For Quick Alerts
  ALLOW NOTIFICATIONS  
  For Daily Alerts

  ಸೆಪ್ಟೆಂಬರ್ 18ರಿಂದ ಸರಿಗಮಪ ಚಾಂಪಿಯನ್ ಶಿಪ್ ಪ್ರಾರಂಭ

  |

  ಕನ್ನಡದ ಅತ್ಯಂತ ಜನಪ್ರಿಯ ವಾಹಿನಿ ಜೀ ಕನ್ನಡ ಇದೀಗ ಸರಿಗಮಪ ಚಾಂಪಿಯನ್ ಶಿಪ್ ಗೆ ಚಾಲನೆ ನೀಡಿದೆ. 17 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿದ ಸರಿಗಮಪ ಚಿತ್ರರಂಗಕ್ಕೆ ಅಪರೂಪದ ಗಾಯನ ಪ್ರತಿಭೆಗಳನ್ನು ನೀಡಿದೆ. ಇದೀಗ ಚಾಂಪಿಯನ್ ಶಿಪ್ ಗೆಲ್ಲಲು 36 ಮಂದಿ ಸ್ಪರ್ಧಿಗಳ ನಡುವೆ ತೀವ್ರ ಹಣಾಹಣಿ ನಡೆಯಲಿದ್ದು ಸಂಗೀತದ ವಿಶ್ವರೂಪ ಅನಾವರಣಗೊಳ್ಳಲಿದೆ .

  ಸೆಪ್ಟೆಂಬರ್ 18ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಸರಿಗಮಪ ಚಾಂಪಿಯನ್ ಶಿಪ್ ವೀಕ್ಷಕರನ್ನು ರಂಜಿಸಲಿದೆ. ಈ ಚಾಂಪಿಯನ್ ಶಿಪ್ ಕದನದಲ್ಲಿ ಈಗಾಗಲೇ ತಮ್ಮ ಪ್ರತಿಭೆಯಿಂದ ಕರ್ನಾಟಕದ ಮನೆಮಾತಾಗಿರುವ ಪುತ್ತೂರಿನ ಅಖಿಲಾ ಪಜಿಮಣ್ಣು, ಅಂಕಿತಾ ಕುಂದು, ಬೆಂಗಳೂರಿನ ಪೃಥ್ವಿ ಭಟ್, ನೇಹಾ ಶಾಸ್ತ್ರಿ, ಧಾರವಾಡದ ಜ್ಞಾನೇಶ್ವರ, ಬೆಂಗಳೂರಿನ ಕೀರ್ತನ್ ಹೊಳ್ಳ, ಹಾವೇರಿಯ ಹನುಮಂತ ಲಮಾಣಿ, ಮೈಸೂರಿನ ವಿಜೇತ್,, ಅಶ್ವಿನ್ ಶರ್ಮಾ, ಸೇರಿದಂತೆ ಒಟ್ಟು 36 ಹಾಡುಗಾರರಿರಲಿದ್ದಾರೆ.

  ಮಹಿಳೆಯರು ಬೆಡ್ ರೂಮ್, ಬಾತ್ ರೂಮ್‌ನಲ್ಲಿ ಹಾಗೆ...ಹೊರಗೆ ಹೀಗೆ!ಮಹಿಳೆಯರು ಬೆಡ್ ರೂಮ್, ಬಾತ್ ರೂಮ್‌ನಲ್ಲಿ ಹಾಗೆ...ಹೊರಗೆ ಹೀಗೆ!

  ಕರ್ನಾಟಕದ ಹೆಸರಾಂತ ಸಂಗೀತಗಾರರಾದ ನಂದಿತಾ, ಹೇಮಂತ್, ಅನುರಾಧಾ ಭಟ್, ಡಾ .ಸುಚೇತನ್ ರಂಗಸ್ವಾಮಿ, ಲಕ್ಷ್ಮೀ ನಾಗರಾಜ್ ಮತ್ತು ಇಂದು ನಾಗರಾಜ್ ಅವರು ಮೆಂಟರ್ ಗಳಾಗಿರುವುದಲ್ಲದೇ 6 ಚಾಂಪಿಯನ್ನರ ತಂಡಗಳಿಗೆ ಮಾರ್ಗದರ್ಶಕರು ಆಗಿರುತ್ತಾರೆ, ಈ 6 ತಂಡಗಳ ನಡುವೆ ಸಂಗೀತ ಸಮರ ನಡೆಯುತ್ತದೆ.

