ಸರಿಗಮಪ ಲಿಟಲ್ ಚಾಂಪ್ ಸೀಸನ್ 19 ಗೆದ್ದ ಮೂವರಿಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು?

By ಎಸ್ ಸುಮಂತ್

ಸರಿಗಮಪ ಲಿಟಲ್ ಚಾಂಪ್ ಸೀಸನ್ 19 ಶುರುವಾದಾಗಿನಿಂದ ಅದ್ಭುತ ಮನರಂಜನೆಯನ್ನು ನೀಡಿತ್ತು. ಅದರ ಜೊತೆಗೆ ಹೊಸ ಹೊಸ ಇಂಪಾದ ಕಂಠಗಳನ್ನು ಪರಿಚಯ ಮಾಡಿಕೊಟ್ಟಿದೆ ಜೀ ಕನ್ನಡ. ಹಳ್ಳಿಯಿಂದ, ನಗರದಿಂದಾನೂ ಸಂಗೀತ ಕಲಾದೇವಿಯನ್ನು ಒಲಿಸಿಕೊಂಡಿರುವ ಪ್ರತಿಭೆಗಳು ಈ ವೇದಿಕೆ ಮೇಲೆ ನಿಂತು ಸರಾಗವಾಗಿ ಹಾಡುತ್ತಿದ್ದರು.

ಸ್ಪರ್ಧಿಗಳಿಗೆ ಅಂತಾನೇ ಬಿಗ್ ಸಿಂಗರ್‌ಗಳನ್ನು ಮೆಂಟರ್ ಆಗಿ ನೇಮಕ ಮಾಡಿದ್ದರು. ಸ್ಪರ್ಧಿಗಳನ್ನು ಆಯಾ ವಾರಕ್ಕೆ ತಕ್ಕಂತೆ ರೆಡಿ ಮಾಡಬೇಕಿತ್ತು. ಸಂಗೀತದ ತರಬೇತಿ ನೀಡಬೇಕಿತ್ತು. ಮೆಂಟರ್ಸ್‌ ಪರಿಶ್ರಮವೂ ಕೂಡ ಇಂದಿನ ಫೈನಲ್ ತಲುಪುವುದಕ್ಕೆ ಕಾರಣವಾಗಿದೆ. ಅವರ ಪರಿಶ್ರಮವೂ ಇದರಲ್ಲಿ ಅಡಗಿದೆ.

SAREGAMAPA Lil Champ season 19 Winners Pragathi,Thanushri Shivani Prize Amount Details

ಮೂವರ ನಡುವೆ ಏರ್ಪಟ್ಟಿತ್ತು ಸ್ಪರ್ಧೆ

ಯಾವುದೇ ಸ್ಪರ್ಧಾ ಕಾರ್ಯಕ್ರಮವಾಗಲೀ ಮೊದ ಮೊದಲಿಗೆ ಅಷ್ಟಾಗಿ ಏನು ಭಯ ಎನಿಸಲ್ಲ. ಪ್ರತಿ ಸ್ಪರ್ಧಿಗಳ ಎದುರು ನಮಗೆ ಹೆಚ್ಚಿನ ಅಂಕ ಬರಬೇಕೆಂದು ಮಾತ್ರ ಪಣತೊಡುತ್ತಾರೆ. ದಿನ ಕಳೆದಂತೆ ಸ್ಪರ್ಧೆ ಸ್ಟ್ರಾಂಗ್ ಆಗುತ್ತಾ ಹೋಗುತ್ತದೆ. ಸರಿಗಮಪ ಲಿಟಲ್ ಚಾಂಪ್ ಸೀಸನ್ 19 ಕೂಡ ಅಷ್ಟೇ. ಶುರುವಾದ ಹೊಸದರಲ್ಲಿ ಸಾಕಷ್ಡು ಮಂದಿ ಹಾಡುಗಾರರಿದ್ದರು. ಬಳಿಕ ಹಲವರು ಔಟ್ ಆಗಿ, ಗ್ರ್ಯಾಂಡ್ ಫಿನಾಲೆಗೆ ಉಳಿದುಕೊಂಡಿದ್ದು, ಶಿವಾನಿ, ತನುಶ್ರೀ, ಪ್ರಗತಿ ಮಾತ್ರ. ಈ ಮೂವರು ಕೊನೆಯಲ್ಲೂ ಹಾಡು ಹಾಡಿ ಮನರಂಜಿಸಿದರು. ಕೊಪ್ಪಳದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಗೆ ಜನರೆಲ್ಲರೂ ಸಾಕ್ಷಿಯಾಗಿದ್ದರು.

ಫೈನಲ್ ರೌಂಡ್‌ನಲ್ಲಿ ಅದ್ಭುತ ಹಾಡುಗಾರಿಕೆ

ಫಿನಾಲೆ ಎಂದಾಕ್ಷಣ ಒಂದಷ್ಟು ಭಯ ಇದ್ದೆ ಇರುತ್ತದೆ. ಗೆಲುವಿನ ಚಿಂತೆ ಶುರುವಾಗಿರುತ್ತದೆ. ಪ್ರತಿ ದಿನ ಹಾಡಿದಂತೆ ಸುಸೂತ್ರವಾಗಿ ಹಾಡುವುದಕ್ಕೆ ಆ ಭಯ ಬಿಡುವುದಿಲ್ಲ. ಆದರೂ ಇವತ್ತಿನ ಮೂರು ಸ್ಪರ್ಧಿಗಳು ಎಲ್ಲರೂ ತಲೆದೂಗುವಂತೆ ಹಾಡಿದರು. ಶಿವಶಂಕರಿ ಹಾಡನ್ನು ಹಾಡಿ ತನುಶ್ರೀ ಎಲ್ಲರೂ ಮೈನರೆಯುವಂತೆ ಮಾಡಿದರು. ಹಾಗೇ ಮಹಾಪ್ರಾಣ ದೀಪಂ ಹಾಡು ಹಾಡಿ ಶಿವಾನಿ ಎಲ್ಲರೊಳಗೂ ಭಕ್ತಿ ಹೆಚ್ಚಿಸಿದರು. ಇನ್ನು ಪ್ರಗರಿ ಬಡಿಗೇರ್ ಜಯಗೌರಿ ಜಗದೀಶ್ವರಿ ಹಾಡು ಹಾಡಿದ್ದರು.

SAREGAMAPA Lil Champ season 19 Winners Pragathi,Thanushri Shivani Prize Amount Details

ಶಿವಾನಿ ಗೆದ್ದಿದ್ದು ಎಷ್ಟು..?

ಸರಿಗಮಪ ಲಿಟಲ್ ಚಾಂಪ್ ಸೀಸನ್ 19ರ ರನ್ನರ್ ಅಪ್ ಆಗಿ ಶಿವಾನಿ ಹೊರ ಹೊಮ್ಮಿದ್ದಾರೆ. ಮಹಾಪ್ರಾಣ ದೀಪಂ ಹಾಡನ್ನು ಶಿವಾನಿ ಹಾಡ್ತಾ ಇದ್ರೆ, ಒಂದು ಕ್ಷಣ ಮಹಾಗುರುಗಳು ಸೇರಿದಂತೆ ಜಡ್ಜ್‌ಗಳು ಮೂಕ ವಿಸ್ಮಿತರಾಗಿದ್ದರು. ಸದ್ಯ ರನ್ನರ್ ಅಪ್ ಆಗಿರುವಂತ ಶಿವಾನಿಗೆ ಸಿಕ್ಕಿದ್ದು, 20 ಲಕ್ಷ ಕ್ಯಾಶ್ ಪ್ರೈಸ್, ಜೊತೆಗೆ ಒಂದಷ್ಟು ಗಿಫ್ಟ್ ಹ್ಯಾಂಪರ್ಸ್ ಸಿಕ್ಕಿದೆ. ಈ ವೇಳೆ ಮಾತನಾಡಿದ ಶಿವಾನಿ, "ತುಂಬಾ ಖುಷಿ ಆಗ್ತಾ ಇದೆ. ಎಲ್ಲರಿಗೂ ಥ್ಯಾಂಕ್ಸ್. ಎಲ್ಲಾ ಮೆಂಟರ್ಸ್ ಗೂ ಥ್ಯಾಂಕ್ಸ್" ಎಂದಿದ್ದಾರೆ.

ಸೆಕೆಂಡ್ ರನ್ನರ್ ಅಪ್ ಆದ ತನುಶ್ರೀ

ತನುಶ್ರೀ ಕೂಡ ಎಲ್ಲರಿಗೂ ಸಮಾನವಾಗಿ ಸ್ಪರ್ಧೆ ನೀಡಿದ್ದಾರೆ. ಫೈನಲ್ ರೌಂಡ್‌ಗೆ ಬಂದು ಸೆಕೆಂಡ್ ರನ್ನರ್ ಅಪ್ ಆಗಿದ್ದಾರೆ. ಮಂಗಳೂರಿನ ಅದ್ಭುತ ಕಂಠಕ್ಕೆ ಸಿಕ್ಕಿದ್ದು ಐದು ಲಕ್ಷ ಬೆಲೆಯ ವಾಹನ ಮತ್ತು ಐದು ಲಕ್ಷ ಕ್ಯಾಶ್ ಜೊತೆಗೆ ಟ್ರೋಫಿ ಸೇರಿದಂತೆ ಹಲವು ಗಿಫ್ಟ್ ಸಿಕ್ಕಿದೆ. ಈ ವೇಳೆ ಮಾತನಾಡಿದ ತನುಶ್ರೀ, "ತುಂಬಾ ಖುಷಿ ಆಗ್ತಾ. ಮೆಗಾ ಆಡಿಷನ್‌ನಿಂದ ಫೈನಲ್ ತನಕ ಬಂದಿದ್ದು" ಎಂದಿದ್ದಾರೆ.

More from Filmibeat

English summary
Zee Kannada Reality Show SAReGAMAPA Lil Champ season 19 Written Update on April 16th episode. Here is the details about grand finale prizes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X