ಮತ್ತೊಂದು ರಿಯಾಲಿಟಿ ಶೋಗೆ ಎಂಟ್ರಿಯಾದ 'ಸರಿಗಮಪ' ಹನುಮಂತ
ಜೀ-ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಅನೇಕ ಗಾಯಕರನ್ನ ಪರಿಚಯಿಸಿದೆ. ಈ ಶೋ ಮೂಲಕ ಬೆಳಕಿಗೆ ಬಂದ ಪ್ರತಿಭೆಗಳು ಇಂದು ಸ್ಯಾಂಡಲ್ ವುಡ್ ಮತ್ತು ಬೇರೆ ಇಂಡಸ್ಟ್ರಿಯಲ್ಲಿ ಜೀವನ ಕಂಡುಕೊಂಡಿದ್ದಾರೆ.
ಸರಿಗಮಪ 15ನೇ ಆವೃತ್ತಿಯಲ್ಲಿ ಬೆಳಕಿಗೆ ಬಂದ ಪ್ರತಿಭೆ ಹನುಮಂತ. ಫಿನಾಲೆವರೆಗೂ ಬಂದಿದ್ದ ಹನುಮಂತ ರನ್ನರ್ ಅಪ್ ಆಗಿದ್ದರು. ಹೀಗೆ ಸರಿಗಮಪ ವೇದಿಕೆಯಲ್ಲಿ ಅಬ್ಬರಿಸಿ ಬೊಬ್ಬರಿದಿದ್ದ ಹನುಮಂತ ಶೋ ಮುಗಿದ ಮೇಲೆ ಸೂಪರ್ ಸ್ಟಾರ್ ಆಗಿದ್ದರು.
ಇದೀಗ, ಈ ಹನುಮಂತ ಮತ್ತೆ ನಿಮ್ಮ ಮುಂದೆ ಬರ್ತಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನೂತನ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಹನುಮಂತ ಸ್ಪರ್ಧಿಯಾಗಿ ಕಣಕ್ಕೆ ಇಳಿಯುತ್ತಿದ್ದಾರೆ. ಹನುಮಂತನ ಜೊತೆ ಒಬ್ಬ ಪಾರ್ಟ್ನರ್ ಕೂಡ ಇದ್ದಾರೆ. ಅಷ್ಟಕ್ಕೂ, ಆ ಶೋ ಯಾವುದು? ಹನುಮಂತನ ಆ ಜೋಡಿ ಯಾರು? ಮುಂದೆ ಓದಿ....

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಹನುಮಂತ
ವೀಕೆಂಡ್ ವಿತ್ ರಮೇಶ್ ನಾಲ್ಕನೇ ಆವೃತ್ತಿ ಮುಗಿಯುತ್ತಿದ್ದಂತೆ ಆ ಸಮಯಕ್ಕೆ ಇನ್ನೊಂದು ರಿಯಾಲಿಟಿ ಶೋ ಆಗಮನವಾಗಿದೆ. ಮೊದಲನೇ ಅವೃತ್ತಿ ಮೂಲಕ ಜನಮನ ಗೆದ್ದಿದ್ದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎರಡನೇ ಆವೃತ್ತಿ ಆರಂಭವಾಗುತ್ತಿದೆ. ಈ ಶೋನಲ್ಲಿ ಸರಿಗಮಪ ಖ್ಯಾತಿಯ ಹನುಮಂತ ಕೂಡ ಸ್ಪರ್ಧಿಯಾಗಿದ್ದಾರೆ.

ಸಿಂಗರ್ ಈಗ ಡ್ಯಾನ್ಸರ್
ಸರಿಗಮಪ ಕಾರ್ಯಕ್ರಮದಲ್ಲಿ ಗಾಯಕರಾಗಿದ್ದ ಹನುಮಂತ ಈಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಡ್ಯಾನ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಹಳ್ಳಿ ಹುಡುಗ, ಮುಗ್ದ ಮನಸ್ಸು, ಮೃದು ಮಾತು, ಜಾನಪದ ಹೆಜ್ಜೆ ಹೀಗೆ ಸರಿಗಮಪ ವೇದಿಕೆಯಲ್ಲಿ ನೋಡಿದ ಹನುಮಂತ ಈಗ ಎಲ್ಲ ರೀತಿಯ ಡ್ಯಾನ್ಸ್ ನಲ್ಲೂ ನೋಡುವ ಅವಕಾಶ ಸಿಕ್ಕಿದೆ.

ಹನುಮಂತನ ಜೋಡಿ ಯಾರು?
ಅಂದ್ಹಾಗೆ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಹನುಮಂತನಿಗೆ ಜೋಡಿಯೂ ಇದ್ದಾರೆ. ಸರಿಗಮಪ 15ನೇ ಆವೃತ್ತಿಯಲ್ಲಿ ಹನುಮಂತನ ಸಹಸ್ಪರ್ಧಿಯಾಗಿದ್ದ ಶೈನಿ, ಈಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಜೋಡಿಯಾಗಿದ್ದಾರೆ.

ಉಳಿದಂತೆ ಯಾರೆಲ್ಲಾ ಇದ್ದಾರೆ?
ಅನಿಖಾ (ಕಮಲಿ) ಮತ್ತು ಪ್ರೀಥಮ್ (ಪಾರು)
ವಿಕಿ (ಗಟ್ಟಿಮೇಳ) ಮತ್ತು ಅದಿತಿ (ಗಟ್ಟಿಮೇಳ)
ಪ್ರಶಾಂತ್ (ಆತ್ಮ ಬಂಧನ) ಮತ್ತು ನೇತ್ರ (ಆತ್ಮ ಬಂಧನ)
ಸುಬ್ಬು (ಬ್ರಹ್ಮಗಂಟು) ಮತ್ತು ಪ್ರಣತಿ (ಬ್ರಹ್ಮಗಂಟು)
ಸೂರಜ್ (ಕಾಮಿಡಿ ಕಿಲಾಡಿಗಳು ಸೀಸನ್ 2) ಮತ್ತು ಮಿಂಚು (ಕಾಮಿಡಿ ಕಿಲಾಡಿಗಳು ಸೀಸನ್ 2)
ಬರ್ಕಾತ್ ಅಲಿ (ಕಾಮಿಡಿ ಕಿಲಾಡಿಗಳು ಸೀಸನ್ 2) ಮತ್ತು ನಿಂಗಿ (ಕಮಲಿ)
ಲೋಕೇಶ್ (ಕಾಮಿಡಿ ಕಿಲಾಡಿಗಳು ಸೀಸನ್ 1) ಮತ್ತು ಮಂಥನಾ (ಕಾಮಿಡಿ ಕಿಲಾಡಿಗಳು ಸೀಸನ್ 2)
ವಿವೇಕ್ (ಮಹಾದೇವಿ) ಮತ್ತು ಹಿರಣ್ಮಯಿ (ಮಹಾದೇವಿ)
ಅನೂಪ್ (ಡ್ರಾಮಾ ಜೂನಿಯರ್ಸ್ ಸೀಸನ್ 3) ಮತ್ತು ಡಿಂಪಾನಾ (ಡ್ರಾಮಾ ಜೂನಿಯರ್ಸ್ ಸೀಸನ್ 3)
ಪ್ರೇಕ್ಷಿತ್ (ಡ್ರಾಮಾ ಜೂನಿಯರ್ಸ್ ಸೀಸನ್ 3) ಮತ್ತು ಅನ್ವಿಶಾ (ಡ್ರಾಮಾ ಜೂನಿಯರ್ಸ್ ಸೀಸನ್ 3)
ನಂದಿತಾ (ಜೋಡಿಹಕ್ಕಿ) ಮತ್ತು ಅನುಪಮಾ (ಜನಪ್ರಿಯ ಆಂಕರ್)


Click it and Unblock the Notifications











