For Quick Alerts
  ALLOW NOTIFICATIONS  
  For Daily Alerts

  ಹನುಮಂತ ಫೈನಲ್ ಗೆ ಬಂದರೂ ಅಣ್ಣನಿಗೆ ಬೇಸರವಿದೆ!

  |

  ಈ ಬಾರಿಯ ಸರಿಗಮಪ ಕಾರ್ಯಕ್ರಮ ಫೈನಲ್ ಹಂತಕ್ಕೆ ಬಂದಿದೆ. ನಾಳೆ ಸಂಜೆ 6 ಗಂಟೆಗೆ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಪ್ರಸಾರ ಆಗುತ್ತಿದೆ.

  ಆರು ಸ್ಪರ್ಧಿಗಳು ಕಾರ್ಯಕ್ರಮದ ಅಂತಿಮ ಹಂತಕ್ಕೆ ಬಂದಿದ್ದಾರೆ. ಫೈನಲ್ ವೇದಿಕೆ ಮೇಲೆ ಹನುಮಂತ ಕೂಡ ಹಾಡುತ್ತಿದ್ದಾನೆ. ಹಾವೇರಿ ಜಿಲ್ಲೆಯ ಸಣ್ಣ ಹಳ್ಳಿಯಿಂದ ಬಂದ ಹನುಮಂತ ಫೈನಲ್ ಗೆ ಆಯ್ಕೆ ಆಗಿ ಎಲ್ಲರಿಗೆ ಅಚ್ಚರಿ ಮೂಡಿಸಿದ್ದಾನೆ.

  ಫೈನಲ್ ತಲುಪಿದ ಹನುಮಂತಣ್ಣನಿಗೆ ಸಿಕ್ಕಿತು ವಿಶೇಷ ಉಡುಗೊರೆ

  ಕಾರ್ಯಕ್ರಮದ ಮೂಲಕ ಹನುಮಂತನಿಗೆ ಒಳ್ಳೆಯ ಹೆಸರು ಬಂದಿದೆ. ಇಡೀ ಕರ್ನಾಟಕದ ತುಂಬ ಆತ ಫೇಮಸ್ ಆಗಿದ್ದಾನೆ. ಎಲ್ಲ ಇದ್ದರೂ ಹನುಮಂತನ ಅಣ್ಣ ಮಾರುತಿಗೆ ಒಂದು ವಿಚಾರದ ಬಗ್ಗೆ ಬೇಸರವಿದೆ.

  ಇತ್ತೀಚಿಗಷ್ಟೆ ಸುದ್ದಿ ವಾಹಿನಿಯೊಂದು ಹನುಮಂತನ ಊರಿಗೆ ಹೋಗಿ ಒಂದು ವಿಶೇಷ ಕಾರ್ಯಕ್ರಮ ಮಾಡಿತ್ತು. ಈ ವೇಳೆ ವಾಹಿನಿಯ ಜೊತೆಗೆ ಮಾತನಾಡಿದ ಮಾರುತಿ ತಮ್ಮ ಬೇಸರವನ್ನು ಹೊರಹಾಕಿದರು. ಮುಂದೆ ಓದಿ...

  ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ

  ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ

  ಹನುಮಂತ ಸರಿಗಮಪ ಕಾರ್ಯಕ್ರಮದ ಫೈನಲ್ ಗೆ ಬಂದಿರುವುದು ಅಣ್ಣ ಮಾರುತಿಗೆ ಸಹ ಖುಷಿ ನೀಡಿದೆ. ಅಪಾರ ಅಭಿಮಾನಿಗಳು, ದೊಡ್ಡ ಜನಪ್ರಿಯತೆ ಪಡೆದ ತಮ್ಮನ ಬಗ್ಗೆ ಮಾರುತಿಗೆ ಹೆಮ್ಮೆ ಇದೆ. ಆದರೆ, ಹನುಮಂತನ ಬಗ್ಗೆ ಅನೇಕರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರಂತೆ. ಈ ವಿಷಯವಾಗಿ ಅವರಿಗೆ ಬೇಸರಗೊಂಡಿದ್ದಾರೆ.

  ಈ ಆರು ಜನರಲ್ಲಿ 'ಸರಿಗಮಪ-15' ಫೈನಲ್ ಗೆಲ್ಲೋದು ಯಾರು?

  ಏನದು ಸುಳ್ಳು ಸುದ್ದಿ ?

  ಏನದು ಸುಳ್ಳು ಸುದ್ದಿ ?

  'ಸೀತಾರಾಮ ಕಲ್ಯಾಣ' ಚಿತ್ರದ ಕಾರ್ಯಕ್ರಮ ಮಂಡ್ಯದಲ್ಲಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಹನುಮಂತ ಕೂಡ ಭಾಗಿಯಾಗಿದ್ದ. ಈ ಕಾರ್ಯಕ್ರಮದಲ್ಲಿ ಹಾಡು ಹೇಳಿದ್ದಕ್ಕೆ ಆತನಿಗೆ ಐದು ಲಕ್ಷ ರೂಪಾಯಿ ಹಾಗೂ ಒಂದು ಕಾರು ಕೊಟ್ಟಿದ್ದಾರೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರಂತೆ. ಇದು ಅಣ್ಣನಿಗೆ ಅಸಮಾಧಾನ ಉಂಟು ಮಾಡಿದೆ.

  ಸಿಎಂ ನೀಡಿದ್ದು 25 ಸಾವಿರ

  ಸಿಎಂ ನೀಡಿದ್ದು 25 ಸಾವಿರ

  ನಿಖಿಲ್ ನಟನೆಯ 'ಸೀತಾರಾಮ ಕಲ್ಯಾಣ' ಚಿತ್ರದ ಕಾರ್ಯಕ್ರಮದಲ್ಲಿ ಹಾಡಿದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಹನುಮಂತನಿಗೆ ಹಣ ನೀಡಿದ್ದಾರೆ. ಅವರು ಪ್ರೀತಿಯಿಂದ ಒಬ್ಬ ಬಡ ಕಲಾವಿದನಿಗಾಗಿ 25 ಸಾವಿರ ರೂಪಾಯಿಯನ್ನು ನೀಡಿದ್ದಾರಂತೆ. ಆದರೆ, ಕೆಲವರು ಇದನ್ನು 5 ಲಕ್ಷ ಹಾಗೂ ಕಾರು ಅಂತ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರಂತೆ.

  ಟ್ರೋಫಿ ಗೆಲ್ಲುತ್ತಾನಾ ಹನುಮಂತ?

  ಟ್ರೋಫಿ ಗೆಲ್ಲುತ್ತಾನಾ ಹನುಮಂತ?

  ಸರಿಗಮಪ ಫೈನಲ್ ಗೆ ಹೋಗಿರುವ ಹನುಮಂತ ಗೆಲ್ಲಬೇಕು ಎನ್ನುವುದು ಅವರ ಕುಟುಂಬದ ಹಾಗೂ ಊರಿನವರ ಆಸೆಯಾಗಿದೆ. ಅಂತಿಮ ಹಂತದಲ್ಲಿ ನಿಹಾಲ್, ಹೃತ್ವಿಕ್, ಸಾದ್ವಿನಿ, ಕೀರ್ತನ್, ವಿಜೇತ್ ಹಾಗೂ ಹನುಮಂತನ ನಡುವೆ ಪೈಪೋಟಿ ನಡೆಯುತ್ತಿದೆ. ಯಾರು ಈ ಬಾರಿಯ ವಿನ್ನರ್ ಎನ್ನುವುದಕ್ಕೆ ನಾಳೆ ಉತ್ತರ ಸಿಗಲಿದೆ.

  English summary
  Zee kannada channel popular reality show Saregamapa season 15 finalist singer Hanumantha's brother maruthi unhappy with the rumors. Hanumantha got 25 thousand rupees CM Kumaraswamy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X