಸ್ಗಳು, 2 ಆಂಕರ್ಸ್ಗಳು. 2 ಕಾರ್ಯಕ್ರಮದ ಟೆಕ್ನಿಷಿಯನ್ಸ್ ಕೂಡಾ "ಸಂಗಮ"ವಾಗಿ ಈ ವಾರ ಒಂದೇ ವೇದಿಕೆಯಲ್ಲಿ "ಹಾಸ್ಯ ಮತ್ತು ಹಾಡು"ಗಳನ್ನಾ ಸಮಾಗಮವಾಗಿ ಹಂಚಿ ಸಂಭ್ರಮಿಸಿ "ಮಹಾಸಂಗಮ"ವಾದರು. ಈ ಕಾರ್ಯಕ್ರಮ ಇದೇ ಶನಿ ಮತ್ತು ಭಾನುವಾರ ಸಂಜೆ 7.30ಕ್ಕೆ ಪ್ರಸಾರವಾಗಲಿದೆ.

English summary
Zee Kannada Popular Programmes saregamapa and comedy kiladigalu Mahasangama episode will air at may 12th and 13th.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X