ಮಧುರ ಕಂಠದಿಂದ ಸರಿಗಮಪ ಗೆದ್ದಿದ್ದ ಪ್ರಗತಿ ಬಡಿಗೇರ್ SSLCಯಲ್ಲಿ ಗಳಿಸಿದ ಅಂಕವೆಷ್ಟು?
ಕರ್ನಾಟಕದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಕೂಡ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಕೆಲ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆದುಕೊಂಡಿದ್ದಾರೆ. ಔಟ್ ಆಫ್ ಔಟ್ ಅಂಕ ಪಡೆದ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ. ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳ ಸಂಭ್ರಮದಲ್ಲಿ ಇನ್ನೂ ಮುಗಿದಿಲ್ಲ.
2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದವರಲ್ಲಿ ಕೆಲ ವಿದ್ಯಾರ್ಥಿಗಳು ವಿಶೇಷ ಗಮನ ಸೆಳೆದಿದ್ದಾರೆ. ಅವರಲ್ಲಿ ಜೀ ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋ ಸರಿಗಮಪ ಸೀಸನ್ 19ರ ವಿಜೇತೆ ಪ್ರಗತಿ ಬಡಿಗೇರ್ ಕೂಡ ಒಬ್ಬರು. ಎಸ್‌ಎಸ್‌ಎಲ್ ಪರೀಕ್ಷೆಯನ್ನು ಬರೆದಿದ್ದ ಪ್ರಗತಿ ಬಡಿಗೇರ್ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ತಮ್ಮ ಅಂಕಪಟ್ಟಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಸರಿಗಮಪ ಕನ್ನಡದ ಸೀಸನ್ 19ರ ವಿನ್ನರ್ ಪ್ರಗತಿ ಬಡಿಗೇರ್ ಮೂಲತ: ಬಾಗಲಕೋಟೆ ಜಿಲ್ಲೆಯ ಬದಾಮಿಯವರು. ಪ್ರಗತಿ ಬಡಿಗೇರ್ ಜೀ ಕನ್ನಡದ ಸರಿಗಮಪ 19ಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಶೋನಲ್ಲಿ ಪ್ರಗತಿ ತಮ್ಮ ಧ್ವನಿಯಿಂದ ಗಮನ ಸೆಳೆದಿದ್ದರು. ಇವರ ಗಾಯನಕ್ಕೆ ಕಿರುತೆರೆ ವೀಕ್ಷಕರು ಮೆಚ್ಚಿ ಹೊಗಳಿಕೊಂಡಾಡಿದ್ದರು. ಈಗ ಪ್ರಗತಿ ಬಡಿಗೇರ್ ಬರೀ ಗಾಯನದಲ್ಲಿ ಅಷ್ಟೇ ಅಲ್ಲ. ಓದಿನಲ್ಲೂ ಎತ್ತಿದ ಕೈ ಅನ್ನೋದನ್ನು ತೋರಿಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ ರಾಜ್ಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದಿತ್ತು. ಆವೇಳೆ ಪ್ರಗತಿ ಬಡಿಗೇರ್ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅವರು ಪಡೆದ ಅಂಕಗಳ ಪಟ್ಟಿಯನ್ನು ಹಂಚಿಕೊಂಡು ಖುಷಿ ಪಟ್ಟಿದ್ದಾರೆ. ಮಗಳ ಮಾರ್ಕ್ ಲಿಸ್ಟ್ ಅನ್ನು ತಂದೆ ಬಸವರಾಜ್ ಬಡಿಗೇರ್ ಈ ಅಂಕ ಪಟ್ಟಿಯನ್ನು ಶೇರ್ ಮಾಡಿ ಮಗಳ ಸಾಧನೆಯನ್ನು ಕೊಂಡಾಡಿದ್ದರು. ಅವರ ಅಭಿಮಾನಿಗಳು ಹಾಗೂ ಫಾಲೋವರ್ಸ್ ಕೂಡ ಪ್ರಗತಿ ಬಡಿಗೇರ್ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಅಂದ್ಹಾಗೆ ಪ್ರಗತಿ ಬಡಿಗೇರ್‌ಗೆ ಎಸ್‌ಎಸ್‌ಎಲ್‌ಸಿಯಲ್ಲಿ ಬಂದ ಅಂಕಗಳು ಎಷ್ಟು ಅನ್ನೋದನ್ನು ನೋಡುವುದಾರೇ, ಕನ್ನಡ ಭಾಷೆಯಲ್ಲಿ 109 ಅಂಕ, ಇಂಗ್ಲಿಷ್‌ನಲ್ಲಿ 93, ಹಿಂದಿ ಭಾಷೆಯಲ್ಲಿ 99 ಅಂಕಗಳು, ಗಣಿತದಲ್ಲಿ 70 ಅಂಕಗಳು, ವಿಜ್ಞಾನದಲ್ಲಿ 78 ಅಂಕಗಳು, ಸಮಾಜ ವಿಷಯದಲ್ಲಿ 71 ಅಂಕಗಳನ್ನು ಪಡೆದಿದ್ದಾರೆ. ಒಟ್ಟು 625 ಅಂಕಗಳಿಗೆ 520 ಅಂಗಳನ್ನು ಪಡೆದು ಶೇ.83.20 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಈ ಮೂಲಕ ಬಹುಮುಖ ಪ್ರತಿಭೆ ಅನ್ನೋದನ್ನು ಪ್ರಗತಿ ಬಡಿಗೇರ್ ಸಾಬೀತು ಮಾಡಿದ್ದಾರೆ.

ಗ್ರಾಮೀಣ ಪ್ರತಿಭೆಯಾಗಿ ಪ್ರಗತಿ ಬಡಿಗೇರ್ ಗಾಯನದಲ್ಲೂ ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ಇವರಿಗೆ ತಂದೆಯೇ ಗುರು. ಬಸವರಾಜ ಬಡಿಗೇರ್ ಕೂಡ ಗಾಯಕರಾಗಿದ್ದಾರೆ.
ತಂದೆಯಿಂದಲೇ ಸಂಗೀತ ಪಾಠವನ್ನು ತಿಳಿದುಕೊಂಡಿದ್ದರು. ಜೀ ಕನ್ನಡದ ಸರಿಗಮಪದಂತಹ ವೇದಿಕೆ ಏರಿ ದಿಗ್ಗಜರ ಮುಂದೆ ಹಾಡಿದ್ದರು. ಇವರ ಧ್ವನಿಗೆ ಸರಿಗಮಪದ ಜಡ್ಜ್‌ಗಳು ಕೂಡ ಫಿದಾ ಆಗಿದ್ದರು. ಹಂತ ಹಂತವಾಗಿ ಕಿರುತೆರೆ ವೀಕ್ಷಕರ ಮನಸ್ಸನ್ನು ಗೆದ್ದಿದ್ದರು.
ಸರಿಗಮಪದಲ್ಲಿ ಪ್ರಗತಿ ಬಡಿಗೇರ್ ಇಂದು ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಹಾಡುಗಳನ್ನು ಹಾಡಿದ್ದರು. ಪ್ರಗತಿ ಹಾಡಿದ ಎಲ್ಲಾ ಹಾಡುಗಳಿಗೂ ಮೆಚ್ಚುಗೆ ಸಿಕ್ಕಿತ್ತು. ದೇಸಿ ಪ್ರತಿಭೆ ಮೆಚ್ಚುಗೆ ಸೂಚಿಸಿದ್ದರು. ಇನ್ನು ತಂದೆ ಬಸವರಾಜ ಬಡಿಗೇರ್ ಅವರಿಗೆ ಮೂವರು ಮಕ್ಕಳು. ಇವರು ತಮ್ಮ ಮೂವರು ಮಕ್ಕಳಿಗೂ ಸಂಗೀತವನ್ನು ಕಲಿಸಿದ್ದಾರೆ. ತಂದೆಯ ಆಸೆಯನ್ನು ಪ್ರಗತಿ ಬಡಿಗೇರ್ ಓದಿನಲ್ಲೂ, ಸಂಗೀತದಲ್ಲೂ ಈಡೇರಿಸಿದ್ದಾರೆ.


Click it and Unblock the Notifications