  ಎಂದಿನಂತೆ ಮಹಾಗುರು ಹಂಸಲೇಖ ಅವರೊಂದಿಗೆ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ತೀರ್ಪುಗಾರರಾಗಿರುತ್ತಾರೆ. ಅನುಶ್ರೀ ತಮ್ಮ ಲವಲವಿಕೆಯ ಮಾತಿನ ನಿರೂಪಣೆಯಿಂದ ಕಾರ್ಯಕ್ರಮದ ಕಳೆ ಹೆಚ್ಚಿಸುತ್ತಾರೆ.

  ಈ ಬಾರಿಯ ವರ್ಣರಂಜಿತ ಸರಿಗಮಪ ಚಾಂಪಿಯನ್ ಶಿಪ್ ವೇದಿಕೆ ಸಿಂಫೊನಿ ರೀತಿಯ 40 ಬಗೆಯ ವಾದ್ಯಗೋಷ್ಠಿ ಹೊಂದಿದ್ದು ಕನ್ನಡ ಕಿರುತೆರೆಯಲ್ಲೇ ಪ್ರಥಮ ಪ್ರಯತ್ನವಾಗಿದೆ. ಮತ್ತೊಂದು ವಿಶೇಷವೆಂದರೆ ಕರ್ನಾಟಕದ ಅಚ್ಚುಮೆಚ್ಚಿನ ಈ ಕಾರ್ಯಕ್ರಮವನ್ನು ಜೀ ವಾಹಿನಿ ತಾಯಿ ಶಾರದಾಂಬೆಗೆ ಅರ್ಪಿಸುತ್ತಿದೆ .

  Saregamapa Championship starts from September 18th

  ಸರಿಗಮಪ ಕಾರ್ಯಕ್ರಮ ಜೀ ಕನ್ನಡಕ್ಕೆ ಕಿರೀಟದಂತಿದ್ದು 15 ವರ್ಷಗಳ ಯಶಸ್ವಿ 17ಸೀಸನ್ ಗಳ ಫಲವಾಗಿ 36 ಘಟಾನುಘಟಿ ಹಾಡುಗಾರರು ಸಂಗೀತ ಸಮರದಲ್ಲಿದ್ದಾರೆ. ಉತ್ತಮರನ್ನು ಅತ್ಯುತ್ತಮರನ್ನಾಗಿಸಲು ಕರ್ನಾಟಕದ 6 ಅತ್ಯದ್ಭುತ ಸಂಗೀತಗಾರರು ಮೆಂಟರ್ ಗಳಾಗಿ ಜೊತೆಯಾಗಿದ್ದಾರೆ .ಹಿಂದೆದೂ ಕಂಡಿರದ ನಾದಲೋಕ ಸೃಷ್ಟಿಸಲು ಭಾರತದ 40 ಶ್ರೇಷ್ಟ ವಾದ್ಯಗಾರರ ಕೈಚಳಕವಿರಲಿದೆ. ತಾಂತ್ರಿಕ, ಭಾವನಾತ್ಮಕ, ಸವಿನೆನಪುಗಳ ಜೊತೆಗೆ ಸಂಗೀತಮಯವಾಗಿ ಸರಿಗಮಪ ಚಾಂಪಿಯನ್ ಶಿಪ್ ವೇದಿಕೆ ಶ್ರೀಮಂತವಾಗಿರಲಿದೆ. ರಾಘವೇಂದ್ರ ಹುಣಸೂರು - ಜೀ ಕನ್ನಡ ಹಾಗೂ ಜೀ ಪಿಚ್ಚರ್ ಬ್ಯುಸಿನೆಸ್ ಹೆಡ್

  ಇದೇ ಸೆಪ್ಟೆಂಬರ್ 18ರಿಂದ ಶನಿವಾರ ಮತ್ತು ಭಾನುವಾರ ಸಂಜೆ ರಾತ್ರಿ 7.30ಕ್ಕೆ ಸರಿಗಮಪ ಚಾಂಪಿಯನ್ ಶಿಪ್ ವೀಕ್ಷಕರನ್ನು ರಂಜಿಸಲು ಬರುತ್ತಿದೆ ನಿಮ್ಮ ಜೀ ಕನ್ನಡದಲ್ಲಿ.

  English summary
  Zee Kannada Popular singing reality show Saregamapa Championship starts from September 18th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X